
CHITRADURGA NEWS | 22 AUGUST 2025
ಚಿತ್ರದುರ್ಗ: ಭೀಕರವಾಗಿ ಕೊಲೆಯಾಗಿ, ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಕಾಲೇಜು ವಿದ್ಯಾರ್ಥಿನಿ ವರ್ಷಿತಾ ಪ್ರಕರಣ ಕೋಟೆನಾಡು ಚಿತ್ರದುರ್ಗ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಪ್ರಕರಣದ ಕುರಿತು ಗುರುವಾರ ಸಂಜೆ ವಿವರಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಮನೆ ಮೇಲೆ ED ಅಧಿಕಾರಿಗಳ ದಾಳಿ
ಕೊಲೆಯಾದ ಕೋವೆರಹಟ್ಟಿಯ ವರ್ಷಿತಾ ಹಾಗೂ ಚಿತ್ರದುರ್ಗದ ಕೆಳಗೋಟೆ ನಿವಾಸಿ ಚೇತನ್ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಇನ್ಸ್ಟಾಗ್ರಾಂ ಮೂಲಕ ಪರಿಚಿತರಾಗಿ, ಪ್ರೀತಿಸಲು ಆರಂಭಿಸಿದ್ದರು.
ತನ್ನನ್ನು ಮದುವೆಯಾಗುವಂತೆ ವರ್ಷಿತಾ ಚೇತನ್ ಬಳಿ ಪ್ರಸ್ತಾಪಿಸಿದ್ದಾರೆ. ಆಕೆಯ ಚಿಕ್ಕಮ್ಮ ಕೂಡಾ ಮದುವೆಯಾಗುವಂತೆ ಚೇತನ್‌ಗೆ ಹೇಳಿದ್ದಾರೆ.
ಇದನ್ನೂ ಓದಿ: ಮೊಳಕಾಲ್ಮೂರಿನಲ್ಲಿ ಜಿಲ್ಲಾ ಮಟ್ಟದ ಆಸ್ಪತ್ರೆ | ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ !
ಆದರೆ, ಚೇತನ್ ಇದನ್ನು ನಿರಾಕರಿಸಿದ್ದಾನೆ. ವರ್ಷಿತಾ ಮತ್ತೋರ್ವ ಸ್ನೇಹಿತನ ಜೊತೆ ಮಾತನಾಡುವುದನ್ನು ಚೇತನ್ ಸಹಿಸದೆ ಪ್ರಶ್ನಿಸಿದ್ದಾನೆ. ಈ ಎಲ್ಲಾ ಕಾರಣಗಳಿಗೆ ಆತ ವರ್ಷಿತಾಳನ್ನು ಕೊಲೆ ಮಾಡಲು ಸಂಚು ರೂಪಿಸಿ ಕರೆಸಿಕೊಂಡಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.

ವರ್ಷಿತಾ ಕೊಲೆ ಪ್ರಕರಣದಲ್ಲಿ ಚೇತನ್‌ನನ್ನು ಪೊಲೀಸರು ಗುರುವಾರ ಬಂದಿಸಿದ್ದು, ಸ್ಥಳ ಮಹಜರು ನಡೆಸಿದ್ದಾರೆ. ಇತ್ತ ವರ್ಷಿತಾ ಪೋಷಕರು ಕೋವೆರಹಟ್ಟಿಯಲ್ಲಿ ಆಕೆಯ ಅಂತ್ಯಕ್ರಿಯೆ ನಡೆಸಿದ್ದಾರೆ.
ಇದನ್ನೂ ಓದಿ: ಸಚಿವ ಡಿ.ಸುಧಾಕರ್ ಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ | ಸಹಕಾರ ಕ್ಷೇತ್ರದ ಗಣನೀಯ ಸೇವೆಗೆ ಸಂದ ಗೌರವ
ಕೋವೆರಹಟ್ಟಿಯ ಜ್ಯೋತಿ ಹಾಗೂ ತಿಪ್ಪೇಸ್ವಾಮಿ ಅವರ ಮೊದಲ ಪುತ್ರಿ ವರ್ಷಿತಾ ಚಿತ್ರದುರ್ಗದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿದ್ದು ಬಿಎ ಓದುತ್ತಿದ್ದರು.
ಮಲ್ಟಿ ನೆಟ್‌ವರ್ಕಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಜೊತೆ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿ ವರ್ಷಿತಾಗೆ ಕೆಲಸ ಕೊಡಿಸುವ ಭರವಸೆ ನೀಡಿ ಸಲುಗೆ ಬೆಳೆಸಿಕೊಂಡಿದ್ದ. ಸ್ನೇಹ ಪ್ರೀತಿಯಾಗಿತ್ತು.
ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿನಿಯ ಕೊಲೆ | ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆ
ತನಿಖೆ ವೇಳೆ ಚೇತನ್‌ಗೆ ಮೂರನೇ ಹಂತದ ಕ್ಯಾನ್ಸರ್ ಖಾಯಿಲೆ ಇರುವುದು ಗೊತ್ತಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಕೂಡಾ ಖಚಿತಪಡಿಸಿದ್ದಾರೆ.
ಕತ್ತು ಹಿಸುಕಿ ಕೊಂದು ಪೆಟ್ರೋಲ್ ಹಾಕಿ ಸುಟ್ಟ:
ಆಗಸ್ಟ್ 14 ರಂದು ಹಾಸ್ಟೆಲ್‌ನಿಂದ ಹೊರಟಿದ್ದು, ಹಿರಿಯೂರು ತಾಲೂಕಿನ ಸಿದ್ದವ್ವನಹಳ್ಳಿಯಲ್ಲಿರುವ ಚಿಕ್ಕಮ್ಮನ ಮನೆಗೆ ಹೋಗಿ ಮಾತನಾಡಿದ್ದಾರೆ.
ಇದನ್ನೂ ಓದಿ: ಹಿರಿಯೂರು ಮಾಜಿ ಶಾಸಕ ಆರ್.ರಾಮಯ್ಯ ನಿಧನ
ಆ.18 ರಂದು ಮಧ್ಯಾಹ್ನದ ವೇಳೆಗೆ ಗೋನೂರು ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಹೋಟೆಲ್ ಪಕ್ಕದ ಜಮೀನಿನಲ್ಲಿ ವರ್ಷಿತಾ ಮೇಲೆ ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ.
ಮೊದಲೇ ತಂದಿದ್ದ ಪೆಟ್ರೋಲ್ ಆಕೆಯ ಮೇಲೆ ಸುರಿದು ಸುಟ್ಟಿದ್ದಾನೆ. ಮಳೆ ಇದ್ದ ಕಾರಣಕ್ಕೆ ದೇಹ ಪೂರ್ತಿ ಸುಟ್ಟಿಲ್ಲ. ಮತ್ತೊಮ್ಮೆ ಹೋಗಿ ಪೆಟ್ರೋಲ್ ತಂದು ಸುಡುವ ಪ್ರಯತ್ನ ಮಾಡಿದ್ದಾನೆ ಎಂದು ಎಸ್ಪಿ ಹೇಳಿದರು.
ಇದನ್ನೂ ಓದಿ: ಸರ್ವೇಯರ್ ಲೋಕಾಯುಕ್ತ ಬಲೆಗೆ | ಹತ್ತು ಸಾವಿರ ಲಂಚ ಪಡೆಯುವಾಗ ರೈಡ್
ಪ್ರಕರಣದಲ್ಲಿ ಪೋಸ್ಟ್ ಮಾರ್ಟಮ್ ವರದಿ ಇನ್ನೂ ಕೈ ಸೇರಿಲ್ಲ. ಎಫ್‌ಎಸ್‌ಎಲ್ ವರದಿಯನ್ನು ನಿರೀಕ್ಷೆ ಮಾಡುತ್ತಿದ್ದೇವೆ. ನಂತರ ಇನ್ನಷ್ಟು ಮಾಹಿತಿಗಳು ಲಭಿಸಲಿವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರತಿಭಟನೆ, ಒತ್ತಡದ ನಡುವೆಯೂ ಡಿವೈಎಸ್ಪಿ ಸೇರಿದಂತೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿ ಆರೋಪಿ ಬಂದಿಸಿದ್ದಾರೆ. ಈ ತಂಡಕ್ಕೆ ನಗದು ಬಹುಮಾನ ನೀಡುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
ಊಹಾಪೋಹ ಹಬ್ಬಿಸಿದರೆ ಕ್ರಮ:
ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಊಹಾಪೋಹದ ಸುದ್ದಿ ಹರಿಬಿಟ್ಟಿದ್ದಾರೆ. ಇಲಾಖೆ ಅಧಿಕೃತವಾಗಿ ತಿಳಿಸುವ ಸತ್ಯಾಂಶಗಳನ್ನು ಮಾತ್ರ ಪ್ರಚಾರ ಮಾಡಬೇಕು. ಊಹಾತ್ಮಕ ಸುದ್ದಿ ಹರಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಸ್ಪಿ ಸೋಷಿಯಲ್ ಮೀಡಿಯಾಗಳಿಗೆ ಎಚ್ಚರಿಕೆ ನೀಡಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
