ಮೊಳಕಾಳ್ಮೂರು
ವಿಧಾನ ಪರಿಷತ್ತಿನಲ್ಲಿ ಬಹುಮತಕ್ಕೆ ಎಂಎಲ್ಸಿ ಚುನಾವಣೆ ಗೆಲುವು ಅಗತ್ಯ | ಡಾ.ಪಿ.ಎಂ.ಮಂಜುನಾಥ

CHITRADURGA NEWS | 24 MAY 2024
ಮೊಳಕಾಲ್ಮುರು: ವಿಧಾನ ಪರಿಷತ್ತಿನಲ್ಲಿ ಬಹುಮತಕ್ಕೆ ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ ಮಹತ್ವದಾಗಿದ್ದು, ವೈ.ಎ.ನಾರಾಯಣಸ್ವಾಮಿ ಅವರನ್ನು ಗೆಲ್ಲಿಸುವುದು ಅಗತ್ಯವಾಗಿರುತ್ತದೆ ಎಂದು ಮಂಡಲದ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ ಹೇಳಿದರು.
ಇದನ್ನೂ ಓದಿ: ವಿದ್ಯಾರ್ಥಿನಿಲಯಕ್ಕೆ ಸಚಿವ, ಶಾಸಕರ ದಿಢೀರ್ ಭೇಟಿ | ವಾರ್ಡನ್‌ಗೆ ಕ್ಲಾಸ್

ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ-2024 ರ ನಿಮಿತ್ತ ಮೊಳಕಾಲ್ಮುರು ಮಂಡಲದಲ್ಲಿ ಪಕ್ಷದ ಕಾರ್ಯಾಲಯದಲ್ಲಿ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿದ ಅವರು,
ಮೊದಲಿನಿಂದಲೂ ಶಿಕ್ಷಕರ, ಪದವೀಧರರ ಒಲವು ಬಿಜೆಪಿ ಮೇಲೆ ಇದೆ, ನಮ್ಮ ಅಭ್ಯರ್ಥಿ ವೈ.ಎ ನಾರಾಯಣಸ್ವಾಮಿಯವರು ಶಿಕ್ಷಕರ ಕ್ಷೇತ್ರದಿಂದ ಗೆದ್ದಿದ್ದಲ್ಲದೆ ಅವರ ಆಗುಹೋಗುಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಇದನ್ನೂ ಓದಿ: PUC ಪರೀಕ್ಷೆ-2 ಫಲಿತಾಂಶ | ಜಿಲ್ಲೆಯಲ್ಲಿ ಶೇ.27.07 ರಷ್ಟು ವಿದ್ಯಾರ್ಥಿಗಳು ಪಾಸ್
ಕಾಂಗ್ರೆಸ್ ಸರ್ಕಾರ ಮತ್ತು ಅವರ ಶಿಕ್ಷಣ ಸಚಿವರ ಎಡವಟ್ಟು ಇತ್ತೀಚಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಯಲಾಗಿದೆ.
ಇವೆಲ್ಲಾವೂ ಕಾಂಗ್ರೇಸ್ ಸರ್ಕಾರದಲ್ಲಿ ಶಿಕ್ಷಕರ ಮತ್ತು ಶಿಕ್ಷಣ ಕ್ಷೇತ್ರದ ಬಗೆಗಿನ ಅಸಡ್ಡೆ ತೋರಿಸುತ್ತದೆ ಎಂದರು.
ಪ್ರತಿ ಪಂಚಾಯಿತಿವಾರು ಮುಖಂಡರು ಆಯಾ ಪಂಚಾಯಿತಿ, ಹೋಬಳಿಯಲ್ಲಿ ಬರುವ ಮತದಾರ ಶಿಕ್ಷಕರನ್ನು ಖುದ್ದು ಭೇಟಿಯಾಗಿ, ಮತಯಾಚನೆ ಮಾಡಿ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ ಎಂದರು.
ಇದನ್ನೂ ಓದಿ: ಗೋಶಾಲೆಗಳಿಗೆ ನೀರು, ಮೇವು ಪೂರೈಕೆ | ಸಿಎಂಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ
ಸಭೆಯಲ್ಲಿ ಮಂಡಲದ ಪಕ್ಷದ ಹಿರಿಯ ಮುಖಂಡ ಜಿಂಕಲು ಬಸವರಾಜ್, ಸಹಕಾರಿ ಕ್ಷೇತ್ರದ ಧುರೀಣರಾದ ರಾಮರೆಡ್ಡಿ, ಚುನಾವಣಾ ಸಹ ಸಂಚಾಲಕ ಶಾಂತವೀರಣ್ಣ ಸೇರಿದಂತೆ ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಇನ್ನಿತರರು ಭಾಗವಹಿಸಿದ್ದರು.
