ಮುಖ್ಯ ಸುದ್ದಿ
DCC ಬ್ಯಾಂಕ್ ಚುನಾವಣೆ | ಹೈಕೋರ್ಟ್ ತೀರ್ಪಿನತ್ತ ಚಿತ್ತ | ಶಾಸಕ ಟಿ.ರಘುಮೂರ್ತಿ ನಾಮಪತ್ರದ ಭವಿಷ್ಯ ಇಂದು ನಿರ್ಧಾರ

CHITRADURGA NEWS | 09 SEPTEMBER 2024
ಚಿತ್ರದುರ್ಗ: ಜಿಲ್ಲೆಯ ಪ್ರತಿಷ್ಠಿತ ಜಿಲ್ಲಾ ಸಹಕಾರ ಕೇಂದ್ರ (DCC) ಬ್ಯಾಂಕ್ ಚುನಾವಣೆಗೆ ಇನ್ನು ಮೂರು ದಿನ ಮಾತ್ರ ಬಾಕಿ ಇದೆ.
ಆದರೆ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸೇರಿದಂತೆ ಇನ್ನಿತರರ ನಾಮಪತ್ರ ತಿರಸ್ಕøತಗೊಂಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಹೊಸಪೇಟೆಯಲ್ಲಿ ಚಿತ್ರದುರ್ಗದ ಸ್ವಾಮೀಜಿ ಬಂಧನ | ಬರೋಬ್ಬರಿ 35 ಲಕ್ಷ ರೂ. ವಶ
ಹೈಕೋರ್ಟ್ ತೀರ್ಪಿನ ಷರತ್ತಿಗೆ ಒಳಪಟ್ಟು ಚಳ್ಳಕೆರೆ ಶಾಸಕರ ನಾಮಪತ್ರ ತಿರಸ್ಕರಿಸಲಾಗಿದೆ. ಸೆ.5 ರಂದು ನ್ಯಾಯಾಲಯ ನಾಮಪತ್ರ ಅಂಗೀಕರಿಸಲು ಸೂಚಿಸಿ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿತ್ತು.
ಈ ಬಗ್ಗೆ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಕಾರ್ತಿಕ್ ಕೂಲಂಕುಷವಾಗಿ ಪರಿಶೀಲಿಸಿ, ಬ್ಯಾಂಕಿನ ಬೈಲಾ ಆಧಾರವಾಗಿಟ್ಟುಕೊಂಡು ನಾಮಪತ್ರ ತಿರಸ್ಕರಿಸಿದ್ದಾರೆ. ಆದರೆ, ಒಂದು ವೇಳೆ, ಸೆ.9 ಅಂದರೆ ಇಂದು ಹೈಕೋರ್ಟ್ ಚುನಾವಣೆ ಸ್ಪರ್ಧೆಗೆ ಅನುವು ಮಾಡಿಕೊಡಲು ಆದೇಶಿಸಿದರೆ ಮತ್ತೆ ನಾಮಪತ್ರ ಅಂಗೀಕರಿಸಬೇಕಾಗುತ್ತದೆ.
ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ ಫಿಕ್ಸ್ | ಘಟಾನುಘಟಿಗಳ ನಡುವೆ ಪೈಪೋಟಿ
ಚುನಾವಣೆಗಿಂತ ಮೊದಲೇ ನ್ಯಾಯಾಲಯದ ತೀರ್ಪು ಬರುವ ಅಂದಾಜಿನಲ್ಲಿ ಹೈಕೋರ್ಟಿನ ಷರತ್ತಿಗೆ ಒಳಪಟ್ಟು ನಾಮಪತ್ರವನ್ನು ತಿರಸ್ಕರಿಸಲಾಗಿದೆ.
ಇಂದು ಶಾಸಕ ರಘುಮೂರ್ತಿ ಪರವಾಗಿ ತೀರ್ಪು ಬಂದರೆ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಹೈಕೋರ್ಟ್ ನೀಡುವ ತೀರ್ಪಿನತ್ತ ಎಲ್ಲರ ಗಮನ ಕೇಂದ್ರಿಕೃತವಾಗಿದೆ.
ನಾಲ್ಕು ಜನರ ನಾಮಪತ್ರ ತಿರಸ್ಕøತ:
ಶಾಸಕ ಟಿ.ರಘುಮೂರ್ತಿ, ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಪಿ.ಮಂಜುನಾಥ್, ಅರುಣ್‍ಕುಮಾರ್ ಹಾಗೂ ಹಾಲು ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿ.ಎಸ್.ಶಶಿಧರ್ ಅವರ ನಾಮಪತ್ರಗಳು ತಿರಸ್ಕøತವಾಗಿವೆ.
ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ ಸಚಿವ ಡಿ.ಸುಧಾಕರ್ ಸೇರಿ 6 ಮಂದಿ ಅವಿರೋಧ ಆಯ್ಕೆ
ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ರಾಮರೆಡ್ಡಿ ಅವರ ನಾಮಪತ್ರ ತಿರಸ್ಕøತವಾಗಿದೆ. ರಾಮರೆಡ್ಡಿ ಅವರು ಅನರ್ಹತೆ ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿಲ್ಲದ ಕಾರಣ ಅವರಿಗೆ ಷರತ್ತು ಅನ್ವಯ ಆಗುವುದಿಲ್ಲ.
ಸಚಿವ ಡಿ.ಸುಧಾಕರ್ ಅವಿರೋಧ ಆಯ್ಕೆ:
ಈ ನಡುವೆ ಚುನಾವಣೆಗೆ ಮೊದಲೇ ಹಾಲಿ ಬ್ಯಾಂಕಿನ ಅಧ್ಯಕ್ಷ, ಸಚಿವ ಡಿ.ಸುಧಾಕರ್, ಹೊಳಲ್ಕೆರೆಯಿಂದ ಎಸ್.ಆರ್.ಗಿರೀಶ್, ಹಿರಿಯೂರಿನಿಂದ ಮಂಜುನಾಥ್, ಟಿಎಪಿ ಸಿಎಂಎಸ್‍ನಿಂದ ಎಚ್.ಬಿ.ಮಂಜುನಾಥ್, ನೇಕಾರಿಕೆ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ಜಗಣ್ಣ, ಪಟ್ಟಣ ಸಹಕಾರ ಬ್ಯಾಂಕ್ ಕ್ಷೇತ್ರದಿಂದ ರಘುರಾಮರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
