CHITRADURGA NEWS | 21 AUGUST 2025
ಹಿರಿಯೂರು: ತಾಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ ಹಿರಿಯೂರು ವತಿಯಿಂದ ತಾಲ್ಲೂಕು ಕ್ರೀಡಾಂಗಣದಲ್ಲಿ ಇತ್ತೀಚಿಗೆ ನಡೆದ 2025-26ನೇ ಸಾಲಿನ ಐಮಂಗಳ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಯರಬಳ್ಳಿ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮಗ್ರ ಕ್ರೀಡಾ ಪ್ರಶಸ್ತಿ ಪಡೆದುಕೊಂಡಿದೆ.
ಇದನ್ನೂ ಓದಿ: ಸಚಿವ ಡಿ.ಸುಧಾಕರ್ ಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ | ಸಹಕಾರ ಕ್ಷೇತ್ರದ ಗಣನೀಯ ಸೇವೆಗೆ ಸಂದ ಗೌರವ
ಕ್ರೀಡಾಕೂಟದಲ್ಲಿ ವಿಜೇತರಾದ ಬಾಲಕ-ಬಾಲಕಿಯರ ಪಟ್ಟಿ:
ಬಾಲಕಿಯರ ವಿಭಾಗ :
ಕಬಡ್ಡಿ, ಖೋ -ಖೋ, ಬಾಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ. ಶಟಲ್ ಬ್ಯಾಡ್ಮಿಂಟನ್, ಥ್ರೋ ಬಾಲ್, ವಾಲಿಬಾಲ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವೈಯುಕ್ತಿಕ ಬಾಲಕಿಯರ ವಿಭಾಗ :
ಎಂ.ಚುಕ್ಕಿ ಗುಂಡುಎಸೆತ, ಚಕ್ರ ಎಸೆತ ಪ್ರಥಮ. ಸ್ಫೂರ್ತಿ ಗುಂಡು ಎಸೆತ, ಚಕ್ರ ಎಸೆತ ದ್ವಿತೀಯ. ಟಿ.ನವ್ಯ 600 ಮೀ ತೃತೀಯ, ಎ.ಭುವನೇಶ್ವರಿ ಉದ್ದಜಿಗಿತ ದ್ವಿತೀಯ, ಸುಪ್ರಿಯಾ 400ಮೀ ದ್ವಿತೀಯ, ಟಿ.ಚೈತನ್ಯ ಎತ್ತರ ಜಿಗಿತ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗ:
ಕಬಡ್ಡಿ, ಬಾಲ್ ಬ್ಯಾಡ್ಮಿಂಟನ್, ಶಟಲ್ ಬ್ಯಾಡ್ಮಿಂಟನ್, 4*100ಮೀ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಖೋ ಖೋ, ಥ್ರೋ ಬಾಲ್, ವಾಲಿಬಾಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: ಹಿರಿಯೂರು ಮಾಜಿ ಶಾಸಕ ಆರ್.ರಾಮಯ್ಯ ನಿಧನ
ಬಾಲಕರ ವೈಯುಕ್ತಿಕ ವಿಭಾಗ:
ಟಿ.ನವೀನ್ 80ಮೀ ಹರ್ಡಲ್ಸ್ ಪ್ರಥಮ, ಕೆ.ಬಿ.ಅಭಿ 100ಮೀ ಪ್ರಥಮ, ರಂಗೇಗೌಡ 100ಮೀ ತೃತೀಯ, ಭೂತೇಶ್ 600ಮೀ ದ್ವಿತೀಯ, ಗಣೇಶ ಉದ್ದ ಜಿಗಿತ ದ್ವಿತೀಯ, ಕುಶಾಲ್ ಗೌಡ ಚಕ್ರ ಎಸೆತ ತೃತೀಯ, ಮನೋಜ್ ಗುಂಡು ಎಸೆತ ದ್ವಿತೀಯ, ಲೋಹಿತ್ ಕುಮಾರ್ ಗುಂಡು ಎಸೆತ ತೃತೀಯ ಪಡೆದಿದ್ದಾರೆ.
ವಿಜೇತ ಮಕ್ಕಳಿಗೆ ಹಾಗೂ ದೈಹಿಕ ಶಿಕ್ಷಕ ಎನ್.ರಾಜಪ್ಪ ಅವರಿಗೆ ಶಾಲೆಯ ಮುಖ್ಯ ಶಿಕ್ಷಕಿ ಎಂ.ವಿ.ಸವಿತ ಸೇರಿದಂತೆ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಗ್ರಾಮದ ಮುಖಂಡರು ಸಾಧನೆಯನ್ನು ಪ್ರಶಂಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
