
CHITRADURGA NEWS | 27 DECEMBER 2025
ಚಿತ್ರದುರ್ಗ: ಈ ಕಾಲದ ಅನಿವಾರ್ಯ ಹಾಗೂ ತುರ್ತು ಅನ್ನಿಸಿರುವ ನೈಸರ್ಗಿಕ ಕೃಷಿ ಬಗ್ಗೆ ರೈತರಿಗೆ ಎಲ್ಲಿಲ್ಲದ ಆಸಕ್ತಿ ಇದೆ. ಅದರಲ್ಲೂ ಕೃಷಿಗೆ ಬರುತ್ತಿರುವ ಹೊಸ ಪೀಳಿಗೆಗೆ ಇದೊಂದು ಫ್ಯಾಷನ್ ಆಗಿದೆ. ಆದರೆ, ಸರಿಯಾದ ಮಾರ್ಗದರ್ಶನದ ಕೊರತೆ ಇದೆ.
ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಉತ್ತಮ ಕೆಲಸಕ್ಕೆ ಮುಂದಾಗಿದೆ. ದೇಶಾದ್ಯಂತ ಶೂನ್ಯ ಬಂಡವಾಳದ ಸಹಜ ಕೃಷಿಗೆ ಹೆಸರಾಗಿರುವ ಪದ್ಮಶ್ರೀ ಪುರಸ್ಕೃತ ಸುಭಾಷ್ ಪಾಳೇಕಾರ್ ಅವರನ್ನು ಕರ್ನಾಟಕಕ್ಕೆ ಆಹ್ವಾನಿಸಿ ಇಲ್ಲಿನ ಒಂದು ಸಾವಿರ ರೈತರಿಗೆ ತರಬೇತಿ ಕೊಡಿಸುವ ಮಹತ್ವದ ಕೆಲಸಕ್ಕೆ ಮುಂದಾಗಿದೆ.

ಎಲ್ಲಿ, ಯಾವಾಗ ತರಬೇತಿ:
ಜನವರಿ ಮೂರರಿಂದ ಆರರವರೆಗೆ ನೈಸರ್ಗಿಕ ಕೃಷಿ ಪದ್ಧತಿಯ ಬಗ್ಗೆ ನಾಲ್ಕು ದಿನಗಳ ಕಾರ್ಯಗಾರವನ್ನು ಹಾಸನ ಜಿಲ್ಲೆ ಬೇಲೂರು ತಾಲೂಕಿನ ಐತಿಹಾಸಿಕ ಕ್ಷೇತ್ರವಾದ ಶ್ರೀ ಪುಷ್ಪಗಿರಿ ಮಠದಲ್ಲಿ ಕಾರ್ಯಗಾರ ನಡೆಯಲಿದೆ. ಕಾರ್ಯಾಗಾರದಲ್ಲಿ ಒಂದು ಸಾವಿರ ರೈತರಿಗೆ ವಸತಿ ವ್ಯವಸ್ಥೆ ಕೂಡಾ ಮಾಡಲಾಗಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | 26 ಡಿಸೆಂಬರ್ | ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆ
ನಾಲ್ಕು ದಿನಗಳು ಸತತವಾಗಿ ನಡೆಯಲಿರುವ ಈ ಕಾರ್ಯಗಾರವನ್ನು ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಗೆ ಹೆಸರಾಗಿರುವ ಮಹಾರಾಷ್ಟ್ರದ ಪದ್ಮಶ್ರೀ ಡಾಕ್ಟರ್ ಸುಭಾಷ್ ಪಾಳೇಕರ್ ಅವರು ಒಂದು ಸಾವಿರ ರೈತರಿಗೆ ನಡೆಸಿಕೊಡಲಿದ್ದಾರೆ.
ಈ ಕಾರ್ಯಗಾರವು ಶ್ರೀ ಕ್ಷೇತ್ರ ಪುಷ್ಪಗಿರಿ ಮಠದ ಡಾ. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಸಂಪೂರ್ಣ ಸಹಯೋಗದೊಂದಿಗೆ ನಡೆಯುತ್ತಿದೆ.
ಇದನ್ನೂ ಓದಿ: ಮೆಂತ್ಯ ಬೀಜಗಳು ಅಥವಾ ಸೊಪ್ಪುಗಳಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ?
ಈ ಕಾರ್ಯಗಾರಕ್ಕೆ ಅನೇಕ ರಾಜ್ಯಗಳಿಂದ ಮತ್ತು ಪಕ್ಕದ ನೇಪಾಳದಿಂದ ರೈತರು, ರೈತ ಮುಖಂಡರು ಭಾಗಿಯಾಗುತ್ತಿದ್ದಾರೆ. ಹಾಗಾಗಿ ಕರ್ನಾಟಕದ ರೈತ ಮಹಿಳೆಯರು, ಎಚ್ಚೆತ್ತ ರೈತ ಪುರುಷರು, ಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿದೆ.
ಕಾರ್ಯಾಗಾರಕ್ಕೆ ನೊಂದಣಿ ಹೇಗೆ:
ಕಾರ್ಯಾಗಾರಕ್ಕೆ ನೋಂದಾಯಿಸಿಕೊಳ್ಳಲು 800 ರೂ. ಶುಲ್ಕ ನಿಗಧಿ ಮಾಡಲಾಗಿದೆ. ಪುಷ್ಪಗಿರಿ ಮಠದ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಬ್ಯಾಂಕ್ ಖಾತೆ, ಕೆನರಾ ಬ್ಯಾಂಕ್ – 0552101016126, ಐಎಫ್‌ಎಸ್‌ಸಿ-CNRB0000552 ಈ ಖಾತೆಗ ಹಣ ಜಮೆ ಮಾಡಬೇಕು.
ಸಂಪರ್ಕಕ್ಕಾಗಿ: +917676280136, 7259321661, 9538344666, 9448268216, 8722040404 ಸಂಖ್ಯಗೆಳಿಗೆ ಕರೆ ಮಾಡಬಹುದು.
ನೊಂದಣಿಗೆ ಕೊನೆಯ ದಿನ: 2026 ಜನವರಿ 2.
ಶುಲ್ಕ ಪಾವತಿ ಕಷ್ಟವೇ: ಮಾರುಕಟ್ಟೆ ಧಾರಣೆ | ಡಿಸೆಂಬರ್ 25 | ಮೆಕ್ಕೆಜೋಳ ರೇಟ್ ಎಷ್ಟಿದೆ?
ಬರಲು ಆಸಕ್ತಿ ಇದ್ದು ಶುಲ್ಕ ಪಾವತಿಸಲು ಕಷ್ಟವಿರುವ ಕನಿಷ್ಟ 100 ಸಣ್ಣ ರೈತರಿಗೆ, ಮಹಿಳಾ ರೈತರಿಗೆ, ಯುವ ರೈತರಿಗೆ ಉಚಿತವಾಗಿ ವ್ಯವಸ್ಥೆ ಮಾಡಲಾಗುವುದು. ಉಚಿತವಾಗಿ ಭಾಗವಹಿಸಲು ಇಚ್ಛಿಸುವವರು ಮುಂಚಿತವಾಗಿಯೇ ಈ ಸಂಖ್ಯೆಗೆ 917676280136. ನೋಂದಾಯಿಸಿಕೊಳ್ಳಿ.
ಮೂವರು ರೈತರಿಗೆ ಪ್ರಶಸ್ತಿ ಪ್ರದಾನ:
ಕಾರ್ಯಾಗಾರದಲ್ಲಿ ದೇಸಿ ತಳಿಗಳ ಬೀಜ ಮೇಳ, ಮೌಲ್ಯವರ್ಧನೆ ಮತ್ತು ನೇರ ಮಾರುಕಟ್ಟೆ ಪ್ರದರ್ಶನ ಇರುತ್ತದೆ.
ಇದನ್ನೂ ಓದಿ: ಮನೆಯಲ್ಲೇ ಕುಳಿತು ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿಗಳಿಗೆ ಇ-ಖಾತಾ ಪಡೆಯಿರಿ
ಜನವರಿ 3 ಮತ್ತು 5 ನೇ ತಾರೀಖಿನವರೆಗೆ ದೇಸಿ ತಳಿಗಳ ಬೀಜ ಮೇಳ, ಆಹಾರ ಮೌಲ್ಯವರ್ಧನೆ ಮತ್ತು ನೇರ ಮಾರುಕಟ್ಟೆಯ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ. ಅತಿ ಹೆಚ್ಚು ತಳಿಗಳನ್ನು ಸಂರಕ್ಷಿಸಿರುವ ಮೂರು ರೈತರಿಗೆ ಪ್ರಶಸ್ತಿ ಪ್ರಧಾನ ಇರುತ್ತದೆ.
ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ:
ಸಾಲ ಮಾಡಿ ಖರೀದಿಸುವ ರಸಗೊಬ್ಬರ, ಕೀಟನಾಶಕ ಹೈಬ್ರಿಡ್ ಬಿತ್ತನೆ ಬೀಜಗಳು ರೈತ ಕುಲವನ್ನು ಆತ್ಮಹತ್ಯೆಯ ದಾರಿ ಹಿಡಿಯುವಂತೆ ಮಾಡಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ಈ ಪರಿಸ್ಥಿತಿಯಲ್ಲಿ ರೈತರು ರೈತರಾಗಿ ಉಳಿದು ಘನತೆಯ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಯಾವುದನ್ನು ಖರೀದಿ ಮಾಡದೆ ಮಾಡಬಹುದಾದ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಲೇಬೇಕಾಗಿದೆ.
ರೈತರು ಏಕ ಬೆಳೆಯ ಬದಲಾಗಿ ಬಹು ಬೆಳೆ ಪದ್ಧತಿ ಅಳವಡಿಸಿಕೊಳ್ಳುವುದು, ರಸ ಗೊಬ್ಬರಗಳ ಬದಲು ನಾಟಿ ಹಸುವಿನ ಸಗಣಿ ಮತ್ತು ಗಂಜಲದಿಂದ ತಯಾರಾದ ಬೀಜಾಮೃತ, ಜೀವಾಮೃತ ಬಳಸುವುದು, ಭೂಮಿಯನ್ನು ಹೊದಿಸಿ ತೇವಾಂಶ ಕಾಪಾಡಿ ನೀರನ್ನು ಕಡಿಮೆ ಬಳಸುವ ಸರಳ ನೈಸರ್ಗಿಕ ಕೃಷಿಗೆ ರೈತರು ತೆರೆದುಕೊಳ್ಳದಿದ್ದರೆ ಮುಂದಿನ ಮಕ್ಕಳ ಆರೋಗ್ಯ ಭೂಮಿಯ ಆರೋಗ್ಯ ಎಲ್ಲವೂ ಕರಾಳವಾಗಲಿದೆ.
ಇದನ್ನೂ ಓದಿ: ಚಳಿಗಾಲದಲ್ಲಿ ನಿಮ್ಮ ಮಗುವಿಗೆ ಪ್ರತಿದಿನ ಸ್ನಾನ ಮಾಡಿಸಬೇಕೇ? ಬೇಡವೇ? ತಿಳಿಯಿರಿ
ಹಸಿರು ಕ್ರಾಂತಿಯ ಪರಿಣಾಮದಿಂದಾಗಿ ರೈತರು ಕಳೆದುಕೊಂಡಿರುವ ನಾಟಿ ಬೀಜಗಳು, ನಿಸರ್ಗದ ಜೊತೆ ಋತುಮಾನಕ್ಕೆ ತಕ್ಕಂತೆ ಮಾಡುವ ಕೃಷಿಜ್ಞಾನ, ನೇರ ಮಾರುಕಟ್ಟೆ ವಿಧಾನಗಳಾದ ರೈತ ಸಂತೆಗಳನ್ನು ಪರ್ಯಾಯವಾಗಿ ಕಟ್ಟಲೇಬೇಕಾದ ಪರಿಸ್ಥಿತಿ ಎದುರಾಗಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
