
CHITRADURGA NEWS | 03 JUNE 2024
ಚಿತ್ರದುರ್ಗ: ಖುರಾನ್ ಓದಲು ಮಸೀದಿಗೆ ಹೋಗುತ್ತಿದ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಮಸೀದಿಯ ಮೌಲ್ವಿಯನ್ನು ಚಿತ್ರದುರ್ಗದ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ರಹೆಮಾನ್ ಬಂಧಿತ ಮೌಲ್ವಿ.
ಮೂರು ವರ್ಷದಿಂದ ಖುರಾನ್ ಓದಲು ಬಾಲಕಿ ಮಸೀದಿಗೆ ಹೋಗುತ್ತಿದ್ದಳು. ಈ ವೇಳೆ ಬಾಲಕಿಗೆ ದೆವ್ವ ಹಿಡಿದಿದೆ, ಮನೆಯಲ್ಲೇ ಪರಿಹಾರ ಪೂಜೆ ಮಾಡಬೇಕು ಎಂದು ಮೌಲ್ವಿ ಹೇಳಿದ್ದನು. ಇದನ್ನು ನಂಬಿದ ಬಾಲಕಿ ಕುಟುಂಬದವರು ಪೂಜೆಗೆ ಅನುಮತಿ ನೀಡಿದರು.
ಪೂಜೆ ಮಾಡುವ ನೆಪದಲ್ಲಿ ಮೌಲ್ವಿ 6ರಿಂದ 7 ತಿಂಗಳುಗಳ ಕಾಲ ವಾರಕೊಮ್ಮೆ ಬಾಲಕಿ ಮನೆಗೆ ಹೋಗಿದ್ದಾನೆ. ಮನೆಗೆ ಹೋದಾಗ ಬಾಲಕಿ ಮತ್ತು ಆಕೆಯ ಸಹೋದರನನ್ನು ಕೋಣೆಯೊಳಗೆ ಕರೆದೊಯ್ಯುತ್ತಿದ್ದನು. ಬಾಲಕಿ ತಾಯಿಯನ್ನು ಕೋಣೆಯ ಹೊರಗೆ ಇರುವಂತೆ ಹೇಳುತ್ತಿದ್ದನು.
ಕ್ಲಿಕ್ ಮಾಡಿ ಓದಿ: ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ | ಉಚಿತ ವಸತಿ, ಊಟ
ಕೋಣೆಯಲ್ಲಿ ಇಬ್ಬರನ್ನು ಕೂರಿಸಿ ನಿನ್ನ ಸಹೋದರಿಗೆ ದೆವ್ವ ಮೆಟ್ಟಿದೆ, ದೈಹಿಕ ಸುಖ ಕೊಟ್ಟರೆ ಶಾಂತಿ ಸಿಗುತ್ತದೆ ಎಂದು ಬಲವಾಗಿ ನಂಬಿಸಿದ್ದನು. ಮೌಲ್ವಿಯ ಪ್ರೇರಣೆಯಂತೆ ಸಹೋದರ ಸಹೋದರಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡ ಮೌಲ್ವಿ, ಬಳಿಕ ತಾನೂ ಬಾಲಕಿ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗಿದ್ದಾನೆ.
ಪೂಜೆ ನೆಪದಲ್ಲಿ 6 ರಿಂದ 7 ತಿಂಗಳು ಕಾಲ ಮೌಲ್ವಿ ಬಾಲಕಿಯನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಒಂದು ದಿನ ಬಾಲಕಿ ಹೊಟ್ಟೆ ನೋವು ಎಂದಾಗ ಪೋಷಕರು ಆಸ್ಪತ್ರೆಗೆ ದಾಖಲಿಸಿದಾಗ ಲೈಂಗಿಕ ದೌರ್ಜನ್ಯದ ಪ್ರಕರಣ ಬಯಲಾಗಿದೆ.
ಸಂತ್ರಸ್ತೆಯ ತಾಯಿ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ಮೌಲ್ವಿ, ಸಂತ್ರಸ್ತೆಯ ಸಹೋದರನ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಮೌಲ್ವಿ ಅಬ್ದುಲ್ ರಹೆಮಾನ್ ಹಾಗೂ ಬಾಲಕಿಯ ಸಹೋದರನನ್ನು ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
