
CHITRADURGA NEWS | 30 DECEMBER 2025
ಚಿತ್ರದುರ್ಗ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಇರುವ ಶ್ರೀ ವಿಷ್ಣು ದೇವಸ್ಥಾನದಲ್ಲಿ ಮಂಗಳವಾರ 2 ನೇ ವರ್ಷದ ವೈಕುಂಠ ಏಕಾದಶಿ ವಿಶೇಷ ಪೂಜಾ ಕಾರ್ಯಕ್ರಮ ಬೆಳಿಗ್ಗೆ 6ಗಂಟೆಗೆ ಪೂಜೆ ನೆರವೇರಿತು.
ಇದನ್ನೂ ಓದಿ: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಗೆ ಜಾಮೀನು ಮಂಜೂರು | ಹೊಸ ವರ್ಷದ ಮುನ್ನಾ ದಿನ ಬಿಡುಗಡೆ

ವಿಷ್ಣು ದೇವರಿಗೆ ಅಭಿಷೇಕ, ಹೂವಿನ ಅಲಂಕಾರ, ಸ್ವಾಮಿಯವರ ಪ್ರಕಾರೋತ್ಸವ, ಉತ್ತರ ಬಾಗಿಲು ಪೂಜೆ, ಅಲಂಕಾರ ಸೇವೆ ಏರ್ಪಡಿಸಲಾಯಿತು.
ಪೂಜೆಯ ನೇತೃತ್ವವನ್ನು ಸತೀಶ್ ಶರ್ಮಾ ಮತ್ತು ಸಂಗಡಿಗರಿಂದ ಪೂಜೆ ಮಾಡಲಾಯಿತು.
ಬೆಳ್ಳಿ ಪಲ್ಲಕ್ಕಿಯಲ್ಲಿ ದೇವರ ವಿಗ್ರಹವನ್ನು ಇಟ್ಟ, ದೇವಸ್ಥಾನಗಳ ಸುತ್ತಲೂ ಪ್ರದಕ್ಷಣೆ ಮಾಡಲಾಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೈಕುಂಠ ದ್ವಾರದ ಮೂಲಕ ಸ್ವಾಮಿಯ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸಿದರು.
ಇದನ್ನೂ ಓದಿ: ಗ್ಯಾಸ್ ಗೀಜರ್ ಲೀಕೇಜ್ | ಬಿಎಸ್ಸಿ ವಿದ್ಯಾರ್ಥಿನಿ ಸಾವು
ಕರ್ನಾಟಕ ಅಯ್ಯಪ್ಪ ಸ್ವಾಮಿ ಅನ್ನ ಪ್ರಸಾದದ ಅಧ್ಯಕ್ಷರಾದ ಶರಣ್ ಕುಮಾರ್, ಕಾರ್ಯದರ್ಶಿ ಎಮ್.ಪಿ.ವೆಂಕಟೇಶ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್, ಬಿ.ಎಸ್.ಮೋಹನ್ ಕುಮಾರ್, ಬಾಲಾಜಿ ಜಗದೀಶ್, ಗುಡ್ಡದ ಮಲ್ಲಪ್ಪ, ಇಂದ್ರಣ್ಣ, ಸೂರಪ್ಪ, ರೇಷ್ಮೆ ಮಂಜುನಾಥ್, ರಮೇಶ್, ಗುರುಸ್ವಾಮಿ ಉಪಸ್ಥಿತರಿದ್ದರು.
ಸಂಜೆ ತನಕ ನಗರದ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
