
CHITRADURGA NEWS | 14 DECEMBER 2025
ಹೊಸದುರ್ಗ: ದಾವಣಗೆರೆಯ ಗಣ್ಯರು, ಶಿಕ್ಷಣ ಸಂಸ್ಥೆಯ ಹರಿಕಾರರು ಶಾಸಕರು, ಮಂತ್ರಿಗಳು, ಸಮಾಜ ಸುಧಾರಕರಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಹಿರಿಯರಾದ ಶಾಮನೂರು ಶಿವಶಂಕರಪ್ಪನವರ ಇಂದು ನಿಧನರಾದ ವಿಷಯ ತಿಳಿದು ತುಂಬಾ ವೇದನೆಯಾಯಿತು. ಅವರ ಕೊನೆಗಾಲದಲ್ಲೂ ಸಮಾಜಪರ ಚಿಂತನೆಯನ್ನು ಇಟ್ಟುಕೊಂಡಂಥವರು.
ಇದನ್ನೂ ಓದಿ: ಕೊಡುಗೈ ದಾನಿ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ
ಶಾಮನೂರು ಶಿವಶಂಕರಪ್ಪನವರು ರಾಜಕೀಯ, ಶೈಕ್ಷಣಿಕ, ಆರ್ಥಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅದ್ಭುತ, ಅನುಪಮ, ಅನುಕರಣೀಯ. ವ್ಯಾಪಾರಿಗಳಾಗಿ, ಶಿಕ್ಷಣ ಪ್ರೇಮಿಗಳಾಗಿ, ಅಖಿಲ ಭಾರತ ವೀರಶೈವ ಸಂಘದ ಅಧ್ಯಕ್ಷರಾಗಿ, ಕೊಡುಗೈ ದಾನಿಗಳಾಗಿ ಪ್ರಖ್ಯಾತರು. ಸದಾ ಹಸನ್ಮುಖಿಗಳಾಗಿ ಅನೇಕರ ಬದುಕಿಗೆ ಬೆಳಕು ನೀಡಿದವರು.
ಅಧಿಕಾರದ, ಶ್ರೀಮಂತಿಕೆಯ ಅಹಂ ಅವರಲ್ಲಿರಲಿಲ್ಲ. ಸರಳ, ಸಜ್ಜನಿಕೆಯ ವ್ಯಕ್ತಿ. ನಾನೇನು ಹುಟ್ಟುತ್ತಲೇ ಬಾಯಲ್ಲಿ ಚಿನ್ನದ ಚಮಚೆ ಇಟ್ಟುಕೊಂಡು ಬಂದವನಲ್ಲ ಎನ್ನುವ ವಿನಮ್ರತೆ ಅವರಲ್ಲಿತ್ತು.
ಅಂಥವರ ಅಗಲುವಿಕೆ ಸಮಾಜಕ್ಕೆ, ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದಂತಹ ನಷ್ಟವನ್ನುಂಟು ಮಾಡಿದೆ. ಆ ನಷ್ಟವನ್ನು ಭರಿಸುವಂಥ ಎಲ್ಲ ಶಕ್ತಿಯನ್ನು ಬಸವಾದಿ ಶಿವಶರಣರು ಅವರ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಹಾಗೂ ಮನೆಯ ಇತರೆ ಸದಸ್ಯರಿಗೆ ಕರುಣಿಸಲಿ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: MLC ಕೆ.ಎಸ್.ನವೀನ್ ಅವರ ಮಾವ ಕೆ.ಟಿ.ತಿಪ್ಪೇಸ್ವಾಮಿ ನಿಧನ
ಇಂದು ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪನವರ ಅಂತಿಮ ದರ್ಶನ ಮಾಡಲಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
