
CHITRADURGA NEWS | 27 DECEMBER 2025
ಚಿತ್ರದುರ್ಗ: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರ ಬಿಡುಗಡೆ ಮತ್ತು ಅವರ ಒಳಿತಿಗಾಗಿ ಪ್ರಾರ್ಥಿಸಿ ಪಪ್ಪಿ ಅಭಿಮಾನನಿ ಅಯ್ಯಪ್ಪ ಸ್ವಾಮಿ ಮಾಲಾಧಾರಣೆ ಮಾಡಿ ಚಿತ್ರದುರ್ಗದಿಂದ ಶಬರಿಮಲೆ ಸನ್ನಿದಾನಕ್ಕೆ ಸುಮಾರು 840 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದಾರೆ.
ಇದನ್ನೂ ಓದಿ: ಅಡಿಕೆ ಧಾರಣೆ | ಡಿಸೆಂಬರ್ 27 | ತೀರ್ಥಹಳ್ಳಿ, ಹೊನ್ನಾಳಿ ಮಾರುಕಟ್ಟೆ ವರದಿ

ತಾಲೂಕಿನ ಹಿರೇಗುಂಟನೂರು ಗ್ರಾಮದ ನಿವಾಸಿ ಬಸವರಾಜ್ ನ.29ರಂದು ಮೆದೇಹಳ್ಳಿ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಪಾದಯಾತ್ರೆ ಆರಂಭಿಸಿ ಡಿ.26 ಕ್ಕೆ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನ ತಲುಪಿದ್ದಾರೆ.
ಶಾಸಕ ಕೆ.ಸಿ ವೀರೇಂದ್ರ(ಪಪ್ಪಿ) ಒಳಿತಿಗಾಗಿ ಸತತ ಒಂದು ತಿಂಗಳು ಪಾದಯಾತ್ರೆ ಮಾಡಿದ್ದು, ಸನ್ನಿಧಾನ ತಲುಪಿದ್ದೇನೆ, ಶಾಸಕರಿಗೆ ಬಂದಿರುವ ಕಷ್ಟಗಳು ನಿರ್ಮೂಲನೆಯಾಗಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಾಳಪ್ಪನಹಟ್ಟಿ ನಿವಾಸಿ ಪ್ರಸಾದ್ ನಿಧನ
ಅವರಿಲ್ಲದೆ ಕ್ಷೇತ್ರ ಅಭಿವೃದ್ಧಿಯಾಗಲು ಕುಂಠಿತವಾಗಿದೆ. ಈ ಪ್ರಕರಣದಿಂದ ಮುಕ್ತಿ ಹೊಂದಲಿ ಎಂದು ಅಯ್ಯಪ್ಪನಲ್ಲಿ ಬೇಡಿಕೊಂಡಿರುವೆ. ಪಾದಯಾತ್ರೆ ನಡೆಸಿದ ಮಾರ್ಗದುದ್ದಕ್ಕೂ ಶಾಸಕರ ಭಾವಚಿತ್ರ ಪ್ರದರ್ಶಿಸಿದ್ದೇನೆ ಎಂದು ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
