
CHITRADURGA NEWS | 31 MARCH 2026
ಚಿತ್ರದುರ್ಗ: ಮಕ್ಕಳ ವಿದ್ಯಾಭ್ಯಾಸದ ಪ್ರಾರಂಭಿಕ ಹಂತದಿಂದಲೇ ಅವರ ಕೌಶಲ ಅಭಿವ್ಯಕ್ತಿಗೆ ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಬಾಲಗೋಕುಲ ಪ್ರಕಲ್ಪದ ಕಾರ್ಯದರ್ಶಿ ಉಮೇಶ್ ಹೇಳಿದರು.
ಇದನ್ನೂ ಓದಿ: ಚಿತ್ರದುರ್ಗ ಇತಿಹಾಸ ಸಂಶೋಧನೆಗೆ ಹುಲ್ಲೂರು ಶ್ರೀನಿವಾಸ ಜೋಯಿಸರ ಕೊಡುಗೆ ದೊಡ್ಡದು
ನಗರದ ಜ್ಞಾನಸೌರಭ ವಿದ್ಯಾಸಂಸ್ಥೆಯ ಗ್ರೀಷ್ಮ ಡೇ-ಕೇರ್ ಸೆಂಟರ್ ರುಡ್ ಸೆಟ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳಲ್ಲಿರುವ ವಿವಿಧ ಬಗೆಯ ಸೃಜನಶೀಲ ಹವ್ಯಾಸಗಳನ್ನು ಶಿಕ್ಷಕರು ತರಗತಿಗಳಲ್ಲಿ ಹೊರತೆಗೆಯಬೇಕು. ಪುಸ್ತಕದ ಜೊತೆಗೆ ಸಹಪಠ್ಯ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಹೇಳಿದರು.
ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಆರಂಭಿಕ ಹಂತದಲ್ಲೆ ಒತ್ತಡದ ಕಲಿಕೆ ಶುರುವಾಗಿ ಬಿಡುತ್ತದೆ. ಆದ್ದರಿಂದ ಅವರ ಬಾಲ್ಯ ಶಿಕ್ಷಣ ಕಠಿಣವಾಗುತ್ತಿರುವುದು ಕಾಣಬಹುದಾಗಿದೆ ಎಂದರು.
ಇದನ್ನೂ ಓದಿ: ಮಹಾವೀರರ ಅಹಿಂಸಾ ತತ್ವದಿಂದ ಮಾತ್ರ ಜಗತ್ತಿನಲ್ಲಿ ನೆಮ್ಮದಿ ಸಾಧ್ಯ
ಜ್ಞಾನ ಸೌರಭ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಿದ್ದಲಿಂಗಪ್ಪ ಮಾತನಾಡಿದರು. ಶಿಕ್ಷಕಿಯರಾದ ಸೀಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರತ್ನ ಶಾಲಾ ವರದಿ ವಾಚಿಸಿದರು.
ಕಾರ್ಯಕ್ರಮದಲ್ಲಿ ಗ್ರೀಷ್ಮ ಅವರಿಂದ ಭರತನಾಟ್ಯ ಪ್ರದರ್ಶನ ಪ್ರಸ್ತುತ ಪಡಿಸಲಾಯಿತು. ಶಿಕ್ಷಕಿ ಸ್ವಪ್ನ ಉಪಸ್ಥಿತರಿದ್ದರು. ಶೋಭಾ ಸ್ವಾಗತಿಸಿದರು. ಮಂಜುನಾಥ್ ವಂದಿಸಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
