
CHITRADURGA NEWS | 23 JANUARY 2026
ಚಿತ್ರದುರ್ಗ: ಚಿತ್ರದುರ್ಗ ನಗರದ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿರುವ ಆಟೋರಿಕ್ಷಾ, ಕ್ಯಾಬ್‌ಗಳು ಪ್ರಾದೇಶಿಕ ಸಾರಿಗೆ ವ್ಯಾಪ್ತಿಯಲ್ಲಿ ಸಂಚರಿಸಲು ಅವಶ್ಯವಿರುವ ದಾಖಲಾತಿಗಳನ್ನು ಸಿಂಧುಗೊಳಿಸಿಕೊಂಡು ಕಾರ್ಯಾಚರಣೆ ಮಾಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳಿಸಿಂಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಬೇಕರಿ ಉತ್ಪನ್ನ ತಯಾರಿ ತರಬೇತಿಗೆ ಅರ್ಜಿ ಅಹ್ವಾನ

ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ವ್ಯಾಪ್ತಿಯಲ್ಲಿ ಸಂಚರಿಸಲು ಅವಶ್ಯವಿರುವ ದಾಖಲಾತಿಗಳಾದ ರಹದಾರಿ, ವಾಹನದ ವಿಮೆ ಪತ್ರ, ಅರ್ಹತಾ ಪತ್ರ, ವಾಯುಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಹಾಗೂ ವಾಹನ ಚಾಲನೆ ಮಾಡುವ ಚಾಲಕರು ಚಾಲನಾ ಅನುಜ್ಞಾ ಪತ್ರ, ಬ್ಯಾಡ್ಜ್ ಅನ್ನು ವಾಯಿದೆ ಹೊಂದಿರುವಂತೆ ಸಿಂಧುಗೊಳಿಸಿಕೊಂಡಿರಬೇಕು. ಪೊಲೀಸ್ ಇಲಾಖೆಯಿಂದ ನೀಡಿರುವ ಗುರುತಿನ ಸಂಖ್ಯೆ ಪಡೆದು, ಸಂಬಂಧಪಟ್ಟ ತಾಲ್ಲೂಕು, ಹೋಬಳಿ ಹಾಗೂ ಜಿಲ್ಲಾ ಕೇಂದ್ರದಲ್ಲಿ ವಾಹನ ಕಾರ್ಯಾಚರಣೆ ಮಾಡಲು ಆರ್‌ಟಿಓ ಸೂಚನೆ ನೀಡಿದ್ದಾರೆ.
ಇಷ್ಟೂ ದಾಖಲೆಗಳನ್ನು ಸಿಂಧುಗೊಳಿಸಿಕೊಂಡು ಕಾರ್ಯಾಚರಣೆ ಮಾಡಲು 2026 ಜನವರಿ ಅಂತ್ಯದವರೆಗೆ ಕಾಲಮಿತಿ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಉಚಿತ ಜಿಮ್ ಮತ್ತು ಫಿಟ್ನೆಸ್ ತರಬೇತಿ | ಪರಿಶಿಷ್ಟ ಜಾತಿಯ ಯುವಕರಿಂದ ಅರ್ಜಿ ಅಹ್ವಾನ
ನಂತರದ ಅವಧಿಯಲ್ಲಿ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಜಂಟಿ ಪ್ರವರ್ತನಾ ಕಾರ್ಯ ಕೈಗೊಳ್ಳುವ ಸಂದರ್ಭದಲ್ಲಿ ರಹದಾರಿ, ವಾಹನದ ವಿಮೆ ಪತ್ರ, ಅರ್ಹತಾ ಪತ್ರ, ಸಿಂಧುವಾಗಿರದೇ ಇರುವ ದಾಖಲಾತಿಗಳು, ವಾಯುಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಹಾಗೂ ಚಾಲನಾ ಅನುಜ್ಞಾ ಪತ್ರ ಹೊಂದಿರದ ವಾಹನ ಚಾಲಕರು, ಸಿಂಧುವಾಗಿರುವ ದಾಖಲೆಗಳನ್ನು ಹೊಂದಿರದ ವಾಹನಗಳು ಪತ್ತೆಯಾದಲ್ಲಿ, ಅಂತಹ ವಾಹನಗಳನ್ನು ಜಪ್ತು ಮಾಡಿ, ಮೊಟಾರು ವಾಹನ ಕಾಯ್ದೆ 1988 ರ ಕಲಂ 200 ರ ಅಡಿ ದಂಡ ವಿಧಿಸಿ, ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ. ಕಾಳಿಸಿಂಗೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
