CHITRADURGA NEWS | 02 APRIL 2025
ಹೊಸದುರ್ಗ: ಬೀಡಾ ಅಂಗಡಿಯಲ್ಲಿ ಗುಟ್ಖಾ ಖರೀಧಿಸಿದ ಯುವಕ ಪೋನ್ ಪೇ ಮಾಡ್ತಿನಿ, ಕ್ಯಾಶ್ ಇಲ್ಲ ಅಂದಿದ್ದಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
Also Read: ಕೃಷಿ ಹೊಂಡದಲ್ಲಿ ಮುಳುಗಿ ಅಪ್ಪ ಮಗ ಸಾವು

ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು, ಯುವಕನ ಮರ್ಮಾಂಗಕ್ಕೆ ಹೊಡೆತ ಬಿದ್ದು ಮೃತಪಟ್ಟಿರುವ ಘಟನೆ ಹೊಸದುರ್ಗ ತಾಲೂಕು ಮತ್ತೋಡು ಗ್ರಾಮದಲ್ಲಿ ನಡೆದಿದೆ.
ಹೊಸದುರ್ಗ ತಾಲೂಕಿನ ಮುತ್ತೋಡು ಗ್ರಾಮದ ಸೋಮಶೇಖರ್ (21) ಕೊಲೆಯಾದ ದುರ್ದೈವಿ.
ಸೋಮಶೇಖರ್ ಸಹೋದರ ನಾಗರಾಜ್ ಗುಟ್ಕಾ ಖರೀಧಿಸಲು ಬೀಡಾ ಅಂಗಡಿಗೆ ಹೋಗಿದ್ದಾನೆ. ಈ ವೇಳೆ ನನ್ನ ಬಳಿ ಹಣ ಇಲ್ಲ, ಫೋನ್ ಪೇ ಮಾಡ್ತೀನಿ ಎಂದು ನಾಗರಾಜ್ ಹೇಳಿದ್ದ.
ಅಷ್ಟಕ್ಕೆ ಅಲ್ಲಿಯೇ ಇದ್ದ ನಾಲ್ವರು ಯುವಕರ ಟೀಮ್ ನಾಗರಾಜ್ ಜೊತೆ ಕ್ಷುಲ್ಲಕ ವಿಚಾರಕ್ಕೆ ಗಕಾಟೆ ಶುರು ಮಾಡಿದೆ.
ತಮ್ಮನ ಮೇಲೆ ಹಲ್ಲೆ ಮಾಡುತ್ತಿದ್ದನ್ನು ಕಂಡ ನಾಗರಾಜನ ಅಣ್ಣ ಸೋಮಶೇಖರ್ ಜಗಳ ಬಿಡಿಸಲು ಮುಂದಾಗಿದ್ದಾನೆ. ಈ ವೇಳೆ ಸೋಮಶೇಖರ್ ಮೇಲೆಯೂ ಹಲ್ಲೆ ನಡೆಸಿ ಕೊಲೆ ಮಾಡಿರುವ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.
Also Read: ಯುಗಾದಿ ಜೂಜು | ಜಿಲ್ಲೆಯಲ್ಲಿ 850 ಜನರ ಬಂಧನ | ಪೊಲೀಸ್ ಇಲಾಖೆಯ ಭರ್ಜರಿ ಕಾರ್ಯಚರಣೆ
ಏಪ್ರಿಲ್ 1 ರಾತ್ರಿ ಈ ಘಟನೆ ನಡೆದಿದ್ದು, ಕೊಲೆ ಆರೋಪಿಗಳ ಪತ್ತೆಗೆ ಶ್ರೀರಾಂಪುರ ಠಾಣೆ ಇನ್ಸ್ಪೆಕ್ಟರ್ ಮಧು ನೇತೃತ್ವದ ತಂಡ ಬಲೆ ಬೀಸಿದ್ದು, ಚಿಕ್ಕಬ್ಯಾಲದಕೆರೆ ಗೇಟ್ ಬಳಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೊಲೆ ಆರೋಪದಲ್ಲಿ ರಘು, ಮಂಜುನಾಥ್, ಗವಿರಂಗನಾಥ, ಶಶಿಕುಮಾರ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
