CHITRADURGA NEWS | 16 DECEMBER 2025
ಚಿತ್ರದುರ್ಗ: ದುರ್ಗಾ ಇಲೆವೆನ್ ಕ್ರಿಕೇಟರ್ಸ್ ವತಿಯಿಂದ 4ನೇ ಬಾರಿಗೆ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೇಟ್ ಟೂರ್ನಿಮೆಂಟ್ ರಾಜವೀರ ಮದಕರಿ ನಾಯಕ ಕಪ್-2025 ಲೀಗ್ ಕಮ್ ನಾಕೌಟ್ ಪಂದ್ಯಾವಳಿ ನಗರದ ಹಳೇ ಮಾದ್ಯಮಿಕ ಶಾಲಾ ಅವರಣದಲ್ಲಿ ಡಿ.17 ರಿಂದ 21ರವರೆಗೆ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕ ಸಿ.ಬಿ.ನಾಗರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೂರು ದಶಕಗಳ ಮತ್ತೆ ಮಹೇಶ್ವರ ಜಾತ್ರೆ ಆಚರಿಸಿದ ಈಚಘಟ್ಟ ಗ್ರಾಮಸ್ಥರು
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಸ್ನೇಹಜೀವಿ ಬಳಗದಿಂದ ಇದು ನಾಲ್ಕನೇ ಬಾರಿ ಟೂರ್ನಮೆಂಟ್ ನಡೆಯುತ್ತಿದ್ದು, ಇದರಲ್ಲಿ ಪ್ರಥಮ ಬಹುಮಾನ 2,00,001 ರೂ, ದ್ವೀತೀಯ ಬಹುಮಾನ 1,00,001 ರೂ. ಹಾಗೂ ತೃತೀಯ ಬಹುಮಾನ 50,001 ರೂ ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು.
· ಡಿಸೆಂಬರ್ 17 ರಿಂದ 21 ರವರೆಗೆ ಪಂದ್ಯಾವಳಿ
· ಹೊನಲು ಬೆಳಕಿನ ಲೀಗ್ ಕಮ್ ನಾಕೌಟ್ ಪಂದ್ಯ
· ಪ್ರಥಮ ಬಹುಮಾನ 2 ಲಕ್ಷ, ದ್ವಿತೀಯ 1 ಲಕ್ಷ, ತೃತೀಯ 50 ಸಾವಿರ
ಉತ್ತಮ ಬ್ಯಾಟ್ಸ್‍ಮನ್ ಹಾಗೂ ಬೌಲರ್‍ಗೆ ಟ್ರೋಫಿಯನ್ನು ನೀಡಲಾಗುವುದು, ಸರಣಿ ಶ್ರೇಷ್ಠ ಪಡೆದವರಿಗೆ ಎಲ್‍ಇಡಿ ಟಿ.ವಿ.ಯನ್ನು ನೀಡಲಾಗುವುದು ಎಂದರು.
ಇದು ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಆಗಿದ್ದು ರಾಜ್ಯದ ವಿವಿಧೆಡೆಗಳಿಂದ 43 ತಂಡಗಳು ಭಾಗವಹಿಸಲಿದ್ದು, 5 ದಿನಗಳಲ್ಲಿ ಇವುಗಳು 115 ಮ್ಯಾಚ್‍ಗಳನ್ನು ಆಡಲಿದ್ದಾರೆ. ಹೂರ ಜಿಲ್ಲೆಗಳಿಂದ 17 ತಂಡ ಹಾಗೂ ಚಿತ್ರದುರ್ಗ ಜಿಲ್ಲೆಯಿಂದ 26 ತಂಡಗಳು ಭಾಗವಹಿಸಲಿವೆ, ಕ್ರೀಡಾಪಟುಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಡಿ.17ರ ಬೆಳಿಗ್ಗೆ 8 ಗಂಟೆಗೆ ಡಾ. ಬಸವಕುಮಾರ್ ಶ್ರೀಗಳು ಪಂದ್ಯಾವಳಿಯನ್ನು ಉದ್ಘಾಟನೆಯನ್ನು ಮಾಡಲಿದ್ದಾರೆ ಎಂದರು.
ಇದನ್ನೂ ಓದಿ: ಚನ್ನಗಿರಿ, ಭೀಮಸಮುದ್ರ ಸೇರಿ ರಾಜ್ಯದ ಪ್ರಮುಖ ಮಾರುಕಟ್ಟೆ ಅಡಿಕೆ ರೇಟ್
ಸುದ್ದಿಗೋಷ್ಟಿಯಲ್ಲಿ ಗೋಪಾಲಸ್ವಾಮಿ ನಾಯಕ್, ರಾಜೀವ, ನಾಗರಾಜ್, ಹನೀಫ್, ರಾಮು, ಅರ್ಜುನ್, ಕೃಪಾಕರ, ಲಕ್ಷ್ಮೀಕಾಂತ, ಬಾಬು ಎನ್.ಕೆ.ಗಾಂಧಿ ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
