CHITRADURGA NEWS | 04 JUNE 2026
ಚಿತ್ರದುರ್ಗ: ನರೇಂದ್ರ ಮೋದಿ ಅವರ ಸರ್ಕಾರದ 12ನೇ ವರ್ಷದ ಯಶಸ್ವಿ ಹಾಗೂ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಚಿತ್ರದುರ್ಗ ಜಿಲ್ಲಾ ಘಟಕ ಬಿಜೆಪಿ ವತಿಯಿಂದ ನಗರದ ಚಂದ್ರವಳ್ಳಿ ಪ್ರದೇಶದ ಸುತ್ತಮುತ್ತಲಿನ ಹಾಗೂ ಕ್ರೀಡಾಂಗಣದ ಪರಿಸರದ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ: ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಜಾಗೃತಿ ಜಾಥಾ | ಚಾಲನೆ
ಈ ವೇಳೆ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಸಿದ್ಧಾರ್ಥ್ ಗುಂಡಾರ್ಪಿ ಮಾತನಾಡಿ, ಇಂದಿನ ದಿನಮಾನದಲ್ಲಿ ಕಸವನ್ನು ಎಲ್ಲಿ ಅಂದರೆ ಅಲ್ಲಿ ಹಾಕುತ್ತಿದ್ದಾರೆ. ಇಂದು ಮಳೆಗೆ ಕೊಳೆತು ವಾಸನೆ ಬರುತ್ತಿದೆ. ಇದ್ದಲ್ಲದೆ ಇದರಲ್ಲಿ ಪ್ಲಾಸ್ಟಿಕ್ ಸೇರಿಕೊಂಡು ಕೊಳೆಯದೆ ಮಣ್ಣಿನಲ್ಲಿ ವಿಷಕಾರಿಯಾಗಿ ಬೆಳೆಯುತ್ತಿದೆ.
ಜನತೆ ಕಸವನ್ನು ಎಲ್ಲಿ ಅಂದರೆ ಅಲ್ಲಿ ಹಾಕುವುದನ್ನು ಬಿಡಬೇಕು. ನಗರಸಭೆಯ ಕಸದ ವಾಹನಕ್ಕೆ ನೀಡುವುದರ ಮೂಲಕ ನಗರವನ್ನು ಸ್ವಚ್ಚ ನಗರವನ್ನಾಗಿ ಇಟ್ಟುಕೊಳ್ಳಬೇಕಿದೆ. ಪ್ರಸ್ತುತ ನಾವೆಲ್ಲ ಭವಿಷ್ಯದ ಪೀಳಿಗೆಯ ಬಗ್ಗೆ ಎಚ್ಚರ ವಹಿಸಬೇಕಿದೆ.
ಮೊದಲು ನಾವು ಪರಿಸರವನ್ನು ಸಂರಕ್ಷಿಸಿದರೆ ಮುಂದಿನ ಪೀಳಿಗೆಯು ಸಹ ಪರಿಸರ ಸಂರಕ್ಷಿಸುವ ಪ್ರೀತಿಸುವ ಗುಣವನ್ನು ಬೆಳಸಿಕೊಳ್ಳುತ್ತದೆ. ಪರಿಸರ ಸಂರಕ್ಷಣೆ ಕೇವಲ ಸರ್ಕಾರ, ಕಾನೂನು, ಸಂಘ ಸಂಸ್ಥೆಗಳಿಗೆ ಸೀಮಿತವಲ್ಲ, ಅದು ಪ್ರತಿಯೊಬ್ಬ ನಾಗರಿಕರ ಜೀವನದ ಅವಿಭಾಜ್ಯ ಜವಾಬ್ದಾರಿ ಅಗಿದೆ ಎಂದರು.
ಇದನ್ನೂ ಓದಿ: ಸಾವಯವ ಕೃಷಿ ಕುರಿತು ರೈತರಿಗೆ ತರಬೇತಿ
ಚಂದ್ರವಳ್ಳಿ ಮೈದಾನದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ತಾಜ್ಯಗಳು, ವಿವಿಧ ರೀತಿಯ ಕಸವನ್ನು ಸಂಗ್ರಹ ಮಾಡುವುದರ ಮೂಲಕ ನಗರಸಭೆಯ ವಾಹನಕ್ಕೆ ಹಾಕಲಾಯಿತು. ಸ್ವಚ್ಚತಾ ಕಾರ್ಯಕ್ರಮದಲ್ಲಿ ಬಿಜೆಪಿ ಪದಾಧಿಕಾರಿಗಳ ಜೊತೆಗೆ ನಗರಸಭೆಯ ಪೌರ ಕಾರ್ಮಿಕರು ಸಹಾ ಜೊತೆಗೂಡುವುದರ ಮೂಲಕ ಸ್ವಚ್ಚತೆ ಸಹಕಾರ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್‍ಯಾದವ್, ಮಾಧುರಿ ಗಿರೀಶ್, ಮೋಹನ್ ಕುಮಾರ್, ಉಪಾದ್ಯಕ್ಷರಾದ ಜಿ.ಎನ್.ಲಿಂಗರಾಜು, ನಗರ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಬಸವೇಶ್, ಲೀಲಾ ಶಶಿಧರ್, ಸಾಮಾಜಿಕ ಜಾಲತಾಣ ಅಣ್ಣಪ್ಪ , ಜಿಲ್ಲಾ ಕಾರ್ಯದರ್ಶಿ ರೇಖಾ, ನಗರ ಉಪಾಧ್ಯಕ್ಷರಾದ ಮಹಂತೇಶ್, ಪಲ್ಲವಿ ಪ್ರಸನ್ನ, ನಗರ ಕಾರ್ಯದರ್ಶಿ ನಾಗರಾಜ್, ವಿರೂಪಾಕ್ಷಿ, ಸುಮ, ಮಾಧ್ಯಮ ವಕ್ತಾರರಾದ ನಾಗರಾಜ್‍ಬೇದ್ರೆ, ನಗರಾಧ್ಯಕ್ಷರಾದ ಹೆಚ್.ಎನ್.ಲೋಕೇಶ್, ನಗರ ಮಂಡಲದ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಮುಖಂಡರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
