
CHITRADURGA NEWS | 19 JULY 2025
ಚಿತ್ರದುರ್ಗ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಸಾಮಾನ್ಯ ಪ್ರವೇಶಾತಿ ಪರೀಕ್ಷೆಯಲ್ಲಿನ ಸೀಟು ಹಂಚಿಕೆ ಗೊಂದಲ ನೀವಾರಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಸಚಿವ ಡಿ.ಸುಧಾಕರ್ ಚಾಲನೆ
ಸಾಮಾನ್ಯ ಪ್ರವೇಶಾತಿ ಪರೀಕ್ಷೆಯಲ್ಲಿನ ಸೀಟು ಹಂಚಿಕೆ ಕುರಿತಾದ ಗೊಂದಲಗಳನ್ನು ತತಕ್ಷಣವೇ ನಿವಾರಿಸಿ, ಸೀಟು ಬ್ಲಾಕಿಂಗಂಧೆಗೆ ಕಡಿವಾಣ ಹಾಕಿ, ನಿರ್ದಿಷ್ಟ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
2025-26ನೇ ಸಾಲಿನ ಸಾಮಾನ್ಯ ಪ್ರವೇಶಾತಿ ಪರೀಕ್ಷೆಯಲ್ಲಿನ ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಹಲವು ಸುಧಾರಣೆ ತರುವ ನೆಪದಲ್ಲಿ ಅನೇಕ ಗೊಂದಲಗಳನ್ನು ಸೃಷ್ಟಿಸಿರುವುದು ಕಳವಳಕಾರಿಯಾದ ಸಂಗತಿ.
ಈ ಬಾರಿಯ ಕೌನ್ಸಲಿಂಗ್ ಕ್ರಿಯೆಯಲ್ಲಿ ಮೊದಲ ಹಂತದಲ್ಲಿ ಇಂಜಿನಿಯರಿಂಗ್ ಹೊರತು ಪಡಿಸಿ ಇನ್ನಿತರ ಯಾವುದೇ ಕೋರ್ಸ್ ಸೀಟು ಹಂಚಿಕೆ ಪ್ರಕಟಿಸದೆ ಇರುವುದು ಸೇರಿದಂತೆ KEA ಸರ್ವರ್ ಸಮಸ್ಯೆಯಿಂದ ಅನೇಕ ವಿದ್ಯಾರ್ಥಿಗಳಿಗೆ ಆಯ್ಕೆ ಎಂಟ್ರಿ ಪ್ರಕ್ರಿಯೆಯನ್ನು ಸುಗಮವಾಗಿ ಮಾಡಲು ಸಾಧ್ಯವಾಗುತ್ತಿಲ್ಲ.
ಎರಡೆರಡು ಬಾರಿ ಶುಲ್ಕವನ್ನು ಪಾವತಿಸುವಂತೆ ಆಗಿರುವುದಷ್ಟೇ ಅಲ್ಲದೆ, ಸೀಟು ಬ್ಲಾಕಿಂಗ್ ದಂಧೆ ತಪ್ಪಿಸಲು ಮುಖ ಚಹರೆ ಗುರುತಿಸುವ ಅಂಶ ಸರ್ವರ್ ನಲ್ಲಿ ಪ್ರಾರಂಭದಲ್ಲಿ ನೀಡಲಾಗಿತ್ತು. ಅದನ್ನು ವ್ಯವಸ್ಥಿತವಾಗಿ ಉಪಯೋಗಿಸದೆ ತಾಂತ್ರಿಕ ಕಾರಣದ ನೆಪ ಹೊಡ್ದಿ ಕೈ ಬಿಡಲಾಗಿದೆ ಎಂದರು.
ಇದನ್ನೂ ಓದಿ: ಆಗಸ್ಟ್ 15ರೊಳಗೆ ಒಳ ಮೀಸಲಾತಿ ಜಾರಿಯಾಗದಿದ್ದರೆ ಅಸಹಕಾರ ಚಳುವಳಿ | ಎ.ನಾರಾಯಣಸ್ವಾಮಿ
ವಿದ್ಯಾರ್ಥಿಗಳಿಂದ ವಸೂಲಿ ಮಾಡಲಾಗಿರುವ ರೂ.750 ಶುಲ್ಕವನ್ನು ಮರುಪಾವತಿಸಬೇಕು ಎಂದು ಅಗ್ರಹಿಸಿದರು.
ಈ ವೇಳೆ ವಿಭಾಗ ಸಂಚಾಲಕ ಆರ್.ಗೋಪಿ, ಜಿಲ್ಲಾ ಸಂಚಾಲಕ ಸಂಜಯ, ನಗರ ಕಾರ್ಯದರ್ಶಿ ವಿಕಾಸ್, ರಾಜ್ಯ ಕಾರ್ಯಕಾರಿಣಿ ಚಂದ್ರಕಲಾ, ಚರಣ್, ಜೀವನ್, ಹರೀಶ್, ಹರಿಶಂಕರ್, ಪ್ರೀತಮ್, ಕನಕರಾಜ್, ಧನಂಜಯ, ಮಧು ಸೇರಿದಂತೆ ಇತರರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
