
CHITRADURGA NEWS | 16 DECEMBER 2025
ಹೊಳಲ್ಕೆರೆ: ಹೊಳಲ್ಕೆರೆ ತಾಲೂಕಿನ ಈಚಘಟ್ಟ ಗ್ರಾಮದಲ್ಲಿ ಮಹೇಶ್ವರ ಜಾತ್ರೆ ಶ್ರದ್ಧಾ ಭಕ್ತಿಯಿಂದ ಜರುಗಿತು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಎಚ್.ಡಿ.ಕುಮಾರಸ್ವಾಮಿ ಜನ್ಮ ದಿನಾಚರಣೆ | ಮುಖ್ಯಮಂತ್ರಿಯಾಗಲಿ ಎಂದು ಹಾರೈಕೆ

ಕಡೇ ಕಾರ್ತಿಕೋತ್ಸವದ ನಂತರ ನಾಡಿನ ನಾನಾ ಭಾಗಗಳಲ್ಲಿ ವಿಶಿಷ್ಟವಾಗಿ ಆಚರಣೆಯಾಗುವ ಮಹೇಶ್ವರ ಜಾತ್ರೆ ಈಚಘಟ್ಟದಲ್ಲೂ ಬಹು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಈ ಜಾತ್ರೆಯು ಮೂರು ದಶಕಗಳಿಂದ ಕಾರಣಾಂತರದಿಂದ ಸ್ಥಗಿತಗೊಂಡಿದ್ದು, ಕಳೆದ ವರ್ಷದಿಂದ ಗ್ರಾಮಸ್ಥರ ಸಹಕಾರದಿಂದ ಮತ್ತೆ ಆಚರಣೆಗೆ ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮಹೇಶ್ವರ ಜಾತ್ರೆಗೆ ಗ್ರಾಮದ ಭಕ್ತರು ಮತ್ತು ಸ್ಥಳೀಯ ಮಠದ ವಂಶಸ್ಥರು ಸೇರಿಕೊಂಡು ಗ್ರಾಮದ ಹೊರ ವಲಯದ 4-5 ತಲೆಮಾರುಗಳ ಹಿಂದಿನ ಪೂರ್ವಜರು ನಿರ್ಮಿಸಿದ ತೋಟ, ಅಲ್ಲಿ ಪುರಾತನರ ಲಿಂಗೈಕ್ಯ ಸಮಾಧಿ ಸ್ಥಳಗಳದ್ದು ಸೋಮವಾರ ರಾತ್ರಿ ಗ್ರಾಮದ ಪ್ರಮುಖ ದೈವಗಳನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಿ ಸಂಪ್ರದಾಯದಂತೆ ಪೂಜಾ ವಿಧಾನಗಳನ್ನು ರಾತ್ರಿ ಇಡೀ ನೆರವೇರಿಸಲಾಯಿತು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 16 | ಹತ್ತಿ ರೇಟ್ ಎಷ್ಟಿದೆ?
ಇಲ್ಲಿನ ಪ್ರಸಾದದ ವಿಶೇಷ ಉಪ್ಪು ಹಾಕದ ಅನ್ನ ಹಾಗೂ ಅದಕ್ಕೆ ಬೆಲ್ಲ, ಬಾಳೆಹಣ್ಣು ಹಾಗೂ ಹಾಲಿನ ಮಿಶ್ರಣ. ಈ ಪ್ರಸಾದವನ್ನು ಭಕ್ತರು ಪೂಜ್ಯ ಭಾವದಿಂದ ಸ್ವೀಕರಿಸಿದರು.
ನವ ನಾಗರಿಕತೆಯಲ್ಲಿ ಮನುಷ್ಯ ದುಡಿಮೆ,ಹಣ ಸಂಪಾದನೆ, ಅಧಿಕಾರ ಹಿಡಿಯುವ ಒತ್ತಡದಲ್ಲಿ ಕೆಲ ಜನ ಸಿಲುಕಿ ಒಂದಷ್ಟು ಜನ ಸಂಪ್ರದಾಯದ ಆಚರಣೆಗಳನ್ನು ಬಿಡಬಾರದೆಂಬ ದೃಷ್ಟಿಯಲ್ಲಿ ಮಾಡಿಕೊಂಡು ಬರಲಾಗುತ್ತಿರುವುದಾಗಿ ಮತ್ತೆ ಕೆಲವರ ಅಭಿಪ್ರಾಯ. ಈ ಆಚರಣೆಗೆ ಗ್ರಾಮದ ಯುವಕರು ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: SJM ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಧಾರವಾಡದ ಪ್ರೊ.ಕಾಳಗೌಡ ಬಸಪ್ಪ ಗುಡಸಿ ಅಧಿಕಾರ ಸ್ವೀಕಾರ
ಜಾತ್ರೆಯಲ್ಲಿ ಮಠದ ವಂಶಸ್ಥರು ಹಿರಿಯರು ಆದ ಚೆನ್ನಬಸವಯ್ಯ, ಮಹಾರುದ್ರಯ್ಯ, ನಂಜಪ್ಪಯ್ಯ, ಮಲ್ಲಿಕಾರ್ಜುನಯ್ಯ, ಗ್ರಾಮದ ದೈವದ ಪ್ರಧಾನ ಅರ್ಚಕರಾದ ವೀರಭದ್ರಪ್ಪ, ವಿನಾಯಕ ಸೇರಿದಂತೆ ಗ್ರಾಮದ ಧರ್ಮದರ್ಶಿಗಳಾದ ಪ್ರಸನ್ನ ಕುಮಾರ್, ಉಜ್ಜನಪ್ಪ, ತಿಪ್ಪೇಸ್ವಾಮಿ, ಮೂಲೆಮನೆ ವೀರೇಶ್, ಹೆಗ್ಗೆರೆ ಬಸಪ್ಪ, ಲೋಕೇಶ್, ಪರಮೇಶ್ವರಪ್ಪ, ತಿಮ್ಮಜ್ಜರ ಕಲ್ಲಪ್ಪ ಯುವಕರಾದ ಮಿಥುನ್, ಮಧು, ಕಾರ್ತಿಕ್, ಅಂಕಳಪ್ಪ ಮತ್ತಿತರರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
