
CHITRADURGA NEWS | 09 JANUARY 2026
ಚಿತ್ರದುರ್ಗ: ನಗರದ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಪಟೇಲ್ ಶಿವಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಸಿ.ಚಂದ್ರಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಇದನ್ನೂ ಓದಿ: DLSA ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳಿಗೆ ಕಾರ್ಯಾಗಾರ

ನೂತನ ಅಧ್ಯಕ್ಷರಾದ ನಂತರ ಮಾತನಾಡಿದ ಪಟೇಲ್ ಶಿವಕುಮಾರ್, ನಮ್ಮ ಗುಂಪಿನ ಮೇಲೆ ವಿಶ್ವಾಸ ಇಟ್ಟು ಮತ್ತೊಂದು ಅವಧಿಗೆ ಆಯ್ಕೆ ಮಾಡಿದ್ದಾರೆ. ಬ್ಯಾಂಕ್ ಅನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಸೊಸೈಟಿಯಿಂದ ಯಾರಿಗಾದರೂ ಸಾಲ ಕೊಡಿಸುವಾಗ ಹಾಗೂ ನೀಡುವಾಗ ಅವರ ಕುರಿತು ಪೂರ್ಣ ಪ್ರಮಾಣದ ಪರಿಶೀಲನೆ ನಡೆಸಬೇಕು. ಈ ಬಾರಿ ಆಯ್ಕೆಯಾದ 11 ಜನ ನಿರ್ದೆಶಕರಲ್ಲಿ ಎರಡನೇ ಅವಧಿಗೆ ಸಾಕಷ್ಟು ಜನ ಬಂದಿದ್ದಾರೆ. ಹೊಸಬರು ನಿಯಮಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಒಂದು ಹಣಕಾಸು ಸಂಸ್ಥೆ ಉತ್ತಮವಾಗಿ ನಡೆಯಬೇಕಾದರೆ ಅಲ್ಲಿನ ಕಾರ್ಯಕಾರಿ ಸಮಿತಿ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಉತ್ತಮವಾಗಿರಬೇಕು. ಈ ಹಿನ್ನೆಲೆಯಲ್ಲಿ ಸಾಲ ಕೊಡುವಾಗ ಪೂರ್ವಾಪರ ನೋಡಬೇಕು. ಜಾಮೀನು ಹಾಕುವವರ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದರು.
ಇದನ್ನೂ ಓದಿ: ಭಾರತ್ ಪೆಟ್ರೋಲಿಯಂ ಸಂಸ್ಥೆಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ
ಕಳೆದ ವರ್ಷ ಸರಿಯಾಗಿ ಸಾಲ ನೀಡಿಲ್ಲ ಎಂಬ ಆರೋಪ ಮಾಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ೩೦ ಲಕ್ಷ ರೂ.ಗಳನ್ನು ತಲಾ 25 ಸಾವಿರದಂತೆ, 50 ಸಾವಿರದಿಂದ 2 ಲಕ್ಷ ರೂ.ವರೆಗಿನ ಸಾಲವನ್ನು 2.65 ಕೋಟಿ ರೂ.ವರೆಗೆ ನೀಡಲಾಗಿದೆ. 2 ರಿಂದ 5 ಲಕ್ಷದವರೆಗೆ 1 ಕೋಟಿಯಷ್ಟು ಸಾಲ ನೀಡಲಾಗಿದೆ. ಸಾಲಕ್ಕಾಗಿ ಬಂದ ಅರ್ಜಿಗಳಲ್ಲಿ ಶೇ.95 ರಷ್ಟು ಸಾಲ ನೀಡಲಾಗಿದೆ. ಉಳಿದ ಅರ್ಜಿಗಳಿಗೆ ಬೇರೆ ಬೇರೆ ಕಾರಣಗಳಿಗೆ ನೀಡಲಾಗಿಲ್ಲ ಎಂದು ವಿವರಿಸಿದರು.
ಸಾಲ ಪಡೆಯುವಾಗ ದಾಖಲಾತಿ ಸರಿಯಾಗಿದ್ದಲ್ಲಿ ನಮ್ಮ ಕಾನೂನು ಸಲಹೆಗಾರರು ಸರಿಯಾದ ವರದಿ ನೀಡಿದರೆ ಸಾಲ ಸಿಗುತ್ತದೆ. ಈ ರೀತಿ ಇದ್ದವರು ಯಾವುದೇ ಶಿಫಾರಸ್ಸು ಮಾಡುವ ಅಗತ್ಯ ಇಲ್ಲ. ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸಮಾಜದ ಒಂದು ಕಣ್ಣಿದ್ದಂತೆ. ಇಲ್ಲಿ ಹಿರಿಯರ ಸಲಹೆ, ಸೂಚನೆ ಪಡೆದು ಬ್ಯಾಂಕ್ ಮುನ್ನಡೆಸಬೇಕು ಎಂದರು.
ಇದನ್ನೂ ಓದಿ: ಫೆಲೋಶಿಫ್ ಅಧ್ಯಯನ ವೇತನಕ್ಕೆ ಅಧ್ಯಯನಕಾರರಿಂದ ಅರ್ಜಿ ಆಹ್ವಾನ
ಸೊಸೈಟಿ ನಿರ್ದೆಶಕರಾದ ಬಿ.ಎಂ.ಕರಿಬಸಯ್ಯ, ಜೆ.ಎಸ್.ಪ್ರಸಾದ್, ಜೆ.ಟಿ.ಸುರೇಶ್, ಕೆ.ಹೆಚ್.ಮುರುಗೇಂದ್ರಪ್ಪ, ಡಿ.ಎಸ್.ರಾಜೇಶ್, ನೀಲಕಂಠೇಶ್ವರಪ್ಪ, ರೀನಾ ಕೆ.ಜಿ., ಜಿ.ಆರ್.ನಿವೇದಿತಾ, ಶೈಲಜ ಎಂ ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
