Connect with us

    ಪರಿಸರ ದಿನಾಚರಣೆ ಸಾಂಕೇತಿಕವಾಗದಿರಲಿ | ಎಚ್.ಹನುಮಂತಪ್ಪ

    ನಿಜಲಿಂಗಪ್ಪ ಮೆಮೋರಿಯಲ್ ಸ್ಮಾರಕದ ಜಾಗದಲ್ಲಿ ಸಸಿ ನೆಡುವ ಸಮಾರಂಭದಲ್ಲಿ

    ಮುಖ್ಯ ಸುದ್ದಿ

    ಪರಿಸರ ದಿನಾಚರಣೆ ಸಾಂಕೇತಿಕವಾಗದಿರಲಿ | ಎಚ್.ಹನುಮಂತಪ್ಪ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 02 JUNE 2024

    ಚಿತ್ರದುರ್ಗ: ಕಳೆದ ಐವತ್ತು ವರ್ಷಗಳಿಂದ ಪರಿಸರ ಸಂರಕ್ಷಣೆಗಾಗಿ ವನಮಹೋತ್ಸವದ ಹೆಸರಿನಲ್ಲಿ ಸಸಿ ನೆಡುತ್ತಲೇ ಬಂದಿದ್ದೇವೆ. ಆ ಎಲ್ಲಾ ಸಸಿಗಳು ಉಳಿದಿವೆಯೇ? ಹಾಕಿದ ಗಿಡಗಳೆಲ್ಲವೂ ಮರಗಳಾಗಿದ್ದರೆ ನಾವಿಂದು ಕಾಲಿಡಲು ಜಾಗ ಆಗುತ್ತಿರಲಿಲ್ಲ. ಎಲ್ಲಾ ಕಡೆ ಸಸ್ಯ ಸಂಪತ್ತು ರಾರಾಜಿಸಬೇಕಾಗಿತ್ತು. ನೆಟ್ಟ ಸಸಿಗಳ ಘೋಷಣೆ ಸರಿಯಾದ ಕ್ರಮದಲ್ಲಿ ಆಗದೆ ಬರಿ ದಿನಾಚರಣೆಗಳ ನೆಪಕ್ಕೆ ಮಾತ್ರ ಎನ್ನುವಂತಾಗಿದೆ ಎಂದು ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ನ ಗೌರವ ಕಾರ್ಯದರ್ಶಿ ಎಚ್.ಹನುಮಂತಪ್ಪ ವಿಷಾದ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಕೋಟೆನಾಡಿಗೆ ಕಾಲಿಟ್ಟ ಮುಂಗಾರು ಮಳೆ | ಕೃತಿಕೆಯ ನಂತರ ರೋಹಿಣಿಯ ಪ್ರೀತಿ | ಶನಿವಾರ ಎಲ್ಲೆಲ್ಲಿ ಎಷ್ಟು ಮಳೆ

    ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ, ಜಿಲ್ಲಾ ಅರಣ್ಯ ಇಲಾಖೆಯ ಸಹಕಾರದೊಂದಿಗೆ ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿರುವ ಸಸಿ ನೆಡುವ ಸಪ್ತಾಹದ ನಿಮಿತ್ತ ನಗರದ ಹೊರವಲಯದ ಸೀಬಾರದ ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರ ಸ್ವಾಮಿಗಳ ಜಾತ್ರಾ ಮಹೋತ್ಸವದ ಪ್ರದೇಶದಲ್ಲಿ ಹಾಗೂ ನಿಜಲಿಂಗಪ್ಪ ಮೆಮೋರಿಯಲ್ ಸ್ಮಾರಕದ ಜಾಗದಲ್ಲಿ ಸಸಿ ನೆಡುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿ,

    ಇದನ್ನೂ ಓದಿ: ಚಿತ್ರದುರ್ಗಕ್ಕೆ ಯೆಲ್ಲೊ ಅಲರ್ಟ್ | ಭಾರಿ ಮಳೆ ಸಾಧ್ಯತೆ

    ಎಸ್ಸೆನ್ ಅವರಿಗೆ ಅವರ ಸಮಾಧಿ ಸ್ಮಾರಕವಾಗಿ ಉಳಿಯಬೇಕೆಂಬ ಅಪೇಕ್ಷೆ ಏನೂ ಇರಲಿಲ್ಲ. ನಾನು ಮತ್ತು ಸ್ವಾಮಿಗಳವರು ಅಂದು ಅವರ ಮನೆಗೆ ಹೋಗಿ ಒಪ್ಪಿಸಿದೆವು. ಕಾರಣ ಅವರೊಬ್ಬ ನಿಸ್ವಾರ್ಥ, ಆದರ್ಶ ವ್ಯಕ್ತಿತ್ವದ ಅಪಾರ ದೇಶಪ್ರೇಮವುಳ್ಳ ರಾಜಕಾರಣ ಅನ್ನುವ ಕಾರಣಗಳಿಂದ.

    ಕನ್ನಡ ನಾಡಿನ ಏಕೀಕರಣ ಮತ್ತು ಭಾಷಾವಾರು ಪ್ರಾಂತ ರಚನೆಯ ಪರವಾಗಿದ್ದ ಅವರಿಂದ ಕರ್ನಾಟಕಕ್ಕೆ ಕೊಡುಗೆ ಬಹಳಷ್ಟು ಆಗಿದೆ. ಹಾಗಾಗಿ ನಿಜಲಿಂಗಪ್ಪನವರು ನನಗೇನು ಯಾವುದೇ ರೀತಿಯ ವೈಯಕ್ತಿಕ ಅನುಕೂಲ ಮಾಡಿ ಕೊಟ್ಟಿಲ್ಲ. ಆದರೆ ಚಿತ್ರದುರ್ಗ ನೆಲದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿರಲಿ ಮತ್ತು ಅವರ ಜೀವನ ಮುಂದಿನ ಪೀಳಿಗೆಗೂ ಗೊತ್ತಾಗಲಿ ಎಂಬ ಆಶಯದಿಂದ ಈ ಸ್ಮಾರಕ ನಿರ್ಮಾಣಕ್ಕೆ ಕೈ ಹಾಕಲಾಯಿತು ಎಂದರು.

    ಇದನ್ನೂ ಓದಿ: ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ | ಉಚಿತ ವಸತಿ, ಊಟ

    ನಿಜಲಿಂಗಪ್ಪನವರ ಬಗೆಗೆ ಈಗಿನ ಜನಪ್ರತಿನಿಧಿಗಳಿಗೆ ಎಷ್ಟು ಗೊತ್ತು? ಹಾಗಾಗಿ ಅಂಥವರ ಆದರ್ಶ ರಾಜಕೀಯ ಜೀವನದ ಅರಿವು ಇಂದಿನ ಮತ್ತು ಮುಂದಿನ ರಾಜಕಾರಣ ಗಳಿಗೆ ಸಿಗಲಿ ಎನ್ನುವ ಕಾರಣಕ್ಕೆ ಶಿವಶರಣ ಮಾದಾರಚೆನ್ನಯ್ಯ ಗುರುಪೀಠದ ಪಕ್ಕದ ಜಾಗದಲ್ಲಿ ಜನಪ್ರತಿನಿಧಿಗಳಿಗಾಗಿ ಒಂದು ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗುವುದು.

    ಅಲ್ಲಿ ತರಬೇತಿ ಹೊಂದಿದವರೆಲ್ಲರೂ ಆದರ್ಶ ನಡೆ-ನುಡಿಗಳಾಗಿರಬೇಕೆಂದೇನೂ ಇಲ್ಲ. ಒಂದು ಸಾವಿರದಲ್ಲಿ ಒಬ್ಬರಾದರೂ ಆ ರೀತಿಯ ನಡೆ ರೂಢಿಸಿಕೊಂಡರೆ ಸಾಕು ಸಾರ್ಥಕವಾಗಲಿದೆ ಎಂದರು.

    ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಮಾತನಾಡಿ, ಈಗಾಗಲೇ ಮುರುಘಾಮಠದಿಂದ ಸಾವಿರಾರು ಸಸಿ ನೆಟ್ಟಿದೆ. ಅದರ ನಿರಂತರತೆಗಾಗಿ ಈ ಪ್ರಯತ್ನ. ಲಕ್ಷ , ಸಾವಿರ, ಒಂದೇ ಗಿಡ ನೆಟ್ಟರು ಅದು ಉಳಿಯಬೇಕು ಮತ್ತು ಬೆಳೆಸಬೇಕು ಅಂತಹ ಸಂಕಲ್ಪ ಶ್ರೀ ಮಠದ್ದಾಗಿದೆ ಎಂದರು.

    ಇದನ್ನೂ ಓದಿ: NEP ವಿರೋಧಿ ಸರ್ಕಾರಕ್ಕೆ ಶಿಕ್ಷಕರು ಪಾಠ ಕಲಿಸಿ | MLC ಕೆ.ಎಸ್.ನವೀನ್

    ಈ ಸಂದರ್ಭದಲ್ಲಿ ಶಿವಶರಣ ಮಾದಾರಚೆನ್ನಯ್ಯ ಗುರುಪೀಠದ ಬಸಸಮೂರ್ತಿ ಮಾದರ ಚೆನ್ನಯ್ಯ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮಿಗಳು, ನಿಪ್ಪಾಣ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು, ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟಿನ ಧರ್ಮದರ್ಶಿ ಎಸ್. ಷಣ್ಮುಖಪ್ಪ, ಜಿ.ಪಂ. ಮಾಜಿ ಸದಸ್ಯ ನರಸಿಂಹರಾಜು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ-ಕಾಲೇಜುಗಳ ಮುಖ್ಯಸ್ಥರು, ಸಿಬ್ಬಂದಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.

    ಇದನ್ನೂ ಓದಿ: ಆರೋಗ್ಯ ಇಲಾಖೆ ಜಾಗೃತ ದಳದಿಂದ ಜಿಲ್ಲಾಸ್ಪತ್ರೆ ಭೇಟಿ | ಲಂಚ ಪಡೆಯುವ ವೈದ್ಯರು, ಸಿಬ್ಬಂದಿಗೆ ತರಾಟೆ | ಉತ್ತಮ ಕೆಲಸಕ್ಕೆ ಮೆಚ್ಚುಗೆ

    ಸಪ್ತಾಹದ ಐದನೇ ದಿನದ ಸಸಿ ನೆಡುವ ಕಾರ್ಯಕ್ರಮವು ಜೂನ್ 3 ಸೋಮವಾರ ಬೆಳಗ್ಗೆ 7 ಗಂಟೆಗೆ ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆ ಆವರಣ, ಎಸ್ ಜೆ ಎಂ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.

    Continue Reading
    You may also like...
    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top