Connect with us

    Murugha matha: ಅಕ್ಟೋಬರ್ 5 ರಿಂದ 13 ರವರೆಗೆ ಶರಣ ಸಂಸ್ಕøತಿ ಉತ್ಸವ | ಮುರುಘಾ ಮಠದಲ್ಲಿ ನಡೆದ ಪೂರ್ವಭಾವಿ ಸಭೆ

    Murugha matha meating

    ಮುಖ್ಯ ಸುದ್ದಿ

    Murugha matha: ಅಕ್ಟೋಬರ್ 5 ರಿಂದ 13 ರವರೆಗೆ ಶರಣ ಸಂಸ್ಕøತಿ ಉತ್ಸವ | ಮುರುಘಾ ಮಠದಲ್ಲಿ ನಡೆದ ಪೂರ್ವಭಾವಿ ಸಭೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 24 AUGUST 2024

    ಚಿತ್ರದುರ್ಗ: ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಿಂದ(Murugha matha) ಪ್ರತಿವರ್ಷದಂತೆ ಈ ಬಾರಿಯ ಶರಣಸಂಸ್ಕøತಿ ಉತ್ಸವವನ್ನು ಅಕ್ಟೋಬರ್ 5 ರಿಂದ 13 ರವರೆಗೆ 9ದಿನಗಳ ಕಾಲ ನಡೆಯಲಿದೆ.

    ಡಾ.ಬಸವಕುಮಾರ ಸ್ವಾಮಿಗಳು ಮಾತನಾಡಿ, ಈ ವರ್ಷಕ್ಕೆ ಪೀಠದ ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳ ಜಯಂತಿ 150 ವರ್ಷಗಳಾಗಲಿದೆ. 53 ವರ್ಷಗಳ ಕಾಲ ಶ್ರೀಮಠದ ಪೀಠವನ್ನು ಅಲಂಕಸಿರುತ್ತಾರೆ. ಶ್ರೀಗಳ 100ನೇ ಜಯಂತಿಯನ್ನು ದಾವಣಗೆರೆಯಲ್ಲಿ ಮಲ್ಲಿಕಾರ್ಜುನ ಶ್ರೀಗಳು ಆಚರಿಸುತ್ತಾರೆ. ಈ ವರ್ಷ ಪೂರ್ತಿ ಜಯದೇವ ಶ್ರೀಗಳ ಕುರಿತು ಅರ್ಥಪೂರ್ಣವಾಗಿ 150 ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

    ಇದನ್ನೂ ಓದಿ: ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಪೊಲೀಸ್ ಇಲಾಖೆಯಿಂದ ಮಹತ್ವದ ಸೂಚನೆ

    ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು ಮಾತನಾಡಿ, ಮಧ್ಯಕರ್ನಾಟಕದ ನಾಡಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಈ ಬಾರಿ ಪುರುಷ ಮತ್ತು ಮಹಿಳಾ ಕ್ರೀಡಾಕೂಟವನ್ನು 150ನೇ ವರ್ಷದ ಜಯಂತಿ ಅಂಗವಾಗಿ ಶ್ರೀ ಜಯದೇವ ಶ್ರೀಗಳ ಹೆಸರಿನಲ್ಲಿ ಆಯೋಜಿಸಲಾಗುವುದು ಎಂದರು.

    ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಶ್ರೀಮಠಕ್ಕೆ ತನ್ನದೇ ಆದ ಇತಿಹಾಸವಿದ್ದು, ಜಾತಿ, ಮತ, ಲಿಂಗಭೇದವಿಲ್ಲದೆ ಬಸವಾದಿ ಶರಣರ ಆಶಯಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಶೂದ್ರರಿಗೆ ಶಿಕ್ಷಣ ಕೊಡಲು ಸಾಧ್ಯವಾಗದ ಸಂದರ್ಭದಲ್ಲಿ ಚಿತ್ರದುರ್ಗ ಬೃಹನ್ಮಠ ಅಂತಹ ಅವಕಾಶವನ್ನು ಮಾಡಿಕೊಟ್ಟಿದೆ. ಶರಣಸಂಸ್ಕøತಿ ಉತ್ಸವದಲ್ಲಿ ಗತವೈಭವದ ಚಿಂತನೆಗಳು ನಡೆಯಲಿ ಪ್ರತಿದಿನವೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆಂದರು.

    ಇದನ್ನೂ ಓದಿ: ವಾರದೊಳಗೆ ಭೂ ಸ್ವಾಧೀನ ಪೂರ್ಣಗೊಳಿಸಿ | ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸೂಚನೆ

    ಶ್ರೀ ವಚನಾನಂದ ಸ್ವಾಮಿಗಳು ಮಾತನಾಡಿ, ಶ್ರೀಮಠಕ್ಕೆ ನಾಡಿನಾದ್ಯಂತ ಶಾಖಾಮಠಗಳು, ಹಾಸ್ಟೆಲ್‍ಗಳಿವೆ. ಇದು ವರ್ಷದ ಕಾರ್ಯಕ್ರಮವಾಗಬೇಕು. ಜಯದೇವ ಶ್ರೀಗಳ ಹೆಸರಿನ ಅಂಚೆ ಚೀಟಿ, ನಾಣ್ಯಗಳ ಬಿಡುಗಡೆಯಾಗಲು ಕ್ರಮವಹಿಸಬೇಕು ಎಂದು ಹೇಳಿದರು.

    ಮುರುಘಾ ಮಠ ಹಾಗೂ ಎಸ್‍ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಶಿವಯೋಗಿ ಸಿ ಕಳಸದ್ ಮಾತನಾಡಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top