Connect with us

    Krishna Janmashtami; ಶ್ರೀ ಕೃಷ್ಣ ವೃತ್ತದಲ್ಲಿ ಕೃಷ್ಣ ಜನ್ಮಾಷ್ಠಮಿ‌ ಆಚರಣೆ | ಯಾದವಾನಂದ‌ ಶ್ರೀ‌ ಭಾಗೀ

    ಅಖಿಲ ಭಾರತ ಯಾದವ ಗುರುಪೀಠದ ಕೃಷ್ಣಯಾದವನಂದ ಸ್ವಾಮೀಜಿ ಅವರು ನಗರದ ಹೊಳಲ್ಕೆರೆ ರಸ್ತೆಯ ಶ್ರೀ ಕೃಷ್ಣ ಸರ್ಕಲ್‌ನಲ್ಲಿ ಶ್ರೀಕೃಷ್ಣರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು

    ಮುಖ್ಯ ಸುದ್ದಿ

    Krishna Janmashtami; ಶ್ರೀ ಕೃಷ್ಣ ವೃತ್ತದಲ್ಲಿ ಕೃಷ್ಣ ಜನ್ಮಾಷ್ಠಮಿ‌ ಆಚರಣೆ | ಯಾದವಾನಂದ‌ ಶ್ರೀ‌ ಭಾಗೀ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 26 AUGUST 2024

    ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯ ಶ್ರೀ ಕೃಷ್ಣ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಶ್ರೀಕೃಷ್ಣ ಜಯಂತಿ(Krishna Janmashtami) ಆಚರಣೆ ಮಾಡಲಾಯಿತು.

    ಕ್ಲಿಕ್ ಮಾಡಿ ಓದಿ: City Council: ನಗರಸಭೆಯಲ್ಲಿ ಶಾಸಕ ವೀರೇಂದ್ರ ಪಪ್ಪಿ ಮೇಲುಗೈ | ಬಹುಮತವಿದ್ದು ಸೋತ ಬಿಜೆಪಿ | ಪಕ್ಷೇತರ ಸದಸ್ಯೆಗೆ ಒಲಿದ ಅಧ್ಯಕ್ಷ ಗಾದಿ

    ಚಿತ್ರದುರ್ಗದ ಅಖಿಲ ಭಾರತ ಯಾದವ ಗುರುಪೀಠದ ಕೃಷ್ಣಯಾದವನಂದ ಸ್ವಾಮೀಜಿ ಅವರು ನಗರದ ಹೊಳಲ್ಕೆರೆ ರಸ್ತೆಯ ಶ್ರೀ ಕೃಷ್ಣ ಸರ್ಕಲ್‌ನಲ್ಲಿ ಶ್ರೀ ಕೃಷ್ಣರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.

    ಈ ವೇಳೆ ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಪರಮೇಶ್ವರಪ್ಪ ಮಾತನಾಡಿ, ವ್ಯಾಸ ಭಾರತದಲ್ಲಿ ಭೀಷ್ಮನು ಸರ್ವ ಶಾಸ್ತ್ರ ಮಹೀ ಗೀತಾ ಎಂದು ಹೇಳಿದ್ದಾರೆ. ಅಂದರೆ ಪ್ರಪಂಚದ ಎಲ್ಲ ತತ್ವಗಳು ಶ್ರೀಕೃಷ್ಣನ ಭಗವದ್ಗೀತೆಯಲ್ಲಿವೆ ಎಂದು ಹೇಳಿರುವ ಭೀಷ್ಮನ ಮಾತು ಬಹಳ ಪ್ರಸಿದ್ಧವಾದದ್ದು ಎಂದು ಹೇಳಿದರು.

    ಶ್ರೀಕೃಷ್ಣನ ಭಗವದ್ಗೀತೆ ಬದಲಾವಣೆ, ರೂಪಾಂತರ ಪಡೆಯದೇ ಯಥಾವತ್ತಾಗಿ ಉಳಿದಿದ್ದು, ಭಗವದ್ಗೀತೆ ಬಹಳ ಶ್ರೇಷ್ಠವಾಗಿ ಜಗತ್ತಿನಲ್ಲಿ ರಾರಾಜಿಸುತ್ತಿದೆ ಎಂದು ಹೇಳಿದರು.

    ಕ್ಲಿಕ್ ಮಾಡಿ ಓದಿ: Pomegranate crop: ಜಿಲ್ಲೆಯ ರೈತರಿಗೆ ಸಂತಸದ ಸುದ್ದಿ | 10 ಸಾವಿರ ಎಕರೆಯಲ್ಲಿ ದಾಳಿಂಬೆ ಬೆಳೆ ವಿಸ್ತರಣೆ ಗುರಿ

    ಕೃಷ್ಣ ಜನ್ಮಾಷ್ಟಮಿ ನೆನೆಸಿಕೊಂಡರೆ ಬಹುಶಃ ಪ್ರತಿಯೊಬ್ಬರಿಗೂ ಆನಂದ ಉಂಟು ಮಾಡುವ ಸಂದರ್ಭವಾಗಿದೆ.  ಶ್ರೀ ಕೃಷ್ಣ ಚರಿತ್ರೆ ಬಾಲ್ಯ, ಯೌವ್ವನ ಹಾಗೂ ಸನ್ಯಾಸತ್ವ ಸೇರಿದಂತೆ ಒಟ್ಟು ಮೂರು ಹಂತದಲ್ಲಿ ಬರುತ್ತದೆ. ಋಷಿ ಮುನಿಗಳ ಪ್ರಕಾರ ಒಬ್ಬ ಮನುಷ್ಯ ಮಹಾತ್ಮನಾಗಬೇಕಾದರೆ, ದೇವಾತ್ಮನಾಗಬೇಕಾದರೆ ಆರು ಗುಣಗಳಿರಬೇಕು. ಶ್ರೀಮಂತಿಕೆ, ಅಧಿಕಾರ, ಕೀರ್ತಿವಂತ, ಸೌಂದರ್ಯ, ದಾನಿ ಹಾಗೂ ತ್ಯಾಗಿಯಾಗಿರಬೇಕು. ಈ ಎಲ್ಲ ಗುಣಗಳು ಶ್ರೀಕೃಷ್ಣನಿಗೆ ಇದ್ದವು. ಹಾಗಾಗಿ ಕೃಷ್ಣನು ದೇವ ಪುರುಷ, ದೇವಾತ್ಮನಾದ ಎಂದು ಹೇಳಿದರು.

    ಮೊಟ್ಟ ಮೊದಲಿಗೆ ಶ್ರೀಕೃಷ್ಣನ ಕಥೆಯನ್ನು ಹೇಳಿದವರು ಕನ್ನಡದ ಕವಿ ಪಂಪ. ತನ್ನ ಕಾವ್ಯದಲ್ಲಿ ಶ್ರೀಕೃಷ್ಣನ ಪಾತ್ರವನ್ನು ರಾಜಕೀಯ ಮುತ್ಸದ್ದಿಯಾಗಿ ಚಿತ್ರಣ ಮಾಡಿದ್ದಾನೆ. ಕುಮಾರವ್ಯಾಸ ಕವಿಯು ಕೃಷ್ಣನನ್ನು ಭಕ್ತನನ್ನಾಗಿ ಬಿಂಬಿಸಿರುವುದನ್ನು ಕಾಣಬಹುದಾಗಿದೆ. ಪಂಪ ಕವಿ ಅರ್ಜುನನ್ನು ಕಥಾ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡರೆ, ಕುಮಾರವ್ಯಾಸ, ಕೃಷ್ಣನನ್ನು ತನ್ನ ಕಾವ್ಯದ ಕಥಾ ನಾಯಕನನ್ನಾಗಿ ಮಾಡಿಕೊಂಡಿದ್ದಾನೆ ಎಂದು ಹೇಳಿದರು.

    ಮಹನೀಯರ ಆದರ್ಶಗಳನ್ನು ಜನರಿಗೆ ಮುಟ್ಟಿಸುವ ಸದುದ್ದೇಶದಿಂದ ಸರ್ಕಾರ ಮಹಾತ್ಮರ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ. ಮಹನೀಯರ ತತ್ವಾದರ್ಶಗಳ ಪಾಲನೆ ಮೂಲಕ ಸಮಾಜದ ಮಲಿನತೆಯನ್ನು ಸರಿ ಮಾಡುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

    ಕ್ಲಿಕ್ ಮಾಡಿ ಓದಿ: Jail: ಜೈಲಿನಲ್ಲಿ ದರ್ಶನ್ ಬಿಂದಾಸ್ ಲೈಫ್ ಪೋಟೋ ವೈರಲ್ | ರೇಣುಕಸ್ವಾಮಿ ತಂದೆ ಕಣ್ಣೀರು

    ಚಿತ್ರದುರ್ಗದ ಗ್ರೇಡ್-2 ತಹಶೀಲ್ದಾರ್ ನಾಗರಾಜ್ ಮಾತನಾಡಿ, ಸಮಾಜ, ದೇಶ ಹಾಗೂ ವಿಶ್ವಕ್ಕೆ ದಾರಿತೋರಿಸುವ ನಿಟ್ಟಿನಲ್ಲಿ ಶ್ರೀಕೃಷ್ಣ ಕೊಡುಗೆ ಅಪಾರ. ಶ್ರೀಕೃಷ್ಣನು ಭಗವದ್ಗೀತೆಯ ಮೂಲಕ ನೀಡಿದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಧರ್ಮ ಸ್ಥಾಪನೆಗಾಗಿ ಜನಿಸಿದ ಶ್ರೀಕೃಷ್ಣನ ಭಗವದ್ಗೀತೆ ಪ್ರತಿಯೊಬ್ಬರೂ ಓದಬೇಕು ಹಾಗೂ ಕೃಷ್ಣನ ಗೀತೋಪದೇಶಗಳನ್ನು ನಾವೆಲ್ಲರೂ ಪಾಲಿಸುತ್ತಾ ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸೋಣ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಯಾದವ ಸಂಘದ ಕಾರ್ಯದರ್ಶಿ ಬಿ.ಆನಂದ, ಯಾದವ ಸಮಾಜದ ಮುಖಂಡರಾದ ಕದಿರಣ್ಣ, ಜಾಲಿಕಟ್ಟೆ ಜಗಣ್ಣ, ಗರಡಿ ತಿಮ್ಮಣ್ಣ, ಕೃಷ್ಣಪ್ಪ ಸೇರಿದಂತೆ ಮತ್ತಿತರರು ಇದ್ದರು. ಚಿತ್ರದುರ್ಗ ತಾಲ್ಲೂಕು ಆಯಿತೋಳು ಮಾರುತೇಶ್ ಮತ್ತು ತಂಡದಿಂದ ಗೀತ ಗಾಯನ ನಡೆಸಿಕೊಟ್ಟರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top