
CHITRADURGA NEWS | 04 JUNE 2026
ಚಿತ್ರದುರ್ಗ: ನಗರದ ಮೆದೇಹಳ್ಳಿ ರಸ್ತೆಯಲ್ಲಿನ ಆಧಿಶೇಷ ರೋಟರಿ ಭವನದಲ್ಲಿ ರೋಟರಿ ಫೌಂಡೇಷನ್ ಇಂಡಿಯಾ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ರೋಟರಿ ಕ್ಲಬ್ ಚಿತ್ರದುರ್ಗ ಹಾಗೂ ರೋಟರಿ ಕ್ಲಬ್ ಚಿನ್ಮೂಲಾದ್ರಿ ಇವರ ಸಂಯುಕ್ತಾಶ್ರಯದಲ್ಲಿ ಹೊಲಿಗೆ ಯಂತ್ರಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ | ಜಿಲ್ಲಾಧಿಕಾರಿ
ಈ ವೇಳೆ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿ ಮಾತನಾಡಿದ ಡಿಸ್ಟಿಕ್ ಗೌರ್ನರ್ ಎಂ.ಕೆ.ರವೀಂದ್ರ, ಸರ್ಕಾರದಿಂದಾಗಲೀ, ಸಂಘ ಸಂಸ್ಥೆಯಿಂದಾಗಲಿ ಯಾವುದೇ ಒಂದು ವಸ್ತುವನ್ನು ಫಲಾನುಭವಿಗಳಿಗೆ ನೀಡಿದಾಗ ಅವರು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿ ಆರ್ಥಿಕವಾಗಿ ಪ್ರಗತಿ ಸಾಧಿಸಿದರೆ, ಅದೇ ನೀಡಿದವರಿಗೆ ನೀಡುವ ಕೊಡುಗೆ ಎಂದರು.
ರೋಟರಿ ಕ್ಲಬ್ ಸ್ಥಾಪನೆಯಾಗಿ 121 ವರ್ಷವಾಗಿದೆ, ಪ್ರಪಂಚದ 200 ದೇಶಗಳಲ್ಲಿ ಇದರ ಅಸ್ಥಿತ್ವ ಇದೆ, ಶಿಕ್ಷಣ, ಆರೋಗ್ಯ ಪರಿಸರದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. ಇದರೊಂದಿಗೆ ದೇಶದಲ್ಲಿ ಪೋಲಿಯೊವನ್ನು ನಿರ್ಮೂಲನೆ ಮಾಡುವ ದೃಷ್ಟಿಯಿಂದ ಕಳೆದ 40 ವರ್ಷಗಳಿಂದ ರೋಟರಿ ಕ್ಲಬ್ ಖರ್ಚಿನಲ್ಲಿ ಮಕ್ಕಳಿಗೆ ಪೋಲಿಯೊ ಹನಿಗಳನ್ನು ಹಾಕಲಾಗುತ್ತಿದೆ. ಈ ಹಿನ್ನಲೆಯಲ್ಲಿ ನಮ್ಮಲ್ಲಿ 15 ವರ್ಷದಿಂದ ಪೋಲಿಯೊ ಪ್ರಕರಣಗಳು ಕಡಿಮೆಯಾಗಿವೆ ಎಂದರು.
ಮಾಜಿ ಗೌರ್ನರ್ ಮಧುಪ್ರಸಾದ್ ಮಾತನಾಡಿ, ಈ ಒಂದು ಕಾರ್ಯಕ್ರಮ ನಡೆಯಬೇಕಾದರೆ ಇದಕ್ಕೆ ಹಲವಾರು ತಿಂಗಳುಗಳ ಶ್ರಮ ಇದೆ. ಇದ್ದಲ್ಲದೆ ಹಲವಾರು ಜನ ಇದಕ್ಕೆ ನೆರವಾಗಿದ್ದಾರೆ, ಇವರ ಸಹಾಯದಿಂದ ನಾವುಗಳು ನಿಮಗೆ ಈ ಹೊಲಿಗೆಯಂತ್ರವನ್ನು ನೀಡಲು ಸಹಾಯವಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ನಗರದಲ್ಲಿ ನಾಳೆ ವಿದ್ಯುತ್ ವ್ಯತ್ಯಯ
ನಮ್ಮ ಸಂಸ್ಥೆಯ ವತಿಯಿಂದ ರೋಟರಿ ಸಭಾ ಭವನದಲ್ಲಿ ಕಡಿಮೆ ದರದಲ್ಲಿ ಡಯಾಲಿಸಿಸ್, ಫಿಯೋಥೇರಪಿ, ಯುವ ಜನರಿಗೆ ಕೌಶಲ್ಯ ತರಬೇತಿಯನ್ನು ನೀಡಿ ಉದ್ಯೋಗವನ್ನು ಕೂಡಿಸುವಲ್ಲಿ ಮುಂದಾಗಿದೆ. ಉಚಿತವಾದ ಚಿಕಿತ್ಸೆಯನ್ನು ಸಹಾ ನೀಡಲಾಗುತ್ತಿದೆ. ನಮ್ಮ ಮೂರು ಕ್ಲಬ್‍ಗಳಿಂದ ಈ ಹೊಲಿಗೆ ಯಂತ್ರವನ್ನು ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಸಿಸ್ಟೆಂಟ್ ಗೌರ್ನರ್ ಕಿರಣ್ ಕುಮಾರ್, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ನಾ ಅಧ್ಯಕ್ಷ ಶಶಿಧರ್ ಗುಪ್ತ, ಕಾರ್ಯದರ್ಶಿ ಶಿವಕುಮಾರ್, ರೋಟರಿ ಕ್ಲಬ್ ನ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಕಾರ್ಯದರ್ಶಿ ಅನುರಾಧ ವಿಶ್ವನಾಥ್, ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಅಧ್ಯಕ್ಷರಾದ ದಿಲ್‍ಷಾದ್ ಉನ್ನಿಸ, ಕಾರ್ಯದರ್ಶಿ ಅಮೃತ ಸಂತೋಷ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಉಮೇಶ್ ತುಪ್ಪದ್ ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

