CHITRADURGA NEWS | 24 OCTOBER 2025
ಚಿತ್ರದುರ್ಗ: ಚಿತ್ರದುರ್ಗ ನಗರಸಭೆಯ ಸದಸ್ಯರು ಮತ್ತು ಕೆಲವು ನೌಕರರು ಸೇರಿ, ಒಟ್ಟು 32 ಜನರ ತಂಡವು ಅಹಮದಬಾದ್ ಮತ್ತು ಚಂಡೀಗಡ ನಗರಗಳಲ್ಲಿ ಸ್ವಚ್ಚ ಭಾರತ ಮಿಷನ್ 2.0 ಯೋಜನೆಯ ಅಡಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಬಗ್ಗೆ ಅಧ್ಯಯನ ಪ್ರವಾಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 24| ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಈ ತಂಡವು ಈಗಾಗಲೇ ಚಿತ್ರದುರ್ಗದಿಂದ ಪ್ರಯಾಣ ಬೆಳಸಿದ್ದು, ಬೆಂಗಳೂರಿನಿಂದ ವಿಮಾನದ ಮೂಲಕ ಅಹಮದಬಾದ್ ಮತ್ತು ಚಂಡೀಗಡ ನಗರಗಳಲ್ಲಿ ಪ್ರಯಾಣಿಸಲಿದ್ದಾರೆ. ಪ್ರವಾಸಕ್ಕೆ 27 ಲಕ್ಷಕ್ಕೂ ಹೆಚ್ಚು ಸಾರ್ವಜನಿಕ ಹಣ ಖರ್ಚಾಗುತ್ತಿದೆ.
ಆದರೆ ಸದಸ್ಯರುಗಳು ಪ್ರವಾಸ ಮುಗಿಸಿ ಬಂದ ಒಂದೆರಡು ದಿನಗಳಲ್ಲಿ, ಅವರ ಅವಧಿಯು ಮುಕ್ತಾಯವಾಗಲಿದೆ.
ಪ್ರಸ್ತುತ ನಗರಸಭೆಯ ಅವಧಿಯು ಇದೇ ಅಕ್ಟೋಬರ್ 31, 2025 ಕ್ಕೆ ಮುಕ್ತಾಯವಾಗಲಿದೆ. ಇಂತಹ ಸಂದರ್ಭದಲ್ಲಿ ಈ ಅಧ್ಯಯನ ಪ್ರವಾಸದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಈ ಪ್ರವಾಸದ ಸಂಪೂರ್ಣ ಹಣ ಮತ್ತು ಸಮಯ ವ್ಯರ್ಥವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇದನ್ನೂ ಓದಿ: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ | ನಾನು ಸಹಾ ಆಕಾಂಕ್ಷಿ | ವಸಂತಕುಮಾರ್
ನಗರಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವನ್ನು ಬಗೆಹರಿಸಲು ಹಣಕಾಸಿನ ತೊಂದರೆ ಇರುತ್ತದೆ. ಅವಧಿ ಮುಕ್ತಾಯವಾಗುವ ಹಂತದಲ್ಲಿ ಈ ಪ್ರವಾಸ ಮಾಡುತ್ತಿರುವುದು ಅಕ್ರಮ ಮತ್ತು ಮೋಜು ಮಸ್ತಿಗಾಗಿ.
ಇಂತಹ ಪ್ರವಾಸಕ್ಕೆ ಅನುಮತಿ ನೀಡಿರುವುದೇ ಅಕ್ರಮವಾಗಿರುತ್ತದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಮಹೇಶ್ ಸಿ ನಗರಂಗೆರೆ ಆಗ್ರಹಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
