
CHITRADURGA NEWS | 21 AUGUST 2025
ಹೊಸದುರ್ಗ: ತತ್ಕಾಲ್ ಪೋಡ್ ಮಾಡಿಕೊಡಲು ಹತ್ತು ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹೊಸದುರ್ಗ ಎಡಿಎಲ್ ಆರ್ ಕಚೇರಿಯ ಸರ್ಕಾರಿ ಭೂಮಾಪಕ ಎಸ್.ಕೆ.ನಾಗರಾಜ್ ಅವರನ್ನು ಬಂದಿಸಿದ್ದಾರೆ.
ಹೊಸದುರ್ಗ ತಾಲೂಕು ಗುಡ್ಡದನೇರಲಕೆರೆ ಗ್ರಾಮದ ಶಶಿಕಲಾ ಎಂಬುವವರು ತಮ್ಮ ಪತಿಯ ದೊಡ್ಡಮ್ಮ ಎಂ.ರಾಮಕ್ಕ ಎಂಬುವವರ ಜಂಟಿ ಖಾತೆಯಲ್ಲಿರುವ ಪಹಣಿಯನ್ನು ಪ್ರತ್ಯೇಕವಾಗಿ ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಎಡಿಎಲ್ ಆರ್ ಕಚೇರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಸಚಿವ ಡಿ.ಸುಧಾಕರ್ ಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ | ಸಹಕಾರ ಕ್ಷೇತ್ರದ ಗಣನೀಯ ಸೇವೆಗೆ ಸಂದ ಗೌರವ
ಸದರಿ ಅರ್ಜಿ ಕಾರಣಕ್ಕೆ ಕಚೇರಿಯಿಂದ ಬಂದ ಸರ್ವೇಯರ್ ಎಸ್.ಕೆ.ನಾಗರಾಜ್, ಸರ್ವೇ ಮಾಡಿಕೊಂಡು, ಸಹಿ ಹಾಕಿ ಕೊಡಲು 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ವೇಳೆ ಶಶಿಕಲಾ ಅವರು ಗ್ರಾಪಂ ಸದಸ್ಯರಾದ ರಂಗನಾಥ್ ಅವರ ಮೂಲಕ ಮತ್ತೊಮ್ಮೆ ಮಾತನಾಡಿಸಿದಾಗ 12 ಸಾವಿರ ಕೇಳಿದ್ದಾರೆ. ಈ ವಿಷಯವನ್ನು ಮೊಬೈಲ್ ಮೂಲಕ ರೆಕಾರ್ಡ್ ಮಾಡಿಕೊಂಡು ಕರ್ನಾಟಕ ಲೋಕಾಯುಕ್ತ ನಿರೀಕ್ಷಕರಾದ ಮುಸ್ತಾಕ್ ಅಹಮ್ಮದ್ ಡಿ ಶೇಖ್ ಅವರಿಗೆ ಚಿತ್ರದುರ್ಗ ಲೋಕಾಯುಕ್ತ ಕಚೇರಿಯಲ್ಲಿ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿನಿಯ ಕೊಲೆ | ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆ
ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಆ.21(ಇಂದು) ಕಾರ್ಯಾಚರಣೆ ನಡೆಸಿದ್ದು, ಹೊಸದುರ್ಗ ತಾಲೂಕು ಕಚೇರಿ ಪಕ್ಕದ ತರೀಕೆರೆ ರಸ್ತೆಯಲ್ಲಿರುವ ಬೆಲಗೂರು ಜೆರಾಕ್ಸ್ ಅಂಗಡಿ ಮುಂಭಾಗದಲ್ಲಿ ಹತ್ತು ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ಎನ್.ವಾಸುದೇವರಾಮ್ ಅವರ ನೇತೃತ್ವದಲ್ಲಿ ನಡೆದ ದೂರು ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಮೃತ್ಯುಂಜಯ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಠಾಣೆಯ ಇನ್ಸ್‌ಪೆಕ್ಟರ್ ಬಿ.ಮಂಜುನಾಥ್, ಸಿಬ್ಬಂದಿಗಳಾದ ಜಿ.ಎಂ.ತಿಪ್ಪೇಸ್ವಾಮಿ, ಸಿಎಚ್‌ಸಿ ಎಚ್. ಶ್ರೀನಿವಾಸ್, ಪುಷ್ಪ, ಸತೀಶ್ ಎಲ್.ಜಿ, ಮಂಜುನಾಥ್ ಆರ್., ವೀರೇಶ್ ಎಂ., ಮಾರುತಿ ಟಿ., ರಾಜೇಶ್ ಎಸ್., ವೆಂಕಟೇಶ್ ಕುಮಾರ್, ಶ್ರೀಪತಿ, ಮಾರುತಿ, ಸಂತೋಷ್ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
