Dina Bhavishya
Rashi Bhavishya: ದಿನ ಭವಿಷ್ಯ | 25 ಆಗಸ್ಟ್ | ಈ ರಾಶಿಯವರಿಂದ ಹೊಸ ಮನೆ ಖರೀಧಿಗೆ ನಿರ್ಧಾರ


CHITRADURGA NEWS | 25 AUGUST 2024
ಮೇಷ ರಾಶಿ: ಕುಟುಂಬದಲ್ಲಿ ಸಂತಸ ಇರುತ್ತದೆ. ಆದರೆ, ಅನಾವಶ್ಯಕ ಮಾತುಗಳಿಂದ ಕಲಹ ಸಾಧ್ಯತೆ. ಧವಸ, ಧಾನ್ಯ ವ್ಯಾಪಾರದಲ್ಲಿ ಲಾಭ, ಚಿಕ್ಕ ವ್ಯಾಪಾರಿಗಳಿಗೆ ಅತ್ಯುತ್ತುಮ ದಿನ.
ವೃಷಭ ರಾಶಿ: ಕುಟುಂಬದ ವ್ಯವಹಾರದಲ್ಲಿ ಸಹನೆಯಿಂದ ಇರಿ. ಯಂತ್ರಗಳ ಬಳಿ ಕೆಲಸ ಮಾಡುವ ಕಾರ್ಮಿಕರು ಎಚ್ಚರಿಕೆಯಿಂದ ಕೆಲಸ ಮಾಡಿ. ಆರಕ್ಷಕ ವೃತ್ತಿಯವರಿಗೆ ಲಾಭವಿದೆ.

ಮಿಥುನ ರಾಶಿ: ಹೊಸ ವಾಹನ ಖರೀಧಿಯಲ್ಲಿ ಗೊಂದಲವಿದೆ. ದನದ ಅಂತ್ಯಕ್ಕೆ ಶುಭ ಸುದ್ದಿ. ನಿಮ್ಮ ಪ್ರತಿಭೆಗೆ ಕಂಪನಿಯಿಂದ ಯೋಗ್ಯ ಪುರಸ್ಕಾರ ದೊರೆಯಲಿದೆ.
ಕಟಕ ರಾಶಿ: ನಿಮ್ಮ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯಲಿದೆ. ದೇಹ ದಂಡಿಸುವುದರಿಂದ ಅನಾರೋಗ್ಯ ಸಾಧ್ಯತೆ. ಯೋಚಿಸಿ ಸಾಲ ಮಾಡಿ. ಕೃಷಿಕರಿಗೆ ಬೆಳೆಹಾನಿ.
ಸಿಂಹ ರಾಶಿ: ಹೂಡಿಕೆದಾರರಿಂದ ಕಿರಿಕಿರಿಯಾಗಲಿದೆ. ಹೊಸ ಮನೆ ಖರೀಧಿಗೆ ನಿರ್ಧಾರ ಮಾಡುವಿರಿ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿ. ಉದ್ಯೋಗ ಕಳೆದುಕೊಳ್ಳುವ ಭೀತಿಯಿದೆ.
ಕನ್ಯಾ ರಾಶಿ: ಕೊಟ್ಟ ಹಣ ತಿರುಗಿ ಬರುವುದಿಲ್ಲ. ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಿ. ತಂತ್ರಜ್ಞರಿಗೆ ಅನುಕೂಲ. ಉನ್ನತ ಹುದ್ದೆಗೆ ಆಯ್ಕೆಯಾಗಲಿದ್ದೀರಿ.
ಇದನ್ನೂ ಓದಿ: ಜಿಲ್ಲೆಯ ಅಡಿಕೆ ಬೆಳೆಗಾರರಿಗೆಪೊಲೀಸ್ ಇಲಾಖೆಯಿಂದ ಮಹತ್ವದ ಸೂಚನೆ
ತುಲಾ ರಾಶಿ: ಪುಣ್ಯಪ್ರಾಪ್ತಿಗಾಗಿ ಕುಲದೇವರ ದರ್ಶನ. ಭೂಮಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಪೈಪೋಟಿ. ದುಂದು ವೆಚ್ಚ ಆಗಲಿದೆ. ದಿನಾಂತ್ಯಕ್ಕೆ ಆಯಾಸ.
ವೃಶ್ಚಿಕ ರಾಶಿ: ಲೆಕ್ಕಪತ್ರ ಪರಿಶೋಧಕರಿಗೆ ಉತ್ತಮ ದಿನವಾಗಿದೆ. ಹೆಚ್ಚು ಅವಲಂಬನೆಯಿಂದ ಅಸಮಧಾನಗೊಳ್ಳುವಿರಿ. ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವಿರಿ.
ಧನಸ್ಸು ರಾಶಿ: ಆರ್ಥಿಕವಾಗಿ ನಷ್ಟ ಅನುಭವಿಸುವ ದಿನ. ಉದ್ಯೋಗಿ ಮಹಿಳೆಯರಿಗೆ ಬಡ್ತಿಯಿದೆ. ಉತ್ತಮ ವರನೊಂದಿಗೆ ಪುತ್ರಿಯ ಮದುವೆಯ ನಿಶ್ಚಯವಾಗಲಿದೆ.
ಮಕರ ರಾಶಿ: ನಿಮ್ಮ ಬದುಕಿನಲ್ಲಿ ಅನಿರೀಕ್ಷಿತ ಘಟನೆ ನಡೆಯಲಿದೆ. ಆಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಕಲಹ ಸಾಧ್ಯತೆ. ಹೊಸ ವಾಹನ ಖರೀಧಿಸುವಿರಿ. ಇಂದಿನ ಪ್ರಯಾಣ ರದ್ದು.
ಕುಂಭ ರಾಶಿ: ಹೃದಯ ಸಂಬಂಧಿ ಖಾಯಿಲೆ ಕಾಣಿಸಿಕೊಳ್ಳಲಿದೆ. ಅಡಿಕೆ ಮಂಡಿಯಲ್ಲಿ ಸಾಲವಾಗಲಿದೆ. ಮಕ್ಕಳ ಭವಿಷ್ಯದಲ್ಲಿ ಪ್ರಗತಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ವೈಫಲ್ಯ.
ಮೀನಾ ರಾಶಿ: ರೇಷ್ಮೆ ಕೃಷಿಕರಿಗೆ ಲಾಭ. ಉನ್ನತ ಹುದ್ದೆ ಆಕಾಂಕ್ಷಿಗಳಿಗೆ ಶುಭವಾಗಲಿದೆ. ವೀಸಾ ಸಮಸ್ಯೆಗೆ ಪರಿಹಾರವೂ ಸಿಗಲಿದೆ. ತುಸು ಸಾಲ ಹೆಚ್ಚಾಗಲಿದೆ.
