
CHITRADURGA NEWS | 05 DECEMBER 2025
ಚಿತ್ರದುರ್ಗ: ತನ್ನ ಮಕ್ಕಳ ಮಾನ, ಪ್ರಾಣ ಕಾಪಾಡಬೇಕಾದವನು ಹೆತ್ತ ತಂದೆ. ಇನ್ನೂ ತಾಯಿಯ ಪಾತ್ರ ಇದಕ್ಕಿಂತಲೂ ಮಿಗಿಲು. ಆದರೆ, ಮಗಳ ಮಾನ ಕಾಪಾಡಬೇಕಾದ ತಂದೆಯೇ ರಾಕ್ಷಸನಾಗಿರುವ ಅಮಾನವೀಯ ಘಟನೆ ಜಿಲ್ಲೆಯಲ್ಲಿ ಘಟಿಸಿದೆ.
ಹೆತ್ತ ತಂದೆಯೊಬ್ಬ ತನ್ನ ಮಗಳ ಮೇಲೆಯೇ ಅತ್ಯಾಚಾರ ಎಸಗಿರುವ ಪ್ರಕರಣ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

ಇದನ್ನೂ ಓದಿ: ರಾತ್ರಿ ಅನ್ನ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವೇ?
ಹೌದು, ಚಿತ್ರದುರ್ಗ ತಾಲೂಕಿನ ಗ್ರಾಮವೊಂದರಲ್ಲಿ ತಂದೆಯೇ ತನ್ನ 14 ವರ್ಷದ, 8ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಬಗ್ಗೆ ದೂರು ದಾಖಲಾಗಿದೆ.
(ಬಾಲಕಿಯ ಗುರುತು ಪರಿಚಯ ಆಗಬಾರದು ಎನ್ನುವ ನಿಯಮ ಲೈಂಗಿಕ ದೌರ್ಜನಗಳಿಂದ ಮಕ್ಕಳನ್ನು ಸಂರಕ್ಷಣೆ ಮಾಡಲು ಜಾರಿ ಮಾಡಿರುವ ಪೋಕ್ಸೋ ಕಾಯ್ದೆಯಲ್ಲಿರುವುದರಿಂದ ಸುದ್ದಿಯಲ್ಲಿ ತಂದೆ, ತಾಯಿ, ಮಗು ಹಾಗೂ ಊರಿನ ಹೆಸರನ್ನು ನಮೂದಿಸುವುದಿಲ್ಲ.)
ಇದನ್ನೂ ಓದಿ: ಶೀಲ ಶಂಕಿಸಿ ಹೆಂಡತಿಯನ್ನೇ ಕೊಂದ ಪತಿಗೆ ಜೀವಾವಧಿ ಶಿಕ್ಷೆ
೧೪ ವರ್ಷದ ಮಗಳನ್ನು ನಿನ್ನ ಸ್ನೇಹಿತೆ ಕರೆಯುತ್ತಿದ್ದಾಳೆ ಎಂದು ಹೇಳಿ ಮನೆಯಿಂದ ಹೊರಗೆ ಕರೆದೊಯ್ದ ರಾಕ್ಷಸ ಅಪ್ಪ, ಜಮೀನಿನ ಬಳಿ ಕರೆದೊಯ್ದು ಅತ್ಯಾಚಾರ ಎಸಗಿರುವುದಾಗಿ ಬಾಲಕಿ ಆಪ್ತ ಸಮಾಲೋಚನೆ ವೇಲೆ ತಿಳಿಸಿದ್ದಾಳೆ.
ಈ ಸಂಬಂಧ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಬೆಳೆ ವಿಮೆ, ಬೆಳೆ ಪರಿಹಾರ ವಿಳಂಬ ರೈತ ಸಂಘ ಆಕ್ರೋಶ | ಉಪವಾಸ ಸತ್ಯಾಗ್ರಹದ ಎಚ್ಚರಿಕೆ
ಎರಡನೇ ಮಗಳ ಮೇಲೆಯೂ ಲೈಂಗಿಕ ದೌರ್ಜನ್ಯ:
ಮೊದಲ ಮಗಳ ಅತ್ಯಾಚಾರ ಪ್ರಕರಣ ಸಂಬಂಧ ಆಪ್ತ ಸಮಾಲೋಚನೆ ನಡೆಸುವಾಗ ತನ್ನ ತಂಗಿ 11 ವರ್ಷದ ಮತ್ತೊಬ್ಬ ಬಾಲಕಿಗೂ ತಂದೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ ಮಾಹಿತಿ ಹೊರ ಬಿದ್ದಿದೆ.
ಈ ಸಂಬಂಧ ಎರಡನೇ ಮಗುವನ್ನು ಕರೆತಂದು ಆಪ್ತ ಸಮಾಲೋಚನೆ ನಡೆಸಿದಾಗ ತಂದೆ ಲೈಂಗಿಕ ಕಿರುಕುಳ ನೀಡಿರುವ ಮಾಹಿತಿಯನ್ನು ಬಾಲಕಿ ತಿಳಿಸಿದ್ದಾಳೆ.
ಇದನ್ನೂ ಓದಿ: ದಿನ ಭವಿಷ್ಯ | ಡಿಸೆಂಬರ್ 05 | ನಿರುದ್ಯೋಗಿಗಳಿಗೆ ಶುಭ ಸುದ್ದಿ, ಆರ್ಥಿಕ ಪ್ರಗತಿ, ಮಕ್ಕಳ ಆರೋಗ್ಯದಲ್ಲಿ ಎಚ್ಚರ
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಧೂರ್ತ ತಂದೆಯ ವಿರುದ್ಧ ದೂರು ದಾಖಲಿಸಿ, ಮಕ್ಕಳ ಸಂರಕ್ಷಣಾಲಯದಲ್ಲಿ ಇಬ್ಬರೂ ಮಕ್ಕಳಿಗೆ ಆಶ್ರಯ ಒದಗಿಸಿದ್ದಾರೆ.
ಸಮಾಜ ಅಧೋಗತಿ ತಲುಪುತ್ತಿದೆ. ತಂದೆಯೇ ಮಕ್ಕಳನ್ನು ಕಾಮುಕ ದೃಷ್ಟಿಯಿಂದ ನೋಡುವ ದುಸ್ಥಿತಿ ಬಂದಿದೆ. ಯಾರನ್ನೂ ನಂಬದ ಸ್ಥಿತಿ ಎದುರಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
