ಮುಖ್ಯ ಸುದ್ದಿ
BESCOM: ಶೋಭಾಯಾತ್ರೆ ನೋಡಲು ಕಟ್ಟಡಗಳ ಮೇಲೆರದಂತೆ ಸೂಚನೆ

Published on
CHITRADURGA NEWS | 18 SEPTEMBER 2024
ಚಿತ್ರದುರ್ಗ: ನಗರದಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸೆ.28 ರಂದು ನಡೆಯಲಿದೆ.
ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆ ಚಳ್ಳಕೆರೆ ಗೇಟ್‍ನಿಂದ ಬಿ.ಡಿ.ರಸ್ತೆ ಮೂಲಕ ಹೊಳಲ್ಕೆರೆ ರಸ್ತೆ ಮಾರ್ಗವಾಗಿ ಚಂದ್ರವಳ್ಳಿವರೆಗೆ ಸಾಗಲಿದೆ.

ಇದನ್ನೂ ಓದಿ: ರಾಜ್ಯಪ್ರಶಸ್ತಿಗೆ ಅರ್ಜಿ ಆಹ್ವಾನ
ಈ ಮಾರ್ಗದಲ್ಲಿ ಸಾರ್ವಜನಿಕರು ಶೋಭಾಯಾತ್ರೆ ನೋಡಲು ಯಾವುದೇ ಅಂಗಡಿ ಮುಂಗಟ್ಟು, ಮಳಿಗೆ ಹಾಗೂ ಕಟ್ಟಡದ ಮೇಲೆ ಹತ್ತಬಾರದು ಎಂದು ಬೆಸ್ಕಾಂ ಸೂಚನೆ ನೀಡಿದೆ.
ವಿದ್ಯುತ್ ತಂತಿಗಳು ಕಟ್ಟಡದ ಸಮೀಪವೇ ಹಾದು ಹೊಗಿರುತ್ತವೆ. ಇದರಿಂದ ವಿದ್ಯುತ್ ಅವಘಡಗಳು ಸಂಭವಿಸಬಹುದು. ಆದ್ದರಿಂದ ಅಂಗಡಿ ಹಾಗೂ ಕಟ್ಟಡ ಮಾಲಿಕರು ಈ ಬಗ್ಗೆ ನಿಗಾ ವಹಿಸುವಂತೆ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿಯರ್ ಕೋರಿದ್ದಾರೆ.
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಅಪಘಾತ
Continue Reading
Related Topics:Bajrangdal, Bescom, Chitradurga, Chitradurga news, Chitradurga Updates, Hindu Mahaganapati, Kannada Latest News, Notice, Shobhayatra, Vishwa Hindu Parishad, ಕನ್ನಡ ಲೇಟೆಸ್ಟ್ ನ್ಯೂಸ್, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಬಜರಂಗದಳ, ಬೆಸ್ಕಾಂ, ವಿಶ್ವಹಿಂದೂ ಪರಿಷತ್, ಶೋಭಾಯಾತ್ರೆ, ಸೂಚನೆ, ಹಿಂದೂ ಮಹಾಗಣಪತಿ

Click to comment