
CHITRADURGA NEWS | 24 OCTOBER 2025
ಚಿತ್ರದುರ್ಗ: ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರಿಗೆ ಆದೇಶಿಸಿರುವ ಸುತ್ತೋಲೆ ಹಿಂಪಡೆಯಲು ಒತ್ತಾಯಿಸಿ ಉಪನ್ಯಾಸಕ ಮತ್ತು ಪ್ರಾಂಶುಪಾಲರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ನಗರಸಭೆ ಸದಸ್ಯರ ಪ್ರವಾಸ | ಅಕ್ರಮ ಮತ್ತು ಮೋಜು ಮಸ್ತಿಗಾಗಿ | ಮಹೇಶ್ ಸಿ ನಗರಂಗೆರೆ

ನಗರದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಮೂಲಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ ಉಪನ್ಯಾಸಕ ಮತ್ತು ಪ್ರಾಚಾರ್ಯರು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಗಾವಹಿಸುವ ಉದ್ದೇಶದಿಂದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿತ್ತಿರುವ ಹಿರಿಯ ಉಪನ್ಯಾಸಕರ ಮೂಲಕ ಸ್ಥಳೀಯ ಪರಿಶೀಲನೆಗಳನ್ನು ನಡೆಸುವಂತೆ ತೀರ್ಮಾನಿಸಲಾಗಿದೆ.
ಈ ಸುತ್ತೋಲೆ ಪದವಿ ಪೂರ್ವ ಶಿಕ್ಷಣದ ಅಸ್ಮಿತೆ ಗೌರವ ಮತ್ತು ಶೈಕ್ಷಣಿಕ ತತ್ತ್ವಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಡಯಟ್‍ನ ಹಿರಿಯ ಉಪನ್ಯಾಸಕರು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದೀರಿ. ಆದರೆ, ವಾಸ್ತವವಾಗಿ ಡಯಟ್‍ನಲ್ಲಿ ಇರುವ ಹುದ್ದೆ ಉಪನ್ಯಾಸಕರ ಹುದ್ದೆ ಅಲ್ಲ, ಪರೀಕ್ಷಕರು, ಬಿಎ, ಬಿ.ಇಡಿ, ಬಿಎಸ್ಸಿ ಆಗಿರುತ್ತದೆ.
ಹಾಗಾಗಿ ಅದು ಉಪನ್ಯಾಸಕರ ಹುದ್ದೆ ಅಲ್ಲ. ಅಶಿಕ್ಷಕ ಎಂದು ಸಂಬೋಧನೆ ಮಾಡುತ್ತಾರೆ. ಅವರು ವಿಷಯಕ್ಕೆ ಸಂಬಂಧಪಟ್ಟಂತೆ ವಿಷಯಾಧಾರಿತ ಬೋಧನಾ ಪದ್ಧತಿ ಪಾಠ ಮಾಡುತ್ತಾರೆಯೇ ವಿನ: ಅವರಿಗೆ ಪದವಿ ಪೂರ್ವ ಶಿಕ್ಷಣದ ವಿಷಯಕ್ಕೆ ಸಂಬಂಧಪಟ್ಟಂತೆ ಆಳವಾದ ಜ್ಞಾನ ಇರುವುದಿಲ್ಲ ಎಂದು ಪ್ರತಿಪಾದಿಸಿದರು.
ಪದವಿ ಪೂರ್ವ ಶಿಕ್ಷಣ ಹಂತವು ಶಾಲಾ ತರಬೇತಿ ವಿಸ್ತರಣೆ ಅಲ್ಲ. ಅದು ವೈಜ್ಞಾನಿಕ ಪೂರ್ವ ಪಠ್ಯಕ್ರಮದ ವೈಜ್ಞಾನಿಕ ಹಿನ್ನೆಲೆ, ವಿಷಯದ ವ್ಯಾಪ್ತಿ ಹಾಗೂ ಅಳವಾದ ಕಲ್ಪನೆಗಳ ಕುರಿತ ಅರಿವು ಇರುವದಿಲ್ಲ. ಗಣಿತ, ರಸಾಯನಶಾಸ್ತ್ರ ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟಿಂಗ್ ವಿಜ್ಞಾನ ವಿಷಯದ ಬಗ್ಗೆ ಪರಿಕಲ್ಪನೆ ಸೇರಿದಂತೆ ಹಲವು ಕೊರತೆಗಳಿರುವುದರಿಂದ ಸುತ್ತೋಲೆಯನ್ನು ಕೊಡಲೇ ಹಿಂಪಡೆಯಬೇಕು.
ಇದನ್ನೂ ಓದಿ: ಅಡಿಕೆ ಧಾರಣೆ | ಅಕ್ಟೋಬರ್ 24 | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಇಲ್ಲವಾದರೆ ಅನ್ಯ ಮಾರ್ಗವಿಲ್ಲದೆ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಮತ್ತು ಉಪನ್ಯಾಸಕರ ಸಂಘದಿಂದ ತೀವ್ರತರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಾಚಾರ್ಯರ ಸಂಘದ ಅಧ್ಯಕ್ಷ ಪಿ.ಎಂ.ರಾಜೇಶ್, ಕಾಯದರ್ಶಿ ಕೆ.ಎನ್.ವಂಸಂತ ಕುಮಾರ್, ಖಂಜಾಚಿ ಡಾ.ಶಬ್ಬೀರ್ ಅಹಮ್ಮದ್ ಖಾನ್, ಉಪನ್ಯಾಸಕರ ಸಂಘದ ಅಧ್ಯಕ್ಷ ಮಲ್ಲೇಶಪ್ಪ, ಕಾರ್ಯದರ್ಶಿ ಕಾಂತರಾಜ್, ಕಾರ್ಯಧ್ಯಕ್ಷ ಜಿ.ಎಸ್.ತಿಪ್ಪಸ್ವಾಮಿ, ಖಂಜಾಚಿ ಎಸ್.ಕೆಂಚವೀರಪ್ಪ, ಜಿಲ್ಲಾ ಜಂಟಿ ಕಾರ್ಯದರ್ಶಿ ನಾಗರಾಜ್ ಇತರರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
