
CHITRADURGA NEWS | 19 JULY 2025
ಚಿತ್ರದುರ್ಗ: ಹಳೆ ಮಾಧ್ಯಮಿ ಶಾಲಾ ಆವರಣದಲ್ಲಿದ್ದ ಹಳೆಯ ಮದಕರಿ ವ್ಯಾಯಾಮ ಶಾಲೆಯನ್ನು ಕೆಡವಿ ಆ ಜಾಗದಲ್ಲಿ ಅಂಗನವಾಡಿ ಕಟ್ಟಡ ಕಟ್ಟಲು ಹೊರಟಿರುವುದನ್ನು ವಿರೋಧಿಸಿ ಅಂತರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟು ಎನ್.ಡಿ.ಕುಮಾರ್ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಆಗಸ್ಟ್ 15ರೊಳಗೆ ಒಳ ಮೀಸಲಾತಿ ಜಾರಿಯಾಗದಿದ್ದರೆ ಅಸಹಕಾರ ಚಳುವಳಿ | ಎ.ನಾರಾಯಣಸ್ವಾಮಿ
1942 ರಿಂದ ಇಲ್ಲಿದ್ದ ವ್ಯಾಯಾಮ ಶಾಲೆ ಕಟ್ಟಡಕ್ಕೆ ತನ್ನದೆ ಆದ ಖಾತೆ ಮತ್ತು ವಿದ್ಯುತ್ ಸಂಪರ್ಕವಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವ್ಯಾಯಾಮ ಶಾಲೆಯನ್ನು ಕೆಡವಿದಾಗ ತಡೆಯಾಜ್ಞೆ ತಂದಿದ್ದೇವೆ.
ಶಾಸಕರ ನೇತೃತ್ವದಲ್ಲಿ ವ್ಯಾಯಾಮ ಶಾಲೆಯನ್ನು ಪುನರಾರಂಭಿಸಲು ಮುಂದಾಗಿದ್ದು, ಇದರ ನಡುವೆ ಸಿಡಿಪಿಓ ಇಲಾಖೆ ವತಿಯಿಂದ ಅಂಗನವಾಡಿ ಕಟ್ಟಡ ಕಟ್ಟಲು ಹೊರಟಿರುವುದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ನೇಕಾರರಿಗೆ ಆರ್ಥಿಕ ನೆರವು | ಅರ್ಜಿ ಆಹ್ವಾನ
ರಾಷ್ಟ್ರಮಟ್ಟದ ಬಾಡಿ ಬಿಲ್ಡರ್‍ಗಳಾದ ಅಣ್ಣಪ್ಪ, ದಿಲೀಪ್, ರುದ್ರೇಶ್, ಸೈಯದ್ ಮೊಹಿದ್ದೀನ್, ಬಸವರಾಜ್, ಗುರುರಾಜ್, ಸೈಫುಲ್ಲಾ, ವಾಸೀಂ, ನಾಗರಾಜ್, ಸಮೀವುಲ್ಲಾ, ಜಿತೇಂದ್ರ ಪತ್ರಿಭಟನೆಯಲ್ಲಿ ಪಾಲ್ಗೊಂಡಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
