ಮುಖ್ಯ ಸುದ್ದಿ
Jail: ಜೈಲಿನಲ್ಲಿ ದರ್ಶನ್ ಬಿಂದಾಸ್ ಲೈಫ್ ಪೋಟೋ ವೈರಲ್ | ರೇಣುಕಸ್ವಾಮಿ ತಂದೆ ಕಣ್ಣೀರು

CHITRADURGA NEWS | 25 AUGUST 2024
ಚಿತ್ರದುರ್ಗ: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು(Jail) ಸೇರಿರುವ ನಟ ದರ್ಶನ್, ಜೈಲಿನಲ್ಲಿ ಸಹಚರರ ಜೊತೆಗೆ ಕಾಫಿ ಮಗ್ ಹಾಗೂ ಸಿಗರೇಟ್ ಹಿಡಿದು ಹರಟೆ ಹೊಡೆಯುತ್ತಾ ಕುಳಿತಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ರೇಣುಕಸ್ವಾಮಿ ತಂದೆ ಶಿವನಗೌಡರು ಕಣ್ಣಿರಿಟ್ಟು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮಗನನ್ನು ಕಳೆದುಕೊಂಡು ದಿನದಿಂದ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೇವೆ. ನಮ್ಮ ಸೊಸೆ ಮುಖ ನೋಡಿದಾಗ ಸಂಕಟ ಆಗುತ್ತೆ. ಇಂತಹ ಹೊತ್ತಿನಲ್ಲಿ ಈ ಪೋಟೋ ನೋಡಿದಾಗ ಹೊಟ್ಟೆ ಉರಿಯುತ್ತಿದೆ. ತಪ್ಪು ಮಾಡಿರುವ ಭಾವನೆಯೇ ಇಲ್ಲದಂತೆ ಕುಳಿತಿದ್ದಾರೆ. ಇದನ್ನೆಲ್ಲಾ ನೋಡಿದಾಗ ಸಿಬಿಐ ತನಿಖೆ ಅನಿವಾರ್ಯ ಅನ್ನಿಸುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಶರಣ ಸಂಸ್ಕøತಿ ಉತ್ಸವಕ್ಕೆ ಯಾರು ಎಷ್ಟು ವಾಗ್ದಾನ ಮಾಡಿದ್ರು..?
ಈ ಪೋಟೋ ನೋಡಿ ನಮಗೆ ಶಾಕ್ ಆಗಿದೆ ಎಂದಿದ್ದಾರೆ. ಆತನ ಮುಖದಲ್ಲಿ ತಪ್ಪು ಮಾಡಿದ್ದೇನೆ ಎನ್ನುವ ಭಾವನೆಯೇ ಇಲ್ಲದಂತೆ ಕಾಣಿಸುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥತರಿಗೆ ಶಿಕ್ಷೆ ಕೊಡಿಸಬೇಕು ಎಂದರು.
ಸರ್ಕಾರ, ಪೊಲೀಸರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಆದರೆ, ಎಲ್ಲಿ ತಪ್ಪಾಗಿದೆ ಎನ್ನುವುದು ಗೊತ್ತಾಗಬೇಕು. ಮಾಧ್ಯಮಗಳು ಎಲ್ಲವನ್ನೂ ಬಯಲಿಗೆ ತರುತ್ತಿವೆ. ನಿಮಗೆಲ್ಲಾ ಧನ್ಯವಾದ ಹೇಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಶರಣ ಸಂಸ್ಕøತಿ ಉತ್ಸವ ಸಮಿತಿ ಗೌರವಾಧ್ಯಕ್ಷರಾಗಿ ರುದ್ರೇಶ್ವರ ಸ್ವಾಮೀಜಿ, ಅಧ್ಯಕ್ಷರಾಗಿ ಕೆ.ಸಿ.ವೀರೇಂದ್ರ(ಪಪ್ಪಿ)
ಇಲ್ಲೀವರೆಗೆ ಮನೆ ಊಟ ಕೇಳಿದಾಗ ಕೊಟ್ಟಿಲ್ಲ. ಎಲ್ಲವನ್ನೂ ಶಿಸ್ತಿನಿಂದಲೇ ನಿಭಾಯಿಸಿದ್ದಾರೆ. ಈಗ ಜೈಲಿನ ಒಳಗೆ ರೆಸ್ಟಾರೆಂಟ್‍ನಲ್ಲಿ ಕುಳಿತಂತೆ ಕುಳಿತಿರುವುದನನು ನೋಡಿ ನಿಜಕ್ಕೂ ನಮಗೆ ಶಾಕ್ ಆಗಿದೆ. ಜೈಲು ಜೈಲಾಗಿರಬೇಕೆ ವಿನಾ ಮತ್ತೊಂದು ಆಗಬಾರದು. ಎಲ್ಲ ಸಾಮಾನ್ಯ ಖೈದಿಗೆ ಹೇಗೆ ವ್ಯವಸ್ಥೆ ಇರುತ್ತೋ ಹಾಗೆಯೇ ಇರಬೇಕು. ನಾಲ್ಕು ಜನ ಕಾಫಿ ಕಪ್ ಹಿಡಿದು ಸಿಗರೇಟ್ ಹಿಡಿದು ಕುಳಿತಿದ್ದಾರೆ. ಇದು ಅತಿಥಿ ಗೃಹವೋ ರೆಸಾರ್ಟೊ ಎನ್ನುವ ಅನುಮಾನ ಬರುವಂತಾಗಿದೆ ಎಂದು ಹೇಳಿದರು.
ರೇಣುಕಸ್ವಾಮಿ ಸಂಬಧಿಗಳಾದ ನಿವೃತ್ತ ಪ್ರಾಚಾರ್ಯ ಷಡಾಕ್ಷರಯ್ಯ ಮಾತನಾಡಿ, ಕೊಲೆಯಾದ ನಮ್ಮ ರೇಣುಕಸ್ವಾಮಿಗೆ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಈ ಪೋಟೋ ನಿಜವೇ ಆಗಿದ್ದರೆ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕು ಎನ್ನುವುದು ನಮ್ಮ ಆಗ್ರಹ. ಕಾನೂನು ಸಾಮಾನ್ಯರಿಗೂ, ಸೆಲೆಬ್ರೆಟಿ ಎಲ್ಲರಿಗೂ ಒಂದೇ ಆಗಿದೆ ಎನ್ನುವುದು ನಮ್ಮ ನಂಬಿಕೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಪೊಲೀಸ್ ಇಲಾಖೆಯಿಂದ ಅಡಿಕೆ ಬೆಳೆಗಾರರಿಗೆ ಮಹತ್ವದ ಸೂಚನೆ
ಈವರೆಗೆ ರೇಣುಕಸ್ವಾಮಿ ಕೊಲೆ ವಿಚಾರದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿದೆ. ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆದಿದೆ ಎನ್ನುವ ನಂಬಿಕೆ ಇತ್ತು. ಆದರೆ, ಇಂದು ಪೋಟೋ ನೋಡಿದಾಗ ಶಾಕ್ ಆಗಿದೆ. ಈ ಕ್ಷಣಕ್ಕೂ ಸರ್ಕಾರ, ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಂಬಿಕೆ ಇದೆ ಎಂದು ಹೇಳಿದರು.
