
CHITRADURGA NEWS | 18 AUGUST 2024
ಚಿತ್ರದುರ್ಗ: ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ರಂಜಿತ್ ಕುಮಾರ್ ಬಂಡಾರು ಆ.18 ಭಾನುವಾರ ಅಧಿಕಾರ(took charge) ವಹಿಸಿಕೊಂಡಿದ್ದಾರೆ.
ಕ್ಲಿಕ್ ಮಾಡಿ ಓದಿ: VV Sagara Inflow; ವಿವಿ ಸಾಗರಕ್ಕೆ ಭರ್ಜರಿ ನೀರು | ಇಂದಿನ ಒಳಹರಿವು ಎಷ್ಟು ಗೊತ್ತಾ…
ಕೇಂದ್ರ ಸೇವೆಗೆ ವಿಜ್ಞಾನಿಯಾಗಿ ನಾಲ್ಕು ವರ್ಷಗಳ ಅವಧಿಗೆ ನಿಯೋಜನೆ ಆಗಿರುವ ಧರ್ಮೇಂದ್ರ ಕುಮಾರ್ ಮೀನಾ ಅಧಿಕಾರ ಹಸ್ತಾಂತರಿಸಿದರು.
ಚಿತ್ರದುರ್ಗ ಎಸ್ಪಿ ಆಗಿದ್ದ ಧರ್ಮೇಂದರ್ ಕುಮಾರ್ ಮೀನಾ ಅವರು ಕಳೆದ ತಿಂಗಳು ದೆಹಲಿಗೆ ವರ್ಗಾವಣೆಯಾಗಿದ್ದರು.
ರಾಜ್ಯ ಸರ್ಕಾರಿ ಸೇವೆಯಿಂದ ಕೇಂದ್ರ ಸೇವೆಗೆ ತೆರಳಲು ರಾಜ್ಯ ಸರ್ಕಾರವೂ ಅವರಿಗೆ ಅನುಮೋದನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಂಜಿತ್ ಕುಮಾರ್ ಬಂಡಾರು ಅವರನ್ನ ನೇಮಕ ಮಾಡಿ ಆದೇಶ ಹೊರಡಿಸಿದೆ.
ಕ್ಲಿಕ್ ಮಾಡಿ ಓದಿ: Accident; ಭೀಕರ ಬೈಕ್ ಅಪಘಾತ | ಸವಾರ ಸಾವು, ಇನ್ನೋರ್ವ ಗಂಭೀರ
2017 ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿ ರಂಜಿತ್ ಬಂಡಾರು ನೇಮಕವಾಗಿದ್ದರು. ಇದೀಗ ಚಿತ್ರದುರ್ಗ ಜಿಲ್ಲೆಗೆ ನೂತನ ಎಸ್ಪಿಯಾಗಿ ನೇಮಕವಾಗಿದ್ದಾರೆ.
ನವದೆಹಲಿಯ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ (NTRO) ಪೇ ಮ್ಯಾಟ್ರಿಕ್ಸ್ ಹಂತ 12ರ ವಿಜ್ಞಾನಿಯನ್ನಾಗಿ ಧರ್ಮೇಂದರ್ ಕುಮಾರ್ ಮೀನಾ ನೇಮಕವಾಗಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
