CHITRADURGA NEWS | 30 MAY 2026
ಚಿತ್ರದುರ್ಗ: ನಗರದ ರಂಗಯ್ಯನ ಬಾಗಿಲು ಬಳಿಯಿರುವ ಜಿಲ್ಲಾ ಯಾದವ ಗೊಲ್ಲ ಸಂಘದ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆ ತೀವ್ರ ಕುತೂಹಲದಿಂದ ಕೂಡಿತ್ತು.ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳ ಆಯ್ಕೆಗೆ ನಿರ್ದೇಶಕರು ಮತಚಲಾಯಿಸುವ ಈ ಚುನಾವಣೆಯಲ್ಲಿ ಸಿ.ಮಹಲಿಂಗಪ್ಪ ನೇತೃತ್ವದ ಸಿಂಡಿಕೇಟ್ ಎಲ್ಲಾ ನಾಲ್ಕೂ ಪ್ರಮುಖ ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ಅಭೂತಪೂರ್ವ ಜಯ ಸಾಧಿಸಿದೆ.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್..
ಈ ಗೆಲುವಿನೊಂದಿಗೆ ‘ಮೀಸೆ’ ಮಹಲಿಂಗಪ್ಪ ಅವರು ಮತ್ತೊಮ್ಮೆ ಸಂಘದ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.ಸಂಘದ ಒಟ್ಟು 15 ನಿರ್ದೇಶಕರು ಈ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದರು.
ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಮತದಾನ ಪ್ರಕ್ರಿಯೆಯಲ್ಲಿ ಮಹಲಿಂಗಪ್ಪ ಅವರ ಪ್ಯಾನಲ್ ಸ್ಪಷ್ಟ ಮೇಲುಗೈ ಸಾಧಿಸಿತು.
ಪದಾಧಿಕಾರಿಗಳ ವಿವರ ಮತ್ತು ಮತಗಳ ಹಂಚಿಕೆ:
ಅಧ್ಯಕ್ಷ ಸ್ಥಾನ: ಹಾಲಿ ಅಧ್ಯಕ್ಷ ಸಿ. ಮಹಲಿಂಗಪ್ಪ (ಮೀಸೆ ಮಹಲಿಂಗಪ್ಪ) ಅವರು 8 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ವೀರೇಶ್ (7 ಮತ) ಅವರ ವಿರುದ್ಧ ಜಯಭೇರಿ ಬಾರಿಸಿದರು.
ಉಪಾಧ್ಯಕ್ಷ ಸ್ಥಾನ: ಬಿ.ಆರ್. ರಾಮಲಿಂಗಯಾದವ್ ಅವರು 8 ಮತಗಳನ್ನು ಗಳಿಸಿ, ಎ. ಚಿತ್ತಪ್ಪ (7 ಮತ) ಅವರನ್ನು ಪರಾಭವಗೊಳಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಕಾರ್ಯದರ್ಶಿ ಸ್ಥಾನ: ಎನ್. ಕಿರಣ್ ಕುಮಾರ್ ಯಾದವ್ ಅವರು 8 ಮತಗಳ ಬೆಂಬಲದೊಂದಿಗೆ ಎದುರಾಳಿ ಅಶೋಕ (7 ಮತ) ಅವರ ವಿರುದ್ಧ ಗೆಲುವಿನ ನಗೆ ಬೀರಿದರು.
ಖಜಾಂಚಿ ಸ್ಥಾನ: ಬೂದಿಹಳ್ಳಿ ರಾಜಣ್ಣ ಅವರು 8 ಮತಗಳನ್ನು ಪಡೆದು, ಆಕಾರ್ಶ್ (7 ಮತ) ಅವರ ಸವಾಲನ್ನು ಮೆಟ್ಟಿ ನಿಂತು ಖಜಾಂಚಿಯಾಗಿ ನಿಯುಕ್ತರಾದರು.
ಪ್ರತಿಯೊಂದು ಸ್ಥಾನದಲ್ಲೂ ತಲಾ 8 ಮತಗಳನ್ನು ಪಡೆಯುವ ಮೂಲಕ ಮಹಲಿಂಗಪ್ಪ ಸಿಂಡಿಕೇಟ್ ಒಗ್ಗಟ್ಟಿನ ಪ್ರದರ್ಶನ ನೀಡಿದೆ.
ಇದನ್ನೂ ಓದಿ:ಎಲ್ಲೆಂದರಲ್ಲಿ ಕಸ ಎಸೆದರೆ ಬೀಳಲಿದೆ ದಂಡ | ಕಸ ಎಸೆಯುವ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ | ADC
ಕೇವಲ ಒಂದು ಮತದ ಅಂತರದಿಂದ ಪ್ರತಿಸ್ಪರ್ಧಿಗಳು ಪರಾಭವಗೊಂಡಿರುವುದು ಚುನಾವಣೆಯ ತೀವ್ರ ಪೈಪೋಟಿಗೆ ಸಾಕ್ಷಿಯಾಗಿದೆ.
ಗೆಲುವಿನ ಬೆನ್ನಲ್ಲೇ ನೂತನ ಪದಾಧಿಕಾರಿಗಳ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ರಾಜಶೇಖರ್, ಚಿಕ್ಜೆನಹಳ್ಳಿ ಶ್ರೀನಿವಾಸ್, ಗೋವಿಂದಪ್ಪ, ಅಜ್ಜಪ್ಪ, ನರಸಿಂಹಪ್ಪ, ತಮ್ನಣ್ಣ, ಅರುಣ್, ಫಾಲ್ಗುಣಿಶ್, ಈರಣ್ಣ, ನವೀನ ಸೇರಿದಂತೆ ಅಭಿಮಾನಿಗಳ ಬಳಗವೇ ಸೇರಿತ್ತು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

