ಚಿತ್ರದುರ್ಗ: ಭೀಮಸಮುದ್ರದಿಂದ ವಿ.ಪಾಳ್ಯದ ರಸ್ತೆ ಸಂಪೂರ್ಣ ಹಾಳಾಗಿದ್ದು, ರಿಪೇರಿ ಮಾಡಿಸುವಂತೆ ನಿಡುಮಾಮಿಡೇಶ್ವರಿ ದೇವಸ್ಥಾನ ಜೀರ್ಣೋದ್ದಾರ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಸರ್ವೇಯರ್ ಲೋಕಾಯುಕ್ತ ಬಲೆಗೆ | ಹತ್ತು ಸಾವಿರ ಲಂಚ ಪಡೆಯುವಾಗ ರೈಡ್
ವಿ.ಪಾಳ್ಯ, ನೆಲ್ಲಿಕಟ್ಟೆ, ಎನ್.ಬಳ್ಳೆಕಟ್ಟೆ, ಮಳಲಿ ಗ್ರಾಮದ ಜನರು ದಿನನಿತ್ಯವು ಸಂಚರಿಸುವಾಗ ಅನೇಕರು ಬಿದ್ದು ಕೈಕಾಲುಗಳಿಗೆ ಗಾಯ ಮಾಡಿಕೊಂಡಿದ್ದಾರೆ. ನೂರಾರು ಗಣಿ ಲಾರಿಗಳು ಈ ಮಾರ್ಗವಾಗಿ ಚಲಿಸುತ್ತಿರುವುದರಿಂದ ರಸ್ತೆ ಹದಗೆಟ್ಟಿದೆ. ಜಿಂದಾಲ್, ವೇದಾಂತ, ಜಿ.ಎಸ್.ಪಿ.ಎಲ್. ಹಾಗೂ ಇತರೆ ಟ್ರಾನ್ಸ್‍ಪೋರ್ಟ್‍ಗೆ ಸಂಬಂಧಿಸಿದ ಲಾರಿಗಳ ಓಡಾಟವನ್ನು ನಿರ್ಬಂಧಿಸಿ ಮೊದಲು ರಸ್ತೆ ಸರಿಪಡಿಸಬೇಕು.
ದೊಡ್ಡ ದೊಡ್ಡ ಕಂದಕಗಳಾಗಿರುವುದರಿಂದ ಜನಸಾಮಾನ್ಯರು ಹಾಗೂ ದ್ವಿಚಕ್ರ ವಾಹನ ಸವಾರರು ಸಂಚರಿಸುವುದು ಕಷ್ಟವಾಗಿದೆ. ರಸ್ತೆ ಕಾಮಗಾರಿಗಾಗಿ ಟೆಂಡರ್ ಕರೆದು ಒಂದು ವರ್ಷವಾಗಿದ್ದರೂ ಯಾವ ಗುತ್ತಿಗೆದಾರರು ರಸ್ತೆ ಕೆಲಸಕ್ಕೆ ಮುಂದೆ ಬರುತ್ತಿಲ್ಲ. ಈ ರಸ್ತೆಯನ್ನು ಡಿ.ಎಂ.ಎಫ್. ಫಂಡ್‍ನಲ್ಲಿ ಸೇರಿಸಿ ಕೂಡಲೆ ದುರಸ್ಥಿಗೊಳಿಸಬೇಕೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಿಡುಮಾಮಿಡೇಶ್ವರಿ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ನವೀನ್‍ಕುಮಾರ್ ಭೀಮಸಮುದ್ರ ಒತ್ತಾಯಿಸಿದರು.
ಇದನ್ನೂ ಓದಿ: ಸಚಿವ ಡಿ.ಸುಧಾಕರ್ ಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ | ಸಹಕಾರ ಕ್ಷೇತ್ರದ ಗಣನೀಯ ಸೇವೆಗೆ ಸಂದ ಗೌರವ
ಕಾರ್ಯದರ್ಶಿ ರುದ್ರಸ್ವಾಮಿ, ಖಜಾಂಚಿ ರಾಮಣ್ಣ. ವೆಂಕಟೇಶ, ಕೊಟ್ರಪ್ಪ, ಶಿವಕುಮಾರ್, ಮೂರ್ತಪ್ಪ, ಬೋಜರಾಜು, ಜಗದೀಶ್, ಯಲ್ಲಪ್ಪ, ಗೋವಿಂದರಾಜು, ಕೆಂಚವೀರಪ್ಪ, ಗೌರಮ್ಮ, ನಾಗರಾಜ, ಸುರೇಶ, ದರ್ಶನ್, ಹನುಮಂತ, ಮಂಜುನಾಥ, ಜಿ.ವೆಂಕಟೇಶ, ಗಣೇಶ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
