Dina Bhavishya
ವರ್ಷದ ಭವಿಷ್ಯ | ವೃಷಭ ರಾಶಿ – 2025

CHITRADURGA NEWS | 01 JUNUARY 2025
ವೃಷಭ ರಾಶಿ: ಈ ರಾಶಿಯ ಉದ್ಯೋಗಸ್ಥರಿಗೆ ಧನಲಾಭ ಮತ್ತು ನಿರುದ್ಯೋಗಿಗಳಿಗೆ ಉನ್ನತ ಹುದ್ದೆಗಳು ದೊರೆಯುತ್ತವೆ. ಟೀಕೆಗಳು ಎದುರಾದರೂ ಅವುಗಳನ್ನು ನಿರ್ವಹಿಸಿ ಮುಂದುವರಿಯುತ್ತೀರಿ. ಮೌಲ್ಯದ ವಸ್ತುಗಳನ್ನು ಖರೀದಿಸಲಾಗುತ್ತದೆ. ಹೊಸ ಗೃಹ ಲಾಭ ಮತ್ತು ವಸ್ತು ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶವಿದೆ. ಸ್ತ್ರೀಯರಿಗೆ ವಿಶೇಷ ಆರ್ಥಿಕ ಲಾಭ ಮತ್ತು ವಸ್ತು ಲಾಭ ದೊರೆಯುತ್ತದೆ. ಅಲ್ಪ ಅನಾರೋಗ್ಯದ ಲಕ್ಷಣಗಳಿದ್ದರೂ ಶೀಘ್ರವಾಗಿ ಹೊರಬರುತ್ತೀರಿ, ವಿದೇಶ ಪ್ರಯಾಣ ಕೂಡಿಬರುತ್ತದೆ, ಹೊಸ ಮನೆಯಲ್ಲಿ ಶುಭ ಕಾರ್ಯಗಳನ್ನು ನಿರ್ವಹಿಸುತ್ತೀರಿ. ಹೊಸ ಪರಿಚಯಗಳು ಲಾಭದಾಯಕವಾಗಿರುತ್ತವೆ. ವ್ಯಾಪಾರಸ್ಥರು ವಿಶೇಷ ಲಾಭವನ್ನು ಪಡೆಯುತ್ತಾರೆ. ರಾಜಕಾರಣಿಗಳಿಗೆ ಉತ್ತಮ ಸಮ . ಎಲ್ಲಾ ಕ್ಷೇತ್ರಗಳಿಗೂ ಈ ವರ್ಷ ಕೂಡಿ ಬರುತ್ತದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ ವ್ಯವಸಾಯದಲ್ಲಿ ವಿಶೇಷ ಲಾಭ ದೊರೆಯುತ್ತದೆ.
ಜನವರಿ

ಈ ತಿಂಗಳು ಮಿಶ್ರ ಫಲಿತಾಂಶಗಳನ್ನು ಹೊಂದಿರುತ್ತದೆ. ಆರ್ಥಿಕ ಪರಿಸ್ಥಿತಿಯು ಸ್ಥಿರವಾಗಿರುತ್ತದೆ. ಹೊಸ ಕೆಲಸಗಳನ್ನು ಪ್ರಾರಂಭಿಸಲು ಅನುಕೂಲಕರ ಸಮಯ. ಇತರರೊಂದಿಗೆ ಜಾಗರೂಕರಾಗಿರಿ. ಖರ್ಚು ವೆಚ್ಚಗಳು ಹೆಚ್ಚಾಗಿರುತ್ತವೆ. ಕೆಲವು ವ್ಯವಹಾರಗಳಲ್ಲಿ ಸ್ನೇಹಿತರ ಸಹಕಾರ ದೊರೆಯುತ್ತದೆ. ದೈವಿಕ ದರ್ಶನಗಳನ್ನು ಪಡೆಯುತ್ತೀರಿ. ಶುಭ ಕಾರ್ಯಗಳ ಪ್ರಯತ್ನಗಳು ಕೂಡಿ ಬರುತ್ತವೆ.
ಫೆಬ್ರವರಿ
ಈ ತಿಂಗಳು ಅನುಕೂಲಕರವಾಗಿರುವುದಿಲ್ಲ. ವೃತ್ತಿಪರ ಉದ್ಯೋಗಗಳಲ್ಲಿ ಸ್ಥಾನ ಚಲನೆಗಳಿರುತ್ತವೆ . ಮಕ್ಕಳಿಗೆ ಆರೋಗ್ಯ ಸಮಸ್ಯೆಗಳಿರುತ್ತವೆ. ತಿಂಗಳ ಮಧ್ಯದಲ್ಲಿ ಒಂದು ಶುಭ ಸುದ್ದಿಯು ಸಂತೋಷವನ್ನು ತರುತ್ತದೆ. ಪಾಲುದಾರಿಕೆ ಉದ್ಯಮಗಳಲ್ಲಿ ಸಮಸ್ಯೆಗಳಿರುತ್ತವೆ. ವಾಹನ ಪ್ರಯಾಣದಲ್ಲಿ ಜಾಗ್ರತೆ ವಹಿಸಬೇಕು ಇತರರೊಂದಿಗೆ ವಾದ ವಿವಾದಗಳಿಂದ ದೂರವಿರಬೇಕು.
ಮಾರ್ಚ್
ಈ ತಿಂಗಳು ಅನುಕೂಲಕರವಾಗಿರುವುದಿಲ್ಲ. ಶುಭ ಕಾರ್ಯಗಳಿಗೆ ಧನ ವ್ಯಯವಾಗುತ್ತದೆ. ವ್ಯಾಪಾರದಲ್ಲಿ ನಷ್ಟಗಳಿರುತ್ತವೆ. ಆರೋಗ್ಯ ಸಮಸ್ಯೆಗಳಿರುತ್ತವೆ. ಕುಟುಂಬ ಸದಸ್ಯರೊಂದಿಗೆ ವಿವಾದಗಳಿರುತ್ತವೆ. ಇತರರೊಂದಿಗೆ ಜಾಗರೂಕರಾಗಿರಿ. ಕೋಪದಿಂದ ತೊಂದರೆಗಳು ಉಂಟಾಗುತ್ತವೆ.
ಏಪ್ರಿಲ್
ಈ ತಿಂಗಳು ಮಿಶ್ರ ಫಲಿತಾಂಶಗಳನ್ನು ಹೊಂದಿರುತ್ತದೆ. ಕೈಗೊಂಡ ಎಲ್ಲಾ ಕೆಲಸಗಳೂ ಕೂಡಿ ಬರುತ್ತವೆ. ವಿದೇಶ ಪ್ರಯಾಣ ಪ್ರಯತ್ನಗಳು ಫಲ ನೀಡುತ್ತವೆ. ವಿವಾದದ ಸೂಚನೆಗಳಿವೆ. ಕೆಲವು ವ್ಯವಹಾರಗಳನ್ನು ನೀವೇ ನೋಡಿಕೊಳ್ಳುವುದು ಉತ್ತಮ. ಕೀಲು ನೋವು ಬಾಧಿಸುತ್ತವೆ.
ಮೇ
ಈ ತಿಂಗಳು ನಿಮಗೆ ಅನುಕೂಲಕರವಾಗಿರುತ್ತದೆ. ಸಮಾಜದಲ್ಲಿ ಗೌರವ ಪ್ರತಿಷ್ಟೆ ಹೆಚ್ಚಾಗುತ್ತದೆ. ಹೊಸ ವ್ಯವಹಾರಗಳಲ್ಲಿ ವಿಶೇಷ ಲಾಭವನ್ನು ಪಡೆಯುತ್ತೀರಿ. ಮೌಲ್ಯಯುತವಾದ ವಸ್ತ್ರ ಮತ್ತು ಆಭರಣಗಳನ್ನು ಖರೀದಿಸಲಾಗುತ್ತದೆ. ಮಹಿಳೆಯರಿಂದ ಧನವ್ಯಯದ ಸೂಚನೆಗಳಿವೆ. ಹೊಸ ಸಾಲಗಳನ್ನು ಮಾಡುತ್ತೀರಿ.
ಜೂನ್
ಈ ತಿಂಗಳು ಅನುಕೂಲಕರವಾಗಿರುತ್ತದೆ. ಬಂಧುಗಳೊಂದಿಗೆ ಭೋಜನ ಮನೋರಂಜನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಕೆಲವು ಕೆಲಸಗಳನ್ನು ಕಠಿಣ ಪರಿಶ್ರಮದಿಂದ ಪೂರ್ಣಗೊಳಿಸುತ್ತೀರಿ, ಮಾಸಾಂತ್ಯದಲ್ಲಿ ಕೈಗೊಂಡ ಕಾರ್ಯಗಳು ಹದಗೆಡುವುದಿಲ್ಲ. ಆರೋಗ್ಯ ಸಮಸ್ಯೆಗಳು ಸ್ವಲ್ಪ ಕಿರಿಕಿರಿ ಉಂಟಾಗುತ್ತವೆ.
ಜುಲೈ
ಈ ತಿಂಗಳು ನಿಮಗೆ ಅನುಕೂಲಕರವಾಗಿರುವುದಿಲ್ಲ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ದೂರ ಪ್ರಯಾಣದಲ್ಲಿ ಅಡೆತಡೆಗಲಿರುತ್ತವೆ. ಇತರರೊಂದಿಗೆ ಯೋಚಿಸಿ ಮಾತನಾಡುವುದು ಒಳ್ಳೆಯದು. ಧನ ವ್ಯವಹಾರಗಳು ಕೂಡಿ ಬರುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಪ್ರತಿಸ್ಪರ್ಧಿಗಳಿಂದ ತೊಂದರೆಗಳು ಉಂಟಾಗುತ್ತವೆ.
ಆಗಸ್ಟ್
ಈ ತಿಂಗಳು ಅನುಕೂಲಕರವಾಗಿರುತ್ತದೆ. ಕೈಗೆತ್ತಿಕೊಂಡ ಕೆಲಸದಲ್ಲಿ ಶ್ರಮ ಹೆಚ್ಚಾದರೂ ಪೂರ್ಣಗೊಳಿಸುತ್ತೀರಿ. ಹೊಸ ವಸ್ತ್ರ ಲಾಭ ಇರುತ್ತದೆ. ನೆರೆಹೊರೆಯರಿಂದ ಸಹಾಯ ಸಹಕಾರ ದೊರೆಯುತ್ತದೆ. ಭೋಜನ ಮತ್ತು ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ. ಮನೆಯಲ್ಲಿ ಉತ್ತಮವಾದ ಬದಲಾವಣೆಗಳಾಗುತ್ತವೆ.
ಸೆಪ್ಟೆಂಬರ್
ಈ ತಿಂಗಳು ಮಿಶ್ರ ಫಲಿತಾಂಶಗಳನ್ನು ಹೊಂದಿರುತ್ತದೆ. ಕುಟುಂಬದೊಂದಿಗೆ ಸಂತೋಷದಿಂದ ಸಮಯ ಕಳೆಯುತ್ತೀರಿ. ಹಳೆಯ ಸ್ನೇಹಿತರನ್ನು ಭೇಟಿಯಾಗುತ್ತೀರಿ. ಮನೆಯಲ್ಲಿ ಶುಭ ಕಾರ್ಯಗಳನ್ನು ನಿರ್ವಹಿಸುತ್ತೀರಿ. ಪ್ರಯಾಣದಲ್ಲಿ ಸಣ್ಣ ಬದಲಾವಣೆಗಳಾಗುತ್ತವೆ. ಆಪ್ತ ಸ್ನೇಹಿತರಿಂದ ಆಹ್ವಾನಗಳು ಸಂತೋಷವನ್ನು ಉಂಟು ಮಾಡುತ್ತವೆ.
ಅಕ್ಟೋಬರ್
ಈ ತಿಂಗಳು ಅನುಕೂಲಕರವಾಗಿರುತ್ತದೆ. ಸ್ನೇಹಿತರಿಂದ ಶುಭ ಸುದ್ದಿ ಕೇಳುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಪ್ರತಿಭೆಯನ್ನು ಗುರುತಿಸಲಾಗುತ್ತದೆ. ದೂರದ ಪ್ರಯಾಣಗಳು ಕೂಡಿ ಬರುತ್ತದೆ. ಕೆಲವು ವಿಚಾರಗಳಲ್ಲಿ ಯೋಚಿಸಿ ವ್ಯವಹರಿಸಬೇಕು. ನ್ಯಾಯಾಲಯದ ವ್ಯವಹಾರಗಳು ಅಷ್ಟೊಂದು ಅನುಕೂಲಕರವಾಗಿರುವುದಿಲ್ಲ.
ನವೆಂಬರ್
ಈ ತಿಂಗಳು ನಿಮಗೆ ಅನುಕೂಲಕರವಾಗಿರುವುದಿಲ್ಲ. ಅನಾರೋಗ್ಯದ ಸೂಚನೆಗಳಿವೆ. ದೂರ ಪ್ರಯಾಣವನ್ನು ಮುಂದೂಡಲಾಗುತ್ತದೆ. ಉದ್ಯೋಗದ ವಿಷಯದಲ್ಲಿ ಮನ್ನಣೆ ಕಡಿಮೆಯಾಗುತ್ತದೆ. ಉದ್ಯಮಿಗಳು ಸಾಮಾನ್ಯ ಫಲಿತಾಂಶಗಳನ್ನು ಹೊಂದಿರುತ್ತಾರೆ. ಹಿರಿಯರೊಂದಿಗೆ ಯೋಚಿಸಿ ಮಾತನಾಡಿ.
ಡಿಸೆಂಬರ್
ಈ ತಿಂಗಳು ಅನುಕೂಲಕರವಾಗಿರುತ್ತದೆ. ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುತ್ತೀರಿ. ಹಣ ಮತ್ತು ಗೌರವ ಹೆಚ್ಚಾಗುತ್ತದೆ. ಭೋಜನ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ . ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಹೊಸ ವ್ಯಕ್ತಿಗಳೊಂದಿಗೆ ಪರಿಚಯಗಳು ಉಂಟಾಗುತ್ತವೆ.
ಈ ರಾಶಿಯವರು ನಿಯಮಿತವಾಗಿ ಲಕ್ಷ್ಮಿಯನ್ನು ಪೂಜಿಸಬೇಕು. ಕನಕದಾರ ಸ್ತೋತ್ರ ಪಠಣೆ ಮಾಡುವುದು ಒಳ್ಳೆಯದು. ವರ್ಷಾರಂಭದಲ್ಲಿ ಗುರುವಾರದಂದು ರುದ್ರಾಭಿಷೇಕ ಮತ್ತು ಕಡಲೆಕಾಳುಗಳನ್ನು ದಾನ ಮಾಡಬೇಕು.
