
CHITRADURGA NEWS | 05 DECEMBER 2025
ಚಿತ್ರದುರ್ಗ: ರೈತರು ಬೆಳೆದ ಮೆಕ್ಕೆಜೋಳ ಖರೀದಿಗೆ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ. ರಾಜ್ಯದಲ್ಲಿ 74 ಲಕ್ಷ ಟನ್ ನಷ್ಟು ಮೆಕ್ಕಜೋಳ ಬೆಳೆದಿದ್ದಾರೆ. ಆದರೆ ಸರ್ಕಾರ 5 ಲಕ್ಷ ಮೆಟ್ರಿಕ್‍ಟನ್ ಮಾತ್ರ ಖರೀದಿ ಮಾಡುತ್ತೇವೆ ಅಂತಾ ಹೇಳಿದ್ದಾರೆ. ಹಾಗಾದ್ರೆ ರೈತರು ಇನ್ನುಳಿದ ಮೆಕ್ಕೆಜೋಳ ಏನು ಮಾಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎನ್.ರವಿಕುಮಾರ್ ಸರ್ಕಾರಕ್ಕೆ ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ | OPS ಕುರಿತ ವರದಿ ಸಿದ್ಧ | ಮಾಲತೇಶ್ ಮದ್ದಜ್ಜಿ
ಹೊಸದುರ್ಗದಲ್ಲಿ ನಡೆಯಲಿರುವ ಸರ್ಕಾರದ ವಿರುದ್ದ ರೈತರ ಹೋರಾಟದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಚಿತ್ರದುರ್ಗದಲ್ಲಿ ಭೇಟಿಯಾದ ಮಾದ್ಯಮದವರೊಂದಿಗೆ ಮಾತನಾಡಿ,
ಈಗಾಗಲೇ ರೈತರು ಕೈಗೆ ಬಂದ ಬೆಲೆಯಂತೆ ಮಾರಾಟ ಮಾಡಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್‍ಗೆ 2400/- ರೂ ದರ ನಿಗದಿ ಮಾಡಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾತ್ರ ಖರೀದಿ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಒಂದು ರೈತರ ವಿರೋಧಿ ಸರ್ಕಾರ. ಈ ಹಿನ್ನಲೆಯಲ್ಲಿ ಡಿ.9 ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರೈತರು ಬೃಹತ್ ಪ್ರತಿಭಟನೆ ಆಯೋಜನೆ ಮಾಡಿದ್ದಾರೆ ಎಂದರು.
ತುಂಗಭದ್ರಾ ಡ್ಯಾಮ್ ಎರಡು ಬಾರಿ ಭರ್ತಿಯಾಗಿದೆ. ಅಲ್ಲಿನ ರೈತರಿಗೆ 2ನೇ ಬೆಳೆ ಬೆಳೆಯಲು ನೀರು ಬಿಡುತ್ತಿಲ್ಲ. ಸರ್ಕಾರ ಗೇಟ್ ರಿಪೇರಿ ಕಾರಣ ಹೇಳಿ ವಿಳಂಬ ಮಾಡುತ್ತಿದೆ. ಗೇಟ್ ರಿಪೇರಿ ಮಾಡಿದ 12 ಕೋಟಿ ಹಣ ಕೂಡ ಬಾಕಿ ಇದೆ. ಹಾಗಾಗಿ ಬೆಳೆ ಪರಿಹಾರಕ್ಕೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿ ಎಕರೆಗೆ ರೈತನಿಗೆ 25 ಸಾವಿರ ಪರಿಹಾರ ಕೊಡಬೇಕು. ಕಲ್ಯಾಣ ಕರ್ನಾಟಕದಲ್ಲಿ ತೊಗರಿ ಬೆಳೆ 80% ಹಾಳಾಗಿದೆ. ಅದಕ್ಕೂ ಸರ್ಕಾರ ಪರಿಹಾರ ಕೊಟ್ಟಿಲ್ಲ ಎಂದರು.
ಇದನ್ನೂ ಓದಿ: ಹೆತ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿದನಾ ರಾಕ್ಷಸ ತಂದೆ !
ತೆಂಗು, ಅಡಿಕೆಗೆ ರೋಗ ಬಿದ್ದಾಗ ಪರಿಹಾರ ನೀಡಿಲ್ಲ. ಒಟ್ಟಾರೆ ರಾಜ್ಯ ಸರ್ಕಾರ ರೈತ ವಿರೋಧಿ ಸರ್ಕಾರ. ರೈತರ ಸಮಸ್ಯೆಗಳ ಚರ್ಚೆ ಬದಲಿಗೆ ಸರ್ಕಾರ ಸಿಎಂ ಖುರ್ಚಿ ಬಗ್ಗೆ ಚರ್ಚೆ ಮಾಡುತ್ತಿದೆ. ಬ್ರೇಕ್ ಪಾಸ್ಟ್, ನಾಟಿಕೋಳಿ ತಿನ್ನುವ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನಯಾಪೈಸೆ ಅಭಿವೃದ್ಧಿ ಆಗಿಲ್ಲ.
ರಾಜ್ಯದ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಶಾಲಾ ಮಕ್ಕಳಿಗೆ ಯೂನಿಫಾರ್ಮ್ ಕೊಟ್ಟಿಲ್ಲ. ಯೂನಿವರ್ಸಿಟಿಗಳಲ್ಲಿ 80% ರಷ್ಟು ಪ್ರೊಫೆಸರ್ ಗಳಿಲ್ಲ. 35 ರಿಂದ 33% ಗೆ ಪಾಸಿಂಗ್ ಪರ್ಸಂಟೇಜ್ ಇಳಿಕೆ ಮಾಡಿದ್ದಾರೆ. ಶಿಕ್ಷಕಣದ ಗುಣಮಟ್ಟ ಬಗ್ಗೆ ಇವರ ನಿಲುವೆನು?
ಶಿಕ್ಷಣದ ಬಗ್ಗೆ ಸದನದಲ್ಲಿ ಒಂದು ದಿನ ಚರ್ಚೆ ಆಗಬೇಕು. ಉತ್ತರ ಕರ್ನಾಟಕದ ಬಗ್ಗೆ 4 ದಿನ ಚರ್ಚೆ ಆಗಬೇಕು. ಈ ಕುರಿತು ರಾಜ್ಯದ 180 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹೋರಾಟ ಮಾಡಲಿದೆ. ಸಮಸ್ಯೆ ಇಲ್ಲದಿದ್ರೆ ರೈತರು ಯಾಕೆ ಹೋರಾಟ ಮಾಡುತ್ತಿದ್ದರು. ಸರ್ಕಾರ ನಾಟಿಕೋಳಿ, ಬ್ರೇಕ್ ಫಾಸ್ಟ್ ಬಿಟ್ಟು ರೈತರು, ವಿದ್ಯಾರ್ಥಿಗಳ ಬಗ್ಗೆ ಯೋಚನೆ ಮಾಡಲಿ.
ಇದನ್ನೂ ಓದಿ: ಭದ್ರಾ ಮೇಲ್ದಂಡೆಯಡಿ ಬಿಟ್ಟು ಹೋಗಿರುವ ಕೆರೆಗಳಿಗೂ ನೀರು ತುಂಬಿಸಿ | ರೈತ ಸಂಘದಿಂದ ಬೆಳಗಾವಿ ಚಲೋ
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಕುಮಾರ್ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ಜಿಲ್ಲಾ ರೈತ ಮೋಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ವಕ್ತಾರ ನಾಗರಾಜ್ ಬೇದ್ರೇ ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
