ಮುಖ್ಯ ಸುದ್ದಿ
ಪೈ ಶೋ ರೂಂ ಬಳಿ ಕಾಣಿಸಿಕೊಂಡ ಪೈಥಾನ್ | ಮಾರುಕಟ್ಟೆಗೆ ಬಂದ 8 ಅಡಿ ಉದ್ದದ ಹೆಬ್ಬಾವು

Published on
CHITRADURGA NEWS | 24 MAY 2024
ಚಿತ್ರದುರ್ಗ: ನಗರದ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಲಕ್ಷ್ಮೀ ಬಜಾರ್ ಮಾರುಕಟ್ಟೆ ಪ್ರದೇಶದ ಬಳಿ ಪೈ ಶೋ ರೂಂ ಬಳಿಯ ಮಳಿಗೆಯೊಂದರ ಬಳಿ ಸುಮಾರು 8 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿತ್ತು.
ಹೆಬ್ಬಾವು ಕಂಡು ಆತಂಕಗೊಂಡ ಇಲ್ಲಿನ ವ್ಯಾಪಾರಸ್ಥರು ತಕ್ಷಣ ಉರಗ ಪ್ರೇಮಿ ಸ್ನೇಕ್ ಶಿವು ಅವರಿಗೆ ಮಾಹಿತಿ ನೀಡಿ ಕರೆಯಿಸಿಕೊಂಡಿದ್ದು, ಶಿವು ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: ಅತಿಥಿ ಶಿಕ್ಷಕರು, ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನ
ಪೈ ಇಂಟರ್ ನ್ಯಾಷನಲ್ ಸಮೀಪದ ವಾಣಿಜ್ಯ ಮಳಿಗೆ ಕಟ್ಟಡಗಳ ನಡುವೆ ಪೌರ ಕಾರ್ಮಿಕರ ಕಣ್ಣಿಗೆ ಬಿದ್ದಿದ್ದ ಹೆಬ್ಬಾವನ್ನು ರಕ್ಷಣೆ ಮಾಡು ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಎಂಟು ಅಡಿ ಉದ್ದದ ಹೆಬ್ಬಾವು ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಕಾಣಿಸಿ ಕೊಂಡಿದ್ದು ಅಚ್ಚರಿ ಮೂಡಿಸಿದೆ. ಚರಂಡಿ ಮೂಲಕ ಬಂದಿರಬಹುದು ಎಂದು ಶಂಕಿಸಲಾಗಿದೆ.
Continue Reading
Related Topics:Chitradurga, Hebbavu, Jogimatti, Kannada News, pithon, Raksha, Snake Shiva, ಕನ್ನಡ ಸುದ್ದಿ, ಚಿತ್ರದುರ್ಗ, ಜೋಗಿಮಟ್ಟಿ, ರಕ್ಷಣೆ, ಸ್ನೇಕ್ ಶಿವು, ಹೆಬ್ಬಾವು

Click to comment