CHITRADURGA NEWS | 25 NOVEMBER 2024
ಚಿತ್ರದುರ್ಗ: ನಗರದ ಬುರುಜನಹಟ್ಟಿ ತಗ್ಗಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನ.29 ಮತ್ತು 30 ರಂದು ಸಂಕಷ್ಟಹರ ಶ್ರೀ ಗಣಪತಿ ಮತ್ತು ನವಗ್ರಹ ದೇವರ ನೂತನ ಗೋಪುರದ ಕಳಶ ಪ್ರತಿಷ್ಠಾಪನಾ, ಮಹಾದ್ವಾರ ಪೂಜೆ ಮತ್ತು ಶ್ರೀ ತಗ್ಗಿನ ಆಂಜನೇಯಸ್ವಾಮಿ ಕಾರ್ತೀಕ ಮಹೋತ್ಸವ(Kartika Mahotsava) ಆಯೋಜಿಸಲಾಗಿದೆ.

ಕ್ಲಿಕ್ ಮಾಡಿ ಓದಿ: ಮೀಸಲಾತಿ ಒಪ್ಪುವವರು ಒಳಮೀಸಲಾತಿ ವಿರೋಧಿಸಬಾರದು | ಜೆ.ಯಾದವರೆಡ್ಡಿ
ನ.29ರ ಬೆಳಗ್ಗೆ 7.30ಕ್ಕೆ ಶ್ರೀ ಗಂಗಾಪೂಜೆಯೊAದಿಗೆ ಮಹಾದ್ವಾರ ಪೂಜೆ, ಪ್ರವೇಶ, ಮಹಾಮಂಗಳಾರತಿ. ಸಂಜೆ 6ಕ್ಕೆ ವಾಸುದೇವ ಪುಣ್ಯಾಹವಾಚನ, ಪಂಚಗವ್ಯ ಸ್ಥಾಪನೆ, ಯಾಗಶಾಲಾ ಪ್ರವೇಶ, ದ್ವಾರರಾಧನೆ, ಅಗ್ನಿಪ್ರತಿಷ್ಠೆ, ಗಣಹೋಮ ಮಹಾಮಂಗಳಾರತಿ ನೆರವೇರಲಿದೆ.
ನ.30ರ ಬೆಳಗ್ಗೆ 5 ರಿಂದ 6 ರವರೆಗೆ ಸಲ್ಲುವ ಬ್ರಾಹ್ಮಿ ಮುಹೂರ್ತದಲ್ಲಿ ಪ್ರತಿಷ್ಠಾಂಗಹೋಮ, ನವಗ್ರಹ ಹೋಮ, ನೂತನ ಗೋಪುರ ಕಲಶ ಪ್ರತಿಷ್ಠಾಪನಾ ಕಾರ್ಯಕ್ರಮ, ಕುಂಭಾಭಿಷೇಕ, ನಂತರ ಪಂಚಾಮೃತ ಅಭಿಷೇಕ, ಅಲಂಕಾರ ಮಹಾನೆವೇದ್ಯ, ರಂಗಪೂಜೆ ಹಾಗೂ ಗೋದರ್ಶನ, ಮಧ್ಯಾಹ್ನ 12ಕ್ಕೆ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ, ಸಂಜೆ 6ಕ್ಕೆ ಶ್ರೀ ಮಹಾಗಣಪತಿ, ಶ್ರೀ ತಗ್ಗಿನ ಆಂಜನೇಯಸ್ವಾಮಿ ಶ್ರೀ ನವಗ್ರಹ ದೇವರುಗಳ ಕಾರ್ತೀಕ ಮಹೋತ್ಸವ ಕಾರ್ಯಕ್ರಮ ಜರುಗಲಿವೆ ಎಂದು ಪ್ರಧಾನ ಅರ್ಚಕರಾದ ಸಿ.ಆರ್.ಕೃಷ್ಣಪ್ಪ, ಸಿ.ಆರ್.ಕಿರಣ್ ಹಾಗೂ ಸಿ.ಆರ್.ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: 10. ಹೊಸ ಬಂಡಿಗಳ ಆಗಮನ | ಹಬ್ಬಿದಾ ಮಲೆ ಮಧ್ಯದೊಳಗೆ


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
