Connect with us

    ಲೋಕಸಭಾ ಚುನಾವಣೆ | 70 ಸಾವಿರಕ್ಕಿಂತಲೂ ಅಧಿಕ ಮತಗಳಿಂದ ನಿಶ್ಚಿತ ಗೆಲುವು | ಗೋವಿಂದ ಕಾರಜೋಳ 

    ಗೋವಿಂದ ಕಾರಜೋಳ

    ಮುಖ್ಯ ಸುದ್ದಿ

    ಲೋಕಸಭಾ ಚುನಾವಣೆ | 70 ಸಾವಿರಕ್ಕಿಂತಲೂ ಅಧಿಕ ಮತಗಳಿಂದ ನಿಶ್ಚಿತ ಗೆಲುವು | ಗೋವಿಂದ ಕಾರಜೋಳ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 03 JUNE 2024

    ಚಿತ್ರದುರ್ಗ: ಬಿಜೆಪಿ ಪಕ್ಷದ ಸಾಂಪ್ರದಾಯಕ ಮತದಾರರು ಶೇ.75 ರಷ್ಟು ಮತದಾನ ಮಾಡಿದ್ದಾರೆ. ಈ ಚುನಾವಣೆಯಲ್ಲಿ ನಾನು 70 ಸಾವಿರ ಅಧಿಕ ಮತಗಳಿಂದ ನಿಶ್ಚಿತವಾಗಿ ಗೆಲುವನ್ನು ಸಾಧಿಸುತ್ತೇನೆ ಎಂದು ಎನ್.ಡಿ.ಎ.ಮೈತ್ರಿ ಕೂಟದ ಅಭ್ಯರ್ಥಿ ಗೋವಿಂದ ಕಾರಜೋಳ ಭರವಸೆ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ | ಬಿರುಸಿನಿಂದ ಸಾಗಿದ ಮತದಾನ

    ನಗರದಲ್ಲಿ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು.

    ಚಿತ್ರದುರ್ಗ ಲೋಕಸಭೆಯಲ್ಲಿ ಸಹಾ ನರೇಂದ್ರ ಮೋದಿಯವರು ಆಡಳಿತವನ್ನು ಮೆಚ್ಚಿದ್ದಾರೆ, ಮತದಾರರ ಮನೆ ಬಾಗಿಲಿಗೆ ನಾವು ಹೋದಾಗ ನೀವು ಗೆಲ್ಲಿತ್ತಿರಾ ಹೋಗ್ರೀ, ಈ ಬಾರಿ ನಾವು ನರೆಂದ್ರ ಮೋದಿಯವರಿಗೆ ಮತವನ್ನು ನೀಡುವುದಾಗಿ ತಿಳಿಸಿದ್ದಾರೆ.

    ಚಿತ್ರದುರ್ಗ ಜನರು ಗೋವಿಂದ ಕಾರಜೋಳ ಬಂದರೆ ನೀರಾವರಿ, ಕುಡಿಯುವ ನೀರಿನ ಬಗ್ಗೆ ಮೂಲಭೂತ ಸೌಕರ್ಯದ ಬಗ್ಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡುತ್ತಾರೆ ಎಂಬ ಭಾವನೆ ಇಟ್ಟುಕೊಂಡಿದ್ದಾರೆ. 30 ವರ್ಷದ ಅಧಿಕಾರದ ಅವಧಿಯಲ್ಲಿ ಮಾಡಿದ ಕೆಲಸ ಕಾರ್ಯವನ್ನು ಗಮನದಲ್ಲಿ ಇಟ್ಟುಕೊಂಡು ಮತದಾನ ಮಾಡಿದ್ದಾರೆ ಎಂದರು.

    ಇದನ್ನೂ ಓದಿ: ತಡರಾತ್ರಿ ಅಬ್ಬರಿಸಿದ ಮಳೆರಾಯ | ತುಂಬಿ ಹರಿದ ಹಳ್ಳಕೊಳ್ಳಈ ಜಿಲ್ಲೆಗೆ

    ನಾನು ಹೊಸಬನಾಗಿದ್ದೇನೆ, ಮಂತ್ರಿಯಾಗಿ ಹಲವಾರು ಬಾರಿ ಬಂದಿರಬಹುದು. ಇಲ್ಲಿ ಹಲವಾರು ಕೆಲಸವನ್ನು ಮಾಡಿದ್ದೇನೆ, ಇದನ್ನು ಮತದಾರರು ಚುನಾವಣೆಯಲ್ಲಿ ನೆನಪಿಸಿಕೊಂಡಿದ್ದಾರೆ. ಈಗ ನನಗೆ ಆತ್ಮ ವಿಶ್ವಾಸ ಇದೆ ನಾನು ಗೆದ್ದು ಬರುತ್ತೇನೆ ಎಂದು ಹೇಳಿದರು.

    ರಾಜಕೀಯ ಅನುಭವ ಮತ್ತು ಲೆಕ್ಕಾಚಾರದ ಪ್ರಕಾರ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ 24ಕ್ಕಿಂತಲ್ಲೂ ಹೆಚ್ಚು ಸ್ಥಾನವನ್ನು ಎನ್.ಡಿ.ಎ ಗೆದ್ದರೆ ಆಶ್ಚರ್ಯ ಪಡಬೇಕಿಲ್ಲ, ಇನ್ನೂ ಹೆಚ್ಚಳವಾದರೂ ಆಗಬಹುದಾಗಿದೆ ಎಂದರು.

    ಇದನ್ನೂ ಓದಿ: ಆದರ್ಶ ವಿದ್ಯಾಲಯ | ಅರ್ಜಿ ಆಹ್ವಾನ

    ನರೆಂದ್ರ ಮೋದಿಯವರ ಮತ್ತೋಮ್ಮೆ ಈ ದೇಶದ ಪ್ರಧಾನ ಮಂತ್ರಿಗಳಾಗಲಿದ್ದಾರೆ. ಮುಂದಿನ 5 ವರ್ಷದ ಅವಧಿಯಲ್ಲಿ ಭಾರತ ಪ್ರಪಂಚದ ವಿಶ್ವ ಗುರು ಆಗುವ ನಂಬಿಕೆ ಇದೆ ಎಂದು ತಿಳಿಸಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top