Connect with us

    ರೈತರೇ ಗಮನಿಸಿ | ಬೆಳೆವಿಮೆ ಯೋಜನೆಗೆ ಕಂತು ಕಟ್ಟುವ ಪ್ರಕ್ರಿಯೆ ಆರಂಭ | ಯಾವ ಬೆಳೆಗೆ ಎಷ್ಟು ಪರಿಹಾರ | ರೈತರ ಕಂತು ಎಷ್ಟು ?

    ಬೆಳೆವಿಮೆ

    ಮುಖ್ಯ ಸುದ್ದಿ

    ರೈತರೇ ಗಮನಿಸಿ | ಬೆಳೆವಿಮೆ ಯೋಜನೆಗೆ ಕಂತು ಕಟ್ಟುವ ಪ್ರಕ್ರಿಯೆ ಆರಂಭ | ಯಾವ ಬೆಳೆಗೆ ಎಷ್ಟು ಪರಿಹಾರ | ರೈತರ ಕಂತು ಎಷ್ಟು ?

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 01 JUNE 2024

    ಚಿತ್ರದುರ್ಗ: ಪ್ರಸಕ್ತ ವರ್ಷ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದು, ಈಗಾಗಲೇ ಜಮೀನು ಹದಗೊಳಿಸುವುದು, ಬಿತ್ತನೆ ಚಟುವಟಿಕೆಗಳು ಪ್ರಾರಂಭವಾಗಿವೆ.

    ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಕೂಡಾ ರೈತರಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಗೊಳಿಸಿದೆ.

    ಇದನ್ನೂ ಓದಿ: ಚಿತ್ರದುರ್ಗ ಕೃಷಿ ಇಲಾಖೆಗೆ ಪ್ರಶಸ್ತಿಗಳ ಸುರಿಮಳೆ | ಮಣ್ಣು ಪರೀಕ್ಷೆ, ಸಮಗ್ರ ಕೃಷಿ, ನರೇಗಾದಲ್ಲಿ ರಾಜ್ಯಮಟ್ಟದ ಪುರಸ್ಕಾರ

    ಹೆಸರು ಈರುಳ್ಳಿ ಬೆಳೆಗೆ ವಿಮೆ ತುಂಬಲು 2024 ಜುಲೈ 15 ಕೊನೆಯ ದಿನ, ಭತ್ತ ರಾಗಿ, ನವಣೆ ಬೆಳೆಗಳಿಗೆ 2024 ಆಗಸ್ಟ್ 16 ಕೊನೆಯ ದಿನವಾಗಿದೆ. ಉಳಿದ ಬೆಳೆಗಳಿಗೆ ಜುಲೈ 31 ಕೊನೆಯ ದಿನವಾಗಿದ್ದು, ಅಷ್ಟರೊಳಗಾಗಿ ರೈತರ ಕಂತು ಪಾವತಿಸಬೇಕು.

    ಎಲ್ಲಾ ಬೆಳೆಗಳಿಗೆ ವಿಮೆಗೆ ನೋಂದಾಯಿಸಲು ಅಧಿಸೂಚನೆ ಮಾಡಲಾಗಿದ್ದು, ರೈತರು ತಮ್ಮ ಹೋಬಳಿ ಮಟ್ಟದ ಬೆಳೆಯ ವಿವರವನ್ನು ಸಂಬಂಧಪಟ್ಟ ಕೃಷಿ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಲು ಕೋರಿದೆ.

    ಇದನ್ನೂ ಓದಿ: ಗೂಡ್ಸ್ ಟೆಂಪೊ – ಲಾರಿ ನಡುವೆ ಡಿಕ್ಕಿ ಇಬ್ಬರ ದುರ್ಮರಣ

    ಬೆಳೆ, ಬೆಳೆವಿಮೆ ಹಾಗೂ ಕಂತು ವಿವರ ಇಲ್ಲಿದೆ:

    ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿಯಲ್ಲಿ ಒಳಪಡಿಸಲಾಗುವುದು, ತದನಂತರ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡದೇ ಇದ್ದಲ್ಲಿ, ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು.

    ಆರ್ಥಿಕ ಸಂಸ್ಥೆಗಳು / ಬ್ಯಾಂಕ್ / ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ರೈತರನ್ನು ಬೆಳೆ ವಿಮೆಗೆ ನೋಂದಾಯಿಸಿದಾಗ ಬೆಳೆ ವಿಮೆ ಪ್ರಸ್ತಾವನೆಯನ್ನು ಹಾಗೂ ವಿಮಾ ಕಂತನ್ನು ನಿಗಧಿತ ಸಮಯದೊಳಗೆ ನಿಯಮಾನುಸಾರ ಅನುμÁ್ಠನ ವಿಮಾ ಸಂಸ್ಥೆಗಳಿಗೆ ವರ್ಗಾಯಿಸಲು ಕ್ರಮಕೈಗೊಳ್ಳತಕ್ಕದ್ದು.

    ಇದನ್ನೂ ಓದಿ: ರೈತರಿಗೆ ಶುಭಸುದ್ದಿ | ಕೃಷಿ ಹೊಂಡ, ಪಂಪ್‍ಸೆಟ್ ಖರೀಧಿಗೆ ಅನುಕೂಲ | ಕೃಷಿಭಾಗ್ಯ ಯೋಜನೆ ಮರುಜಾರಿ

    ನೋಂದಣಿ ಪ್ರಕ್ರಿಯೆಯ ಹಂತದಲ್ಲಿ ಮೇಲೆ ತಿಳಿಸಿದ ಸಂಸ್ಥೆಗಳ ನಿರ್ಲಕ್ಷದಿಂದ ಯಾವುದೇ ಲೋಪ ದೋಷಗಳು ಉಂಟಾದಲ್ಲಿ ಅದರಿಂಗಾಗುವ ಬೆಳೆ ವಿಮೆ ಪರಿಹಾರ ವ್ಯಾಜ್ಯಗಳಿಗೆ ಸಂಬಂಧಿಸಿದ ಸಂಸ್ಥೆಗಳೆ ನೇರ ಹೊಣೆಗಾರರಾಗಿರುತ್ತಾರೆ.

    ಆಸಕ್ತ ರೈತರು ತಮ್ಮ ವ್ಯಾಪ್ತಿಯ ಬ್ಯಾಂಕುಗಳಲ್ಲಿ ಹಾಗೂ ಅನುಮೋದಿತ ಸಾರ್ವಜನಿಕ ಸೇವಾ ಕೇಂದ್ರಗಳಲ್ಲೂ ವಿಮೆಗೆ ನೋಂದಣಿ ಮಾಡಬಹುದಾಗಿದೆ. ಚಿತ್ರದುರ್ಗ ಜಿಲ್ಲೆಗೆ AGRICULTURE INSURENCE COMPANY OF INDIA ಸಂಸ್ಥೆಯಾಗಿರುತ್ತದೆ. ರೈತರು FRUITS (FID)  ಪಾವತಿಸಬೇಕು.

    ಇದನ್ನೂ ಓದಿ: ಬಂದೇ ಬಿಡ್ತು ಬಯಲು ಸೀಮೆಲಿ ಬೆಳೆಯುವ ಭತ್ತದ ತಳಿ | ಸಿರಿಗೆರೆಯಲ್ಲಿ ಯಶಸ್ವಿ ಪ್ರಯೋಗ

    ಆಸಕ್ತ ರೈತ ಬಾಂದವರು ನಿಗಧಿತ ದಿನಾಂಕದೊಳಗೆ ಬೆಳೆ ವಿಮೆಗೆ ನೋಂದಾವಣೆ ಮಾಡಲು ವಿನಂತಿಸಿದೆ. ಅಂತಿಮ ಸಮಯದಲ್ಲಿ ಜನದಟ್ಟಣೆಯಿಂದಾಗಿ ನೋಂದಾಣಿಯಲ್ಲಿ ತಪ್ಪುಗಳು ಸಂಭವಿಸಿ, ವಿಮೆ ಪರಿಹಾರ ಬಾರದಿರುವ ಸಂಭವವಿರುತ್ತದೆ. ಇದಕ್ಕೆ ಅವಕಾಶ ಕೊಡದೇ ಸಕಾಲದಲ್ಲಿ ನೋಂದಾವಣೆ ಮಾಡಲು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top