ಮುಖ್ಯ ಸುದ್ದಿ
ಚಿತ್ರದುರ್ಗಕ್ಕೆ ಯೆಲ್ಲೊ ಅಲರ್ಟ್ | ಭಾರಿ ಮಳೆ ಸಾಧ್ಯತೆ

Published on
CHITRADURGA NEWS | 02 JUNE 2024
ಚಿತ್ರದುರ್ಗ: ಜಿಲ್ಲೆಯಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಸ್ಪಷ್ಟಪಡಿಸಿದ್ದು, ಈ ಹಿನ್ನೆಲೆಯಲ್ಲಿ ಯೆಲ್ಲೊ ಅಲರ್ಟ್ ಘೋಷಿಸಿದೆ.
ಶನಿವಾರ ರಾತ್ರಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆರಾಯ ಅಬ್ಬರಿಸಿದ್ದಾನೆ. ಚಿಕ್ಕಜಾಜೂರು, ಹೊಸದುರ್ಗ, ಹಿರಿಯೂರು, ಶ್ರೀರಾಂಪುರ, ಚಿತ್ರದುರ್ಗ ಭಾಗದಲ್ಲಿ ಕೆಲ ಕಾಲ ಮಳೆ ಸುರಿದು ಪುನಃ ಭರವಸೆ ಮೂಡಿಸಿದೆ.
ಕ್ಲಿಕ್ ಮಾಡಿ ಓದಿ: ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ | ಉಚಿತ ವಸತಿ, ಊಟ

ಜಿಲ್ಲೆಯಲ್ಲಿ ಗುಡುಗು ಹಾಗೂ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇನ್ನೆರಡು ದಿನ ಗರಿಷ್ಠ ತಾಪಮಾನವು 2ರಿಂದ 3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ. ಮುಂದಿನ ಒಂದು ವಾರ ಸಾಧಾರಣ ಮಳೆ ಸುರಿಯುವ ಸಂಭವವಿದೆ.ಕೇರಳ ಪ್ರವೇಶಿಸಿರುವ ನೈರುತ್ಯ ಮುಂಗಾರು, ಮುಂದಿನ 2–3 ದಿನಗಳಲ್ಲಿ ಕರ್ನಾಟಕಕ್ಕೆ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.
Continue Reading
Related Topics:chance, Kannada News, Meteorological Department, Rain, Yellow Alert, ಕನ್ನಡ ನ್ಯೂಸ್, ಮಳೆ, ಯೆಲ್ಲೊ ಅಲರ್ಟ್, ಸಾಧ್ಯತೆ, ಹವಾಮಾನ ಇಲಾಖೆ

Click to comment