Connect with us

    ಶಿಕ್ಷಕರ ಪರವಾದ ತೀರ್ಮಾನ ತೆಗೆದುಕೊಳ್ಳಲು ಕಾಂಗ್ರೆಸ್ ಸರ್ಕಾರ ಬದ್ಧ | ಕೆಡಿಪಿ ಸದಸ್ಯ ಕೆ. ಸಿ. ನಾಗರಾಜ್ 

    ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್ ಮತಯಾಚನೆ

    ಮುಖ್ಯ ಸುದ್ದಿ

    ಶಿಕ್ಷಕರ ಪರವಾದ ತೀರ್ಮಾನ ತೆಗೆದುಕೊಳ್ಳಲು ಕಾಂಗ್ರೆಸ್ ಸರ್ಕಾರ ಬದ್ಧ | ಕೆಡಿಪಿ ಸದಸ್ಯ ಕೆ. ಸಿ. ನಾಗರಾಜ್ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 01 JUNE 2024

    ಚಿತ್ರದುರ್ಗ: ಶಿಕ್ಷಕರ ಪರವಾದ ತೀರ್ಮಾನಗಳನ್ನೂ ತೆಗೆದುಕೊಳ್ಳಲು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬದ್ಧವಾಗಿರುತ್ತದೆ ಎಂದು ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್  ಹೇಳಿದರು.

    ಇದನ್ನೂ ಓದಿ: ರೈತರೇ ಗಮನಿಸಿ | ಬೆಳೆವಿಮೆ ಯೋಜನೆಗೆ ಕಂತು ಕಟ್ಟುವ ಪ್ರಕ್ರಿಯೆ ಆರಂಭ | ಯಾವ ಬೆಳೆಗೆ ಎಷ್ಟು ಪರಿಹಾರ | ರೈತರ ಕಂತು ಎಷ್ಟು ?

    ಜೂ.3 ರಂದು ನಡೆಯಲಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು,

    ವಿಧಾನಸಭೆ ಜೊತೆಗೆ ವಿಧಾನ ಪರಿಷತ್ ಸಹ ನಮ್ಮ ಬಹುಮತ ಬಂದರೆ ಕಾಯ್ದೆ ಕಾನೂನು ಜಾರಿ ಮಾಡಲು ಅನುಕೂಲವಾಗುತ್ತದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರು ಕ್ರಿಯಾಶೀಲ ವ್ಯಕ್ತಿಯಾಗಿದ್ದು ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುವುದರಲ್ಲಿ ಅನುಮಾನವಿಲ್ಲ, ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅನುಭವವಿದ್ದು, ಶಿಕ್ಷಕರ ಪರ ವಿಧಾನ ಪರಿಷತ್‌ನಲ್ಲಿ ಮಾತನಾಡಿ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಕೆಲಸ ಮಾಡುತ್ತಾರೆ ಎಂದರು.

    ಇದನ್ನೂ ಓದಿ: ನರೇಗಾ ಕೂಲಿಗಾರರಿಗೆ ಖುದ್ದು ಅರೋಗ್ಯ ತಪಾಸಣೆ ಮಾಡಿಸಿದ ಜಿ.ಪಂ ಸಿಇಒ

    ಗ್ಯಾರೆಂಟಿ ಸಮಿತಿಯ ಆದ್ಯಕ್ಷ ಜಯ್ಯಣ್ಣ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಉತ್ತಮ ಆಡಳಿತ ಮೂಲಕ ಜನರಿಗೆ ಕೊಟ್ಟ ಮಾತಿನಂತೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದಾರೆ. ಜನರು ನೆಮ್ಮದಿಯಿಂದ ಇದ್ದಾರೆ, ವಿಧಾನ ಪರಿಷತ್ ಆರು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮಹಿಳಾ ಘಟಕದ ಅಧ್ಯಕ್ಷೆ ನಂದಿನಿಗೌಡ ಮಾತನಾಡಿ, ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರಿಗೆ ನೀಡುವ ಮೂಲಕ, ವಿಧಾನ ಪರಿಷತ್‌ನಲ್ಲಿ ನಮ್ಮ ಬಲ ಹೆಚ್ಚಿಸಿದರೆ ಶಿಕ್ಷಕರ ಪರವಾಗಿ ಕೆಲಸ ಮಾಡಲು ಹೆಚ್ಚಿನ ಅನುಕೂಲವಾಗುತ್ತದೆ ಎಂದರು.

    ಇದನ್ನೂ ಓದಿ: ಲೋಕಸಭೆ ಚುನಾವಣೆ ಮತ ಎಣಿಕೆ ಕಾರ್ಯಕ್ಕೆ ದಿನಗಣನೆ | ಮಧ್ಯಾಹ್ನದೊಳಗೆ ಫಲಿತಾಂಶ ಘೋಷಣೆ ಸಾಧ್ಯತೆ

    ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ಲಕ್ಷೀಕಾಂತ, ಮುದಸಿರ್, ವೆಂಕಟೇಶ್, ಕುಮಾರಗೌಡ, ಮೋಕ್ಷಾ ರುದ್ರಸ್ವಾಮಿ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top