ಹೊಸದುರ್ಗ
ಧರ್ಮ ದಯಾಮೂಲವಾಗಿರಬೇಕು, ಭಯಮೂಲವಾಗಿರಬಾರದು | ಸಾಣೇಹಳ್ಳಿ ಶ್ರೀ

CHITRADURGA NEWS | 02 MAY 2024
ಹೊಸದುರ್ಗ: ಧರ್ಮ ದಯಾಮೂಲವಾಗಿರಬೇಕೇ ಹೊರತು ಭಯಮೂಲವಾಗಬಾರದು ಎಂದು ಸಾಣೆಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ : ಚಿತ್ರದುರ್ಗ ಜಿಲ್ಲೆಗೆ ಎಲ್ಲೋ ಅಲರ್ಟ್ | ತೀವ್ರ ಬಿಸಲು, ಬಿಸಿಗಾಳಿಯ ಎಚ್ಚರಿಕೆ | ಸುರಕ್ಷಿತವಾಗಿರಲು ಇಲ್ಲಿವೆ ಸೂಕ್ತ ಸಲಹೆ
ಸಾಣೆಹಳ್ಳಿ ಮಠದ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಪ್ರತಿ ತಿಂಗಳ ಇಷ್ಟ ಲಿಂಗ ದೀಕ್ಷೆ ಸಂಸ್ಕಾರದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು,
ಬಸವಣ್ಣನವರು ಇಡೀ ಜಗತ್ತಿಗೆ ಗುರುವಾದವರು. ಗುರುವಿನ ಲಕ್ಷಣ ಅರಿವು ಆಚಾರ ಒಂದಾಗಿಸಿಕೊಳ್ಳುವುದು. ನಡೆ ಮತ್ತು ನುಡಿಗಳಲ್ಲಿ ವ್ಯತ್ಯಾಸ ಇಲ್ಲದೇ ಇರುವುದು. ಗುರು ಅರಿವಿನ ಆಗರವಾಗಿರಬೇಕು, ಸುಜ್ಞಾನಿಯಾಗಿರಬೇಕು.
ಇದನ್ನೂ ಓದಿ : ಹೆಚ್ಚಾಗಿದೆ ಬಿಸಿಲು | ಕುರಿ, ಮೇಕೆ, ದನ ಮೇಯಿಸಲು ಸರಿಯಾದ ಸಮಯ ಯಾವುದು ಗೊತ್ತ…
ಅಂಧಶ್ರದ್ಧೆ, ಮೂಢನಂಬಿಕೆ, ಕಂದಾಚಾರದಿಂದ ದೂರವಿರಬೇಕು ಪಾರದರ್ಶಕನಾಗಿರಬೇಕು. ಸೋಮಾರಿಯಾಗದೇ ಸದಾ ಕಾಯಕ ಶೀಲನಾಗಿರಬೇಕು. ಕಾಯಕ ಮಾಡದೇ ಇರುವ ಗುರು ಗುರುವಲ್ಲ, ಜಂಗಮ ಅಲ್ಲ, ಲಿಂಗವಲ್ಲ. ತನ್ನ ಶಿಷ್ಯರ ಅಜ್ಞಾನವನ್ನು ಕಳೆಯುವ ಪ್ರಯತ್ನ ಮಾಡಬೇಕು. ಆದ್ದರಿಂದಲೇ ಅನುಭವ ಮಂಟಪದ ಶರಣರೆಲ್ಲ ಬಸವಣ್ಣನವರನ್ನು ಅಪ್ಪಿಕೊಂಡು ಒಪ್ಪಿಕೊಂಡರು ಎಂದರು.
ಬಸವಣ್ಣನವರು ಲಿಂಗಾಯತ ಧರ್ಮದ ಹುಟ್ಟಿಗೆ ಕಾರಣರಾದರು. ಲಿಂಗಾಯತ ಧರ್ಮ ದಯಾಮೂಲವಾದುದು. ಲಿಂಗಾಯತ ಧರ್ಮದಲ್ಲಿ ಯಾವುದೇ ತಾರತಮ್ಯವಿಲ್ಲ. ಶರಣರು ಜಾತಿಯ ಹುಟ್ಟನ್ನು ನಿಕೃಷ್ಟವಾಗಿ ಕಂಡು ಮರು ಹುಟ್ಟನ್ನು ಪಡೆದುಕೊಂಡರು. ಶ್ರೇಷ್ಟ ಎನ್ನುವುದು ಹುಟ್ಟಿನಿಂದ ಬರುವುದಿಲ್ಲ. ಅವನು ಮಾಡುವ ಕೆಲಸದಿಂದ ಬರುತ್ತೆ.
ಇದನ್ನೂ ಓದಿ : ಬೆಲಗೂರಿನಲ್ಲಿ ಬಿಂಧು ಮಾಧವ ಅವಧೂತರ ಜಯಂತೋತ್ಸವ | ಮಳೆಗಾಗಿ ವಿಶೇಷ ಪೂಜೆ
ಇವತ್ತು ಗುಡಿಯ ಹುಚ್ಚು ಹೆಚ್ಚಿದೆ. ಆದರೆ ಬಸವಣ್ಣನವರು ಗುಡಿ, ಗುಂಡಾರಕ್ಕೆ ಒತ್ತು ಕೊಡಲಿಲ್ಲ. ತನ್ನ ದೇಹವನ್ನೇ ದೇವಾಲಯ ಮಾಡಿಕೊಂಡರು. ದೇವಸ್ಥಾನಗಳು 12 ನೇಯ ಶತಮಾನದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಠಿಗೆ ಒಳಗಾಗಿ ಮೌಢ್ಯದಿಂದ ತುಂಬಿತ್ತು.
ಇದನ್ನು ಮನಗಂಡ ಬಸವಣ್ಣನವರು ಅಂಗೈಯೊಳಗೆ ಲಿಂಗವನ್ನು ಕರುಣಿಸಿದರು. ಇಷ್ಟಲಿಂಗ ಗೋಳಾಕಾರವಾಗಿದೆ. ಅದು ಇಡೀ ಜಗತ್ತಿನ ಸಂಕೇತ. ಲಿಂಗವನ್ನು ಮುಟ್ಟಿ ಪೂಜೆ ಮಾಡಿದರೆ ಜಾತಿಯ ಪ್ರಶ್ನೆ ಇರುವುದಿಲ್ಲ. ಲಿಂಗತಾರತಮ್ಯವಿಲ್ಲ. ದೀಕ್ಷೆ ಪಡೆದುಕೊಂಡವರು ಇನ್ನೊಬ್ಬರಿಗೆ ದೀಕ್ಷೆ ಕೊಡಲಿಕ್ಕೆ ಸಾಧ್ಯ ಇದೆ.
ಇದನ್ನೂ ಓದಿ : ಚಿತ್ರದುರ್ಗ ಜಿಲ್ಲೆಯ ಗಡಿಭಾಗದಲ್ಲಿ ಮದ್ಯ ಮಾರಾಟ ನಿಷೇಧ
ಇಷ್ಟಲಿಂಗದ ಮೂಲಕ ಸಮಾಜದಲ್ಲಿ ಸಮಾನತೆ ತಂದರು. ದೇಹವನ್ನು ದೇವಾಲಯ ಮಾಡಿಕೊಂಡು ಶಿವ ಚೈತನ್ಯವನ್ನು ಪಡೆದುಕೊಂಡರು. ಶರಣರು ದೇವರ ಬಗ್ಗೆ ಇದ್ದ ಅಜ್ಞಾನವನ್ನು ತೊಲಗಿಸಿ ಇಷ್ಟಲಿಂಗ ದೀಕ್ಷೆಯನ್ನು ಕರುಣಿಸಿ ಸುಜ್ಞಾನವನ್ನು ಪಡೆದುಕೊಂಡರು.
ಲಿಂಗಾಯತ ಧರ್ಮದ ಗುರು ಬಸವಣ್ಣ, ಧರ್ಮದ ಗ್ರಂಥ ವಚನ ಸಾಹಿತ್ಯ, ಧರ್ಮದ ಕ್ಷೇತ್ರ ನಾವಿರುವ ಸ್ಥಳ. ಲಿಂಗಾಯತ ಧರ್ಮದಲ್ಲಿ ಸ್ಥಾವರ ದೇವರನ್ನು ಪೂಜಿಸುವ ಅವಶ್ಯಕತೆ ಇಲ್ಲ. ಜಾತಿಯನ್ನು ಕಿತ್ತಾಕಿ ನೀತಿಯನ್ನು ಬೆಳೆಸಿಕೊಳ್ಳುವುದು ದೀಕ್ಷೆಯ ಮುಖ್ಯ ಉದ್ದೇಶ.
ಇದನ್ನೂ ಓದಿ : ಕೋಣ ಗುದ್ದಿ ವ್ಯಕ್ತಿ ಸಾವು | ಜಾತ್ರೆಗಾಗಿ ಮನೆಯಲ್ಲಿ ಸಾಕಿದ್ದ ಕೋಣ ಗುದ್ದಿ ಘಟನೆ
ತಂದೆ- ತಾಯಿಯಿಂದ ಪಡೆದದ್ದು ನರ ಜನ್ಮ, ಗುರುವಿನಿಂದ ಪಡೆದುಕೊಂಡಿದ್ದು ಹರ ಜನ್ಮ. ಪ್ರತಿಯೊಬ್ಬರು ಬಹಿರಂಗದ ಶುಚಿತ್ವಕ್ಕಿಂತ ಅಂತರಂಗ ಶುಚಿತ್ವ ಮಾಡಿಕೊಳ್ಳಬೇಕು. ಆಂತರಿಕ ಶುಚಿತ್ವವೆ ಲಿಂಗ ದೀಕ್ಷೆ ಎಂದರು.
ಮಠದ ವಿದ್ಯಾರ್ಥಿಗಳು ಲಿಂಗದೀಕ್ಷೆಯ ವ್ಯವಸ್ಥೆಯನ್ನು ಮಾಡಿದರು.
