ಮುಖ್ಯ ಸುದ್ದಿ
ಆರೋಗ್ಯ ಇಲಾಖೆ ಜಾಗೃತ ದಳದಿಂದ ಜಿಲ್ಲಾಸ್ಪತ್ರೆ ಭೇಟಿ | ಲಂಚ ಪಡೆಯುವ ವೈದ್ಯರು, ಸಿಬ್ಬಂದಿಗೆ ತರಾಟೆ | ಉತ್ತಮ ಕೆಲಸಕ್ಕೆ ಮೆಚ್ಚುಗೆ

CHITRADURGA NEWS | 01 JUNE 2024
ಚಿತ್ರದುರ್ಗ: ಆರೋಗ್ಯ ಇಲಾಖೆ ಜಾಗೃತ ದಳದ ಮುಖ್ಯ ಅಧಿಕಾರಿ ಕೆ.ಆರ್.ಶ್ರೀನಿವಾಸ್ ಅವರ ತಂಡ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಆಸ್ಪತ್ರೆಯ ಎಲ್ಲ ವಿಭಾಗಗಳು, ವಾರ್ಡ್‍ಗಳಿಗೆ ಭೇಟಿ ನೀಡಿ ಇಂಚಿಂಚು ಮಾಹಿತಿ ಪಡೆದು ತಪಾಸಣೆ ನಡೆಸಿದರು.

ಇದನ್ನೂ ಓದಿ: ಒಂದೇ ವರ್ಷಕ್ಕೆ ಸರ್ಕಾರಿ ಖಜಾನೆ ಲೂಟಿ | ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪ
ಈ ವೇಳೆ ಹೆರಿಗೆ ವಿಭಾಗದಲ್ಲಿ ಸಾಕಷ್ಟು ಜನ ರೋಗಿಗಳು ಹಾಗೂ ಅವರ ಸಂಬಂಧಿಕರು ವೈದ್ಯರು, ಶುಶ್ರೂಷಕರ ವಿರುದ್ಧ ಲಂಚದ ಆರೋಪ ಮಾಡಿದರು. ಇದರಿಂದ ಸಿಡಿಮಿಡಿಗೊಂಡ ಕೆ.ಆರ್.ಶ್ರೀನಿವಾಸ್ ಎಚ್ಚರಿಕೆ ನೀಡಿದರು.

ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ಶುಶ್ರೂಷಕರು ಲಂಚ ಪಡೆದಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದರೆ ಅಮಾನತು ಮಾಡಲಾಗುವುದು ಎಂದು ಖಡಕ್ ಸೂಚನೆ ನೀಡಿದರು.
ಇದನ್ನೂ ಓದಿ: ಶಿಕ್ಷಕರ ಪರವಾದ ತೀರ್ಮಾನ ತೆಗೆದುಕೊಳ್ಳಲು ಕಾಂಗ್ರೆಸ್ ಸರ್ಕಾರ ಬದ್ಧ | ಕೆಡಿಪಿ ಸದಸ್ಯ ಕೆ. ಸಿ. ನಾಗರಾಜ್
ಮೂವರ ವಿರುದ್ಧ ತನಿಖೆಗೆ ಸೂಚಿಸಿದ ಅವರು, ಮುಂದಿನ 15 ದಿನಗಳಲ್ಲಿ ಎಲ್ಲ ವ್ಯವಸ್ಥೆ ಸರಿಯಾಗಬೇಕು ಎಂದು ಎಚ್ಚರಿಕೆ ನೀಡಿ ತೆರಳಿದರು.

ಆರೋಗ್ಯ ಇಲಾಖೆ ಜಾಗೃತ ದಳದಿಂದ ಜಿಲ್ಲಾಸ್ಪತ್ರೆ ಭೇಟಿ
ಆಸ್ಪತ್ರೆಯ ಬಹುತೇಕ ವಾರ್ಡ್‍ಗಳಲ್ಲಿ ಶೌಚಗೃಹಗಳ ಅವ್ಯವಸ್ಥೆ ಕಂಡು ಸಿಡಿಮಿಡಿಗೊಂಡ ಕೆ.ಆರ್.ಶ್ರೀನಿವಾಸ್, ಕೆಲ ಶೌಚಾಲಯಗಳಲ್ಲಿ ಬಾಗಿಲು ಸರಿಯಾಗಿಲ್ಲದಿರುವುದು, ಜಗ್, ಬಕೇಟ್ ಕೂಡಾ ಇಲ್ಲದಿರುವುದನ್ನು ಕಂಡು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಅಶುಚಿತ್ವದಿಂದಲೂ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ಸ್ವಚ್ಛತೆಗೂ ಮೊದಲ ಆದ್ಯತೆ ನೀಡಿ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಅವರಿಗೆ ಸೂಚಿಸಿದರು.
ಇದನ್ನೂ ಓದಿ: ರೈತರೇ ಗಮನಿಸಿ | ಬೆಳೆವಿಮೆ ಯೋಜನೆಗೆ ಕಂತು ಕಟ್ಟುವ ಪ್ರಕ್ರಿಯೆ ಆರಂಭ | ಯಾವ ಬೆಳೆಗೆ ಎಷ್ಟು ಪರಿಹಾರ | ರೈತರ ಕಂತು ಎಷ್ಟು ?
ಕೆಲ ವಾರ್ಡ್‍ಗಳಲ್ಲಿ ಹಾಸಿಗೆ, ದಿಂಬು, ಬೆಡ್ ಶೀಟ್ಸ್‍ಗಳು ಕೂಡ ತುಂಬಾ ಹಳೆಯದಾಗಿವೆ. ಬಳಕೆಗೂ ಯೋಗ್ಯವಾಗಿಲ್ಲ. ಅದರ ಮೇಲೆ ರೋಗಿಗಳನ್ನು ಮಲಗಿಸಿ ಚಿಕಿತ್ಸೆ ನೀಡುವುದು ಸರಿಯಲ್ಲ. ಕೂಡಲೇ ಬದಲಿಸಿ ಎಂದು ತಾಕೀತು ಮಾಡಿದರು. ಈ ವೇಳೆ ಡಾ.ರವೀಂದ್ರ, ಹೊಸದಾಗಿ ಖರೀದಿಸಲಾಗಿದ್ದು, ಕೂಡಲೇ ಬದಲಿಸುವುದಾಗಿ ಪ್ರತಿಕ್ರಿಯಿಸಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಕೀಲು-ಮೂಳೆ ವಿಭಾಗ, ಫಿಜಿಷಿಯನ್, ಮಕ್ಕಳ ತಪಾಸಣಾ ಕೊಠಡಿ, ತುರ್ತು ಚಿಕಿತ್ಸಾ ವಿಭಾಗ, ರಕ್ತ ಪರೀಕ್ಷಾ ಕೇಂದ್ರ, ಮಕ್ಕಳ ವೈದ್ಯರ ಕುರಿತು ಯಾವುದೇ ದೂರುಗಳಿಲ್ಲ. ತುಂಬಾ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ಸೀರೆಯಲ್ಲಿ ಮಿಂಚಿದ ವಿದ್ಯಾರ್ಥಿನಿಯರು | ಎಸ್‍ಜೆಎಂ ಕಾಲೇಜಿನಲ್ಲಿ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ
ಆಸ್ಪತ್ರೆಯ ನವಜಾತ ಶಿಶು ವಿಭಾಗದಲ್ಲಿ ಕಡಿಮೆ ತೂಕದ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡುವ ಮಾಹಿತಿ ತಿಳಿದು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.
ಜಿಲ್ಲಾ ಆಸ್ಪತ್ರೆಯ ಬೆಡ್ ಸಾಮಥ್ರ್ಯಕ್ಕಿಂತ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ವೈದ್ಯರು, ನರ್ಸ್‍ಗಳ ಕೊರತೆಯಿದೆ. ಹೊರ ರೋಗಿಗಳ ವಿಭಾಗದಲ್ಲೂ ವ್ಯಾಪಕ ಸಮಸ್ಯೆ ಇದೆ. ಇದೆಲ್ಲದರ ನಡುವೆಯೂ ಇಲ್ಲಿನ ಸಿಬ್ಬಂದಿ ಹಾಗೂ ವೈದ್ಯರು ಶಕ್ತಿಮೀರಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
