
CHITRADURGA NEWS | 30 January 2026
ಚಿತ್ರದುರ್ಗ: ಮೀಸಲಾತಿ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಗಮನ ಸೆಳೆಯಲು ಎಸ್ಸಿ, ಎಸ್ಟಿ ಸಮಾವೇಶ ನಡೆಸಲಾಗುವುದು ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.
ಇದನ್ನೂ ಓದಿ: ಸೊಸೈಟಿ ನಿರ್ದೇಶಕರು, ಸಿಇಓ ಗಳಿಗೆ ತರಬೇತಿ | ರಾಜ್ಯ ಮಟ್ಟದ ಕಾರ್ಯಾಗಾರ

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.56 ಮೀರಿದ್ದು, ಇದನ್ನು ಯಥಾವತ್ ಜಾರಿ ಮಾಡಬೇಕು ಎಂದರು.
ಒಳಮೀಸಲಾತಿ ಪ್ರಕರಣ ಕೋರ್ಟ್ ಮುಂದೆ ಹೋಗಿದೆ. ಮೀಸಲಾತಿ ಶೇ.50 ಮೀರಿದ ಕಾರಣಕ್ಕೆ ಈ ಸಮಸ್ಯೆ ಇದೆ. ಆದರೂ, ನ್ಯಾಯಾಲಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಿ ಎನ್ನುವ ಸಲಹೆ ನೀಡಿದೆ. ಈ ನಿಟ್ಟಿನಲ್ಲಿ ಸರ್ಕಾರ ಖಾಲಿ ಹುದ್ದೆ ಭರ್ತಿಗೆ ಮುಂದಾಗಬೇಕು. ಬ್ಯಾಕ್ಲಾಗ್ ಹುದ್ದೆಗಳನ್ನು ಮೆರಿಟ್ ಆಧಾರದಲ್ಲಿ ತುಂಬುವ ಅವಕಾಶ ಇದೆ. ಅದನ್ನು ಪಾಲಿಸಬೇಕು ಎಂದು ಒತ್ತಾಯಿಸಿದರು.
ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿಯನ್ನು ಶೇ.50 ಮೀರಬಾರದು ಎಂದು ನ್ಯಾಯಾಲಯ ಹೇಳಿತ್ತು. ಆದರೆ, ವಿಶೇಷ ಸಂದರ್ಭಗಳಲ್ಲಿ ರಾಜ್ಯದಲ್ಲಿ ಹಿಂದುಳಿದವರು, ಬಡವರು ಹೆಚ್ಚಾಗಿದ್ದಾಗ ಮೀರಲು ಅವಕಾಶ ಇದೆ. ಬೇರೆ ಬೇರೆ ರಾಜ್ಯಗಳಲ್ಲಿ ಮಾಡಿರುವಂತೆ ಇಲ್ಲಿಯೂ ಮೀಸಲಾತಿ ಅಳವಡಿಸಬೇಕು ಎಂದು ಒತ್ತಾಯ ಮಾಡಿದರು.
ಇದನ್ನೂ ಓದಿ: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ | ಮನೋಹರ ಮಠದ್ ಭಾಗೀ
ಶೇ.6 ರಷ್ಟು ಮೀಸಲಾತಿ ಹೆಚ್ಚಾಗುತ್ತದೆ. ಇದನ್ನು ಕಡಿಮೆ ಮಾಡಿದರೆ ನಮಗೆಲ್ಲಾ ಅನ್ಯಾಯ ಆಗುತ್ತದೆ. ಈಗ ಇರುವ ಮೀಸಲಾತಿ ಬ್ರಿಟೀಷರ ಕಾಲದ್ದು. ನೂರು ವರ್ಷಗಳಾಗಿವೆ. ಇದನ್ನು ಹೊಸ ಅಂಕಿ ಅಂಶಗಳ ಆಧಾರದಲ್ಲಿ ಮೀರಬೇಕು. ಕೇಂದ್ರದಲ್ಲಿ ಇಡಬ್ಕ್ಯುಎಸ್ ಜಾರಿ ಮಾಡಿದಂತೆ ಮಾಡಬೇಕು. ಮೀಸಲಾತಿ ಶೇ.50ಕ್ಕಿಂತ ಹೆಚ್ಚು ಮಾಡಿದ್ದು ಬಿಜೆಪಿ ಸರ್ಕಾರ.
ಬಿಜೆಪಿಯವರು ಹೆಚ್ಚು ಚುರುಕಾಗಿ ಕೆಲಸ ಮಾಡಬೇಕು. ಈ ಹಿನ್ನೆಲೆಯಲ್ಲಿ ಅತೀ ಶೀಘ್ರದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮಾವೇಶ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯುವ ಕೆಲಸ ಮಾಡಲಿದ್ದೇವೆ ಎಂದರು.
ಅಲೆಮಾರಿಗಳಿಗೆ ಸಿದ್ದರಾಮಯ್ಯ ನ್ಯಾಯ ಕೊಡುವ ಭರವಸೆ:ಒಳಮೀಸಲಾತಿ ಅನುಷ್ಠಾನಕ್ಕೆ ತರುವಾಗ ಅಲೆಮಾರಿ ಸಮುದಾಯಗಳಿಗೆ ಶೇ.1 ರಷ್ಟು ಮೀಸಲಾತಿಯನ್ನು ಪ್ರತ್ಯೇಕವಾಗಿ ಕೊಡಬೇಕಾಗಿತ್ತು.ಪರಿಶಿಷ್ಟರಲ್ಲಿ ಸ್ವಲ್ಪ ಮುಂದುವರೆದ ಸಿ ಗುಂಪಿನಲ್ಲಿ ಅಲೆಮಾರಿಗಳನ್ನು ಸೇರಿಸಲಾಗಿದೆ. ಈ ಬಗ್ಗೆ ಹೈಕೋರ್ಟ್‌ಮೊರೆ ಹೋಗಿದ್ದಾರೆ.
ಇದನ್ನೂ ಓದಿ: JJM ಕಾಮಗಾರಿ ಕಳಪೆ | ಕೇಂದ್ರದ ಮಧ್ಯ ಪ್ರವೇಶಕ್ಕೆ ಗೋವಿಂದ ಕಾರಜೋಳ ಒತ್ತಾಯ
ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ನ್ಯಾಯ ಕೊಡುವ ಭರವಸೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಹಿಂಪಡೆಯುವ ವಿಶ್ವಾಸ ಇದೆ.ಈ ನಡುವೆ ಒಳಮೀಸಲಾತಿ ಜಾರಿ ಆಗುತ್ತಾ ಎನ್ನುವ ಬಗ್ಗೆ ನಮ್ಮ ಸಮುದಾಯದಲ್ಲಿ ಆತಂಕ ಮೂಡಿದೆ.
ಈಗಾಗಲೇ ಶಿಕ್ಷಣದಲ್ಲಿ ಒಳಮೀಸಲಾತಿ ಸಿಗುತ್ತಿದೆ. ಮೆಡಿಕಲ್ ಸೀಟುಗಳು ಸುಮಾರು ನೂರು ಜನರಿಗೆ ಸಿಕ್ಕಿದೆ. ಉದ್ಯೋಗಕ್ಕೆ ಮಾತ್ರ ತಡೆ ಇದೆ. ಕಾನೂನಾತ್ಮಕ ಬಲ ಬರಲಿ ಎನ್ನುವ ದೃಷ್ಟಿಯಿಂದ ಅಧಿವೇಶನದಲ್ಲಿ ಪಾಸ್ ಆಗಿದೆ. ರಾಜ್ಯಪಾಲರು ಬೇರೆ ಬೇರೆ ಕಾರಣಗಳಿಗೆ ವಾಪಾಸು ಕಳಿಸಿದ್ದಾರೆ.
ಇದನ್ನೂ ಓದಿ: ಆದರ್ಶ ವಿದ್ಯಾಲಯ | 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
ರಾಜ್ಯಪಾಲರು ಒಪ್ಪದಿದ್ದರೂ ಒಳಮೀಸಲಾತಿ ಜಾರಿ ಆಗುತ್ತದೆ. ಆದರೂ, ಎರಡೂ ಸದನಗಳಲ್ಲಿ ಸರ್ವಾನುಮತದಿಂದ ಒಪ್ಪಿರುವ ಈ ಬಿಲ್ ಅನ್ನು ಸಂವಿಧಾನದ ರಕ್ಷಕರಾಗಿ ರಾಜ್ಯಪಾಲರು ಅನುಮೋದನೆ ಮಾಡಬೇಕು ಎಂದು ಒತ್ತಾಯ ಮಾಡಲಿದ್ದೇವೆ. ಮಾಡದಿದ್ದರೂ ಕಾಯ್ದೆ ಜಾರಿ ಆಗುತ್ತದೆ.ಸುದ್ದಿಗೋಷ್ಠಿಯಲ್ಲಿ ರವಿವರ್ಮ ವಕೀಲರಾದ ರವೀಂದ್ರ, ಕಾಂಗ್ರೆಸ್ ಮುಖಂಡ ಅನಿಲ್ ಕೋಟಿ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
