
CHITRADURGA NEWS | 26 OCTOBER 20225
ಚಿತ್ರದುರ್ಗ: ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಅ.27ರಂದು ಚಿತ್ರದುರ್ಗ ಜಿಲ್ಲಾ ನಾಯಕ ಸಮಾಜ ವತಿಯಿಂದ ನಾಡದೊರೆ ರಾಜವೀರ ಮದಕರಿ ನಾಯಕ ಜಯಂತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಇದನ್ನೂ ಓದಿ: ತರಳಬಾಳು ಶ್ರೀಗಳ ಜಲಕಲ್ಯಾಣ | ಕೋಡಿ ಬಿದ್ದ ಕೆರೆ | ಮುಗಿಲು ಮುಟ್ಟಿದ ಜನರ ಸಂಭ್ರಮ

ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಕನಕ ವೃತ್ತದಲ್ಲಿ ಮಧ್ಯಾಹ್ನ 2ಕ್ಕೆ ನಡೆವ ಸಭಾ ಕಾರ್ಯಕ್ರಮದಲ್ಲಿ ಹರಿಹರ ತಾಲೂಕಿನ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಾನಾ ಸಮುದಾಯಗಳ ಮಠಾಧೀಶರು ಸಮ್ಮುಖ ವಹಿಸುವರು. ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆ ವಹಿಸುವರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಬಿ.ಶ್ರೀರಾಮುಲು ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ರಾಜ್ಯ ನಾನಾ ಭಾಗಗಳ ಸಮುದಾಯದ ಶಾಸಕರು, ಮಾಜಿ ಶಾಸಕರು, ಗಣ್ಯರು, ಸಮುದಾಯದ ಮುಖಂಡರು ಭಾಗವಹಿಸುವರು.
ರಾಜ ವೀರ ಮದಕರಿ ನಾಯಕ ಸ್ಥಬ್ದಚಿತ್ರದ ಮೆರವಣಿಗೆ:
ಸುಮಾರು 3 ಗಂಟೆಗೆ ಮೆರವಣಿಗೆ ನಡೆಯಲಿದ್ದು ಈ ಬಾರಿ ಮೈಸೂರು ದಸರಾದಲ್ಲಿ ಬೆಂಗಳೂರು ವಿಭಾಗದಿಂದ ಪ್ರಥಮ ಸ್ಥಾನ ಪಡೆದುಕೊಂಡು ರಾಜ ವೀರ ಮದಕರಿ ನಾಯಕ ಸ್ಥಬ್ದಚಿತ್ರ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಲಿದೆ. ಜತೆಯಲ್ಲಿ ಮದಕರಿ ನಾಯಕರ ಭಾವಚಿತ್ರದ ಮೆರವಣಿಗೆಯು ಕನಕ ವೃತ್ತದಿಂದ ಆರಂಭವಾಗಿ ಗಾಂಧಿ ಸರ್ಕಲ್, ಬಿ.ಡಿ.ರಸ್ತೆ, ಪ್ರವಾಸಿ ಮಂದಿರ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಮದಕರಿ ನಾಯಕರ ಪ್ರತಿಮೆ ಬಳಿ ಸಮಾಪ್ತಿಗೊಳ್ಳಲಿದೆ.
ಇದನ್ನೂ ಓದಿ: ಸುತ್ತೋಲೆ ಹಿಂಪಡೆಯಲು ಉಪನ್ಯಾಸಕರು, ಪ್ರಚಾರ್ಯರಿಂದ ಮನವಿ
ಮದಕರಿ ನಾಯಕ ಪ್ರತಿಮೆ ಬಳಿ ರಾತ್ರಿ 7.30 ರಿಂದ 8 ಗಂಟೆವರೆಗೆ ಲೇಜರ್ ಶೋ, ಧ್ವನಿ ಬೆಳಕು ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಬಾನಂಗಳದಲ್ಲಿ ರಂಗು ರಂಗಿನ ಚಿತ್ತಾರ ಮೂಡಿಸುವ ಆಕರ್ಷಕ ಪಟಾಕಿ ಸಿಡಿಸಲಾಗುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಬಿ.ಕಾಂತರಾಜ್, ಸಮಾಜದ ಮುಖಂಡರಾದ ಶ್ರೀನಿವಾಸ ನಾಯಕ, ಎಸ್.ಮಂಜುನಾಥ ಮಲ್ಲಾಪುರ, ಎ.ತಿಪ್ಪೇಸ್ವಾಮಿ, ಬಿ.ಮಂಜುನಾಥ್, ಎಚ್.ಅಂಜಿನಪ್ಪ, ವೆಂಕಟೇಶ್, ಲಿಂಗವ್ವ ನಾಯತಿಹಳ್ಳಿ ತಿಪ್ಪೇಸ್ವಾಮಿ, ಪಾಪೇಶ್‌ನಾಯಕ್, ಬಿ.ದಿನೇಶ್ ಗೌಡಗೆರೆ ಸೇರಿದಂತೆ ಸಮುದಾಯದ ಇತರೆ ಮುಖಂಡರು, ಸರ್ವ ಸಮುದಾಯದ ಮುಖಂಡರು, ಗಣ್ಯರು ಭಾಗವಹಿಸಲಿದ್ದಾರೆ ಎಂದು ನಾಯಕ ಸಮಾಜ ಪ್ರಕಟಣೆಯಲ್ಲಿ ತಿಳಿಸಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
