
ಟೋನಿ ಚಿತ್ರದುರ್ಗ | Updated By: ಕರ್ಣ Updated on: Jun 03, 2024 | 11:37 AM
CHITRADURGA NEWS | 03 JUNE 2024
ಚಿತ್ರದುರ್ಗ: ಜಿಲ್ಲೆಯಲ್ಲಿ ಮುಂಗಾರು ನಿಧಾನಗತಿಯಲ್ಲಿ ಚುರುಕು ಪಡೆಯುತ್ತಿದ್ದು, ಭಾನುವಾರ ರಾತ್ರಿ ವಿವಿಧೆಡೆ ಉತ್ತಮ ಮಳೆಯಾಗಿದೆ.
ಮೊಳಕಾಲ್ಮುರು, ಹಿರಿಯೂರು, ಚಿಕ್ಕಜಾಜೂರು, ಭರಮಸಾಗರದಲ್ಲಿ ಮಳೆರಾಯ ಕೊಂಚ ಜೋರಾಗಿ ಅಬ್ಬರಿಸಿದ್ದಾನೆ. ಕತ್ತಲು ಸರಿದು ಬೆಳಕು ಹರಿಯುವ ಹೊತ್ತಿಗೆ ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಕೆಲ ಭಾಗದಲ್ಲಿ ರಸ್ತೆಗಳ ಮೇಲೆ ನೀರು ಹರಿಯುತ್ತಿರುವ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಚಿಕ್ಕಜಾಜೂರು ಸಮೀಪದ ಹಲವು ಗ್ರಾಮಗಳಲ್ಲಿ ಬಿರುಸಿನ ಮಳೆಯಾಗಿದೆ. ಸಮೀಪದ ಹಿರೇಎಮ್ಮಿಗನೂರು ಗ್ರಾಮದಲ್ಲಿ ಭಾನುವಾರ ಸಂಜೆ 6 ಗಂಟೆಗೆ ಮಳೆ ಆರಂಭವಾಗಿ ಸುಮಾರು 45 ನಿಮಿಷಗಳ ಕಾಲ ರಭಸವಾಗಿ ಸುರಿಯಿತು. ಇದರಿಂದಾಗಿ ಗ್ರಾಮದ ತೋಟ ಹಾಗೂ ಜಮೀನುಗಳಲ್ಲಿ ನೀರು ನಿಂತಿದ್ದು ಕಂಡು ಬಂದಿತು.
ಕ್ಲಿಕ್ ಮಾಡಿ ಓದಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ | ಮೌಲ್ವಿ ಬಂಧನ
ಸಮೀಪದ ಅಂತಾಪುರ ಹಾಗೂ ನಂದಿಹಳ್ಳಿ ಗ್ರಾಮಗಳಲ್ಲೂ ಗುಡುಗು ಹಾಗೂ ಗಾಳಿ ಸಹಿತ ಸುಮಾರು ಅರ್ಧ ಗಂಟೆ ಬಿರುಸಿನ ಮಳೆಯಾಗಿದೆ. ರಸ್ತೆ ಹಾಗೂ ಚರಂಡಿಗಳಲ್ಲಿ ನೀರು ಹರಿಯಿತು. ಮಳೆಯಿಂದಾಗಿ, ಜಮೀನು ಹದಗೊಳಿಸಲು ಹಾಗೂ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ಮೊಳಕಾಲ್ಮುರು 36.2 ಮಿ.ಮೀ., ರಾಯಾಪುರ 12.3, ಬಿಜಿಕೆರೆ 7.2, ರಾಂಪುರ 31 ಹಾಗೂ ದೇವಸಮುದ್ರದಲ್ಲಿ 29.2 , ಹಿರಿಯೂರು 62.4, ಸೂಗೂರು 17.3, ಬಬ್ಬೂರು 51.6, ಈಶ್ವರಗೆರೆ 14.2, ಇಕ್ಕನೂರು 22.2 ಮಿ.ಮೀ ಮಳೆ ದಾಖಲಾಗಿದೆ.
ಕ್ಲಿಕ್ ಮಾಡಿ ಓದಿ: ಪರಿಸರ ದಿನಾಚರಣೆ ಸಾಂಕೇತಿಕವಾಗದಿರಲಿ | ಎಚ್.ಹನುಮಂತಪ್ಪ
ಜಿಲ್ಲೆಗೆ ಸೋಮವಾರ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣವಿದ್ದು, ಮಳೆಯಾಗುವ ನಿರೀಕ್ಷೆ ಇದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
