ಮುಖ್ಯ ಸುದ್ದಿ
ರ್ಯಾಂಕ್ ಪಡೆದ ಎಸ್‍ಜೆಎಂ ಕಾಲೇಜು ವಿದ್ಯಾರ್ಥಿನಿಯರು

Published on
CHITRADURGA NEWS | 25 JANUARY 2025
ಚಿತ್ರದುರ್ಗ: ದಾವಣಗೆರೆ ವಿಶ್ವವಿದ್ಯಾನಿಲಯ ನಡೆಸಿದ 2023-24ನೇ ಸಾಲಿನ ಅಂತಿಮ ವರ್ಷದ ಬಿ.ಎ. ಪದವಿ ಪರೀಕ್ಷೆಗಳಲ್ಲಿ ಚಿತ್ರದುರ್ಗದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಅಂತಿಮ ಬಿ.ಎ. ವಿದ್ಯಾರ್ಥಿನಿಯರಾದ ಜೆ.ಚೇತನ 8ನೇ ರ್ಯಾಂಕ್ ಮತ್ತು ಕೆ.ಅಮೃತಸಿರಿ 10ನೇ ರ್ಯಾಂಕ್ ಪಡೆದಿದ್ದಾರೆ ಎಂದ ಪ್ರಾಚಾರ್ಯ ಡಾ.ಎಲ್.ಈಶ್ವರಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: RTO ಕಚೇರಿಯಲ್ಲಿ ಕಡತ ನಿರ್ವಹಣೆಯ ವೈಪಲ್ಯ | ಸುಮೋಟೊ ಕೇಸ್

ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ, ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಹಾಗೂ ಕಾಲೇಜಿನ ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
Continue Reading
Related Topics:BA Rank, Chitradurga, Chitradurga news, Davangere University, kannada latest, Kannada News, SJM College, ಎಸ್‍ಜೆಎಂ ಕಾಲೇಜು, ಕನ್ನಡ ಲೇಟೆಸ್ಟ್, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ದಾವಣಗೆರೆ ವಿಶ್ವವಿದ್ಯಾನಿಲಯ, ಬಿಎ ರ್ಯಾಂಕ್

Click to comment