CHITRADURGA NEWS | 31 MAY 2026
ಚಿತ್ರದುರ್ಗ: ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಎಸ್.ಜೆ.ಎಂ.ವಿದ್ಯಾಪೀಠ ಹಾಗೂ ಎಸ್.ಜೆ.ಎಂ.ವಿಶ್ವವಿದ್ಯಾಲಯದ ವತಿಯಿಂದ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿರುವ ಸಸಿ ನೆಡುವ ಸಪ್ತಾಹದಲ್ಲಿ ಮೊದಲನೆಯ ದಿನದಂದು ಸಪ್ತಾಹದ ಉದ್ಘಾಟನಾ ಹಾಗೂ ನೀರು ಮತ್ತು ಪರಿಸರ ವಿಷಯ ಕುರಿತು ಕಾರ್ಯಕ್ರಮವನ್ನು ಲಕ್ಷ್ಮಿ ಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿತ್ತು.
ಇದನ್ನೂ ಓದಿ: ಜಿಲ್ಲಾ ಯಾದವ ಗೊಲ್ಲ ಸಂಘದ ಅಧ್ಯಕ್ಷರಾಗಿ ಮೀಸೆ ಮಹಾಲಿಂಗಪ್ಪ ಆಯ್ಕೆ | ಭಾರೀ ಪೈಪೋಟಿಯಲ್ಲಿ ಮೇಲುಗೈ ಸಾಧಿಸಿದ ಮಹಾಲಿಂಗಪ್ಪ ಬಣ
ಶ್ರೀ ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿ, ಪರಿಸರದ ಪ್ರಮುಖ ಅಂಗವಾದ ನೀರು ಜೀವ ಸಂಕುಲದ ಉಳಿವಿಗೆ ಮೂಲಾಧರ. ಪರಿಸರದ ಸಮತೋಲನಕ್ಕೆ ಇದು ಅತ್ಯಗತ್ಯ. ಭೂಮಿಯ ಮೇಲಿನ ಸಕಲ ಜೀವಿಗಳ ಅಸ್ತಿತ್ವಕ್ಕೆ, ಪರಿಸರದಲ್ಲಿನ ಜೀವ ವೈವಿಧ್ಯದ ಪೋಷಣೆಗೆ ನೀರು ಬೇಕೇ ಬೇಕು. ಇಂದು ನಾವು ಮನುಷ್ಯರಿಗೆ ಅನ್ನ ಕೊಡಬಹುದು. ಆದರೆ ಗಿಡಗಳಿಗೆ ನೀರು ಕೊಡುವ ಕೆಲಸ ಅದಕ್ಕಿಂತ ದೊಡ್ಡದು.
ಶ್ರೀ ಮುರುಘಾಮಠ ಕೇವಲ ಗಿಡ ನೆಡುತ್ತಿಲ್ಲ. ಅವುಗಳಿಗೆ ಟ್ಯಾಂಕರ್ ಮೂಲಕ ನಿರಂತರವಾಗಿ ನೀರುಣಿಸುವ ಕೆಲಸವನ್ನು ಮಾಡುತ್ತೇವೆ ಎಂಬ ಶ್ರೀ ಬಸವಕುಮಾರ ಸ್ವಾಮೀಜಿಗಳ ನುಡಿಗಳು ಪರಿಸರದ ಕಡೆಗೆ ಶ್ರೀಮಠದ ಕಾಳಜಿಯನ್ನು ತೋರಿಸುತ್ತದೆ. ಶ್ರೀಮಠದ ಕಾರ್ಯ ಆದರ್ಶನೀಯ. ಮನುಷ್ಯ ಇಂದು ಬದುಕಬೇಕಾದರೆ ನೀರಿರಬೇಕು. ನೀರಿದ್ದರೆ ಮಾತ್ರ ಪ್ರಾಣ. ನೀರಿದ್ದರೆ ಜೀವರಾಶಿ ಉಳಿಯುತ್ತದೆ. ನೀರು ಬೇಕೆಂದರೆ ಮಳೆ ಬೇಕು. ಮಳೆ ಬರಲು ಹಸಿರಿರಬೇಕು. ಪ್ರಕೃತಿಯಲ್ಲಿ ಒಂದಕ್ಕೊಂದು ಪೂರಕವಾಗಿಬೇಕು. ಸಸಿ ನೆಡುವುದು ಎಷ್ಟು ಮುಖ್ಯವೋ ಅದರ ಸಂರಕ್ಷಣೆ ಕೂಡಾ ಅಷ್ಟೇ ಮಖ್ಯ ಎಂದು ತಿಳಿಸಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಮುರುಘಾಮಠವು ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿಸುವ ಹಿನ್ನಲೆಯಲ್ಲಿ ಸಸಿ ನೆಡುವ ಸಪ್ತಾಹವನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಈ ಕಾರ್ಯಕ್ಕೆ ವಿವಿಧ ಗ್ರಾಮಗಳ ಗ್ರಾಮಸ್ಥರು ಹಾಗೂ ವಿವಿಧ ಸಮಾಜ, ಸಂಘ ಸಂಸ್ಥೆಗಳು ಕೈ ಜೋಡಿಸುತ್ತಿರುವುದು ಶ್ಲಾಘನೀಯ.
ಇದನ್ನೂ ಓದಿ: ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ
ಹಿಂದಿನಿಂದಲೂ ಶ್ರೀಮಠ ಪರಿಸರದ ಸಂರಕ್ಷಣೆಗೆ ಹಾಗೂ ಬೆಳವಣಿಗೆಗೆ ಪ್ರಾಮುಖ್ಯತೆ ನೀಡುತ್ತಾ ಬಂದಿದೆ. ಈ ಪರಂಪರೆ ನಿರಂತರವಾಗಿ ಸಾಗುತ್ತದೆ. ಆಂದ್ರದಲ್ಲಿ ಪರಿಸರ ಸರ‍್ಕಷಣೆಗೆ ವೈಜ್ಞಾನಿಕ ಪ್ರಾಜೆಕ್ಟ್ ತಯಾರಿಸಲಾಗಿದೆ. ಇದೇ ರೀತಿಯಲ್ಲಿ ನಮ್ಮ ರೈತರು ಸಹ ಇಂತಹ ಪ್ರಾಜೆಕ್ಟ್ಗಳ ಸದ್ಭಳಕೆ ಮಾಡಿಕೊಳ್ಳಬೇಕು. ಪರಿಸರದ ಉಳಿವಿಗೆ ಪ್ರತಿಯೊಬ್ಬರು ಸಹ ಜವಾಬ್ದಾರಿ ಅರಿತುಕೊಂಡು ತಮ್ಮ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ರಾಜ್ಯ ಹಾಗೂ ರಾಷ್ಟ್ರ ಪುರಸ್ಕೃತ ಅಂತರ್ಜಲ ತಜ್ಞರಾದ ಡಾ.ಎನ್ ಜೆ ದೇವರಾಜರೆಡ್ಡಿ ವಿಷಯಾವಲೋಕನ ಮಾಡಿ ಮಾತನಾಡಿ, ಮನುಷ್ಯನ ಆತಿಯಾದ ಆಸೆಯಿಂದ ಪ್ರಕೃತಿಯ ಶೋಷಣೆಯಿಂದ ಭೂಮಿ ಬರಡಾಗುತ್ತಿದೆ. ನಾವು ಉಳಿಯಬೇಕೆಂದರೆ ಪರಿಸರವನ್ನು ಉಳಿಸಬೇಕು. ನೀರು ಮತ್ತು ಮರಗಳ ಸಂರಕ್ಷಣೆಯಿಂದ ಮಾತ್ರ ಈ ಭೂಮಿಯನ್ನು ಉಳಿಸಲು ಸಾಧ್ಯ. ಈ ಭೂಮಿಯ ಮೇಲಿನ ಸಕಲ ಜೀವರಾಶಿಗಳ ಉಳಿವಿಗೆ ಜಲ ಸಂರಕ್ಷಣೆ ಅತ್ಯಗತ್ಯ.
ನಮಗೆ ಇರುವುದು ಒಂದೇ ಭೂಮಿ. ಭೂಮಿಯ ಉಳಿವಿಗೆ ಪರಿಸರದ ರಕ್ಷಣೆ ಒಂದೇ ಮಾರ್ಗ. ಮಾನವ ಈಗಾಗಲೇ ಶೇ.80ರಷ್ಟು ನೀರನ್ನು ಖಾಲಿ ಮಾಡಿದ್ದಾನೆ. ಮುಂದಿನ ಪೀಳಿಗೆಗೆ ಈ ಸಂಪನ್ಮೂಲವನ್ನು ಉಳಿಸಬೇಕಾಗಿದೆ. ನೀರು ಕೇವಲ ಮಾನವನಿಗಷ್ಟೇ ಅವಶ್ಯವಲ್ಲ ಎಂಬುದನ್ನು ಮನುಷ್ಯ ಮನಗಾಣಬೇಕಾಗಿದೆ. ಸಕಲ ಜೀವರಾಶಿಗೆ ಮೂಲಾಧರ ನೀರು. ನೀರು ಮತ್ತು ಪರಿಸರದ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.
ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಉಪ ಸಂರಕ್ಷಣಾಧಿಕಾರಿಗಳಾದ ಜಿ.ಗೋಪ್ಯಾನಾಯ್ಕ್ ಮಾತನಾಡಿದರು.
ಇದನ್ನೂ ಓದಿ: ಎಲ್ಲೆಂದರಲ್ಲಿ ಕಸ ಎಸೆದರೆ ಬೀಳಲಿದೆ ದಂಡ | ಕಸ ಎಸೆಯುವ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ | ADC
ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಅಧ್ಯಕ್ಷರಾದ ಶ್ರೀ ಶಿವಯೋಗಿ ಸಿ ಕಳಸದ್, ಗುರುಮಠಕಲ್ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಶಿರಸಂಗಿಯ ಶ್ರೀ ಬಸವ ಸ್ವಾಮೀಜಿ, ಕೊಲ್ಲಾಪುರ ಹಾಗೂ ಸಾಯಗಾವ್‌ನ ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿಗಳು, ಆಡಳಿತಮಂಡಳಿಯ ಸದಸ್ಯರಾದ ಶ್ರೀ ಎಸ್.ಎನ್.ಚಂದ್ರಶೇಖರ್ ಸೇರಿದಂತೆ ಲಕ್ಷ್ಮಿಸಾಗರ ಗ್ರಾಮಪಂಚಾಯಿತಿ ವ್ಯಾಪ್ತಿ ಗ್ರಾಮಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿದರು, ಎಸ್.ಎಂ. ತೇಜಸ್ವಿನಿ ಸ್ವಾಗತಿಸಿ, ಬಿ.ಎಸ್.ಪೂಜಾ ನಿರೂಪಿಸಿದರು. ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಎಸ್.ಜೆ.ಎಂ.ಫಾರ್ಮಸಿ ಮಹಾವಿದ್ಯಾಲಯದ ಸಿಬ್ಬಂದಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
