CHITRADURGA NEWS | 12 FEBRUARY 2026
ಚಿತ್ರದುರ್ಗ: ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ಈ ಬಾರಿ ಅಧ್ಯಾತ್ಮ ಕಾಶಿಯಾಗಿ ಬದಲಾಗಲಿದೆ. ಮಹಾಶಿವರಾತ್ರಿಯ ಪುಣ್ಯ ಪರ್ವದ ಅಂಗವಾಗಿ ನಗರದಲ್ಲಿ ವಿಶ್ವೇಶ್ವರನ ದರ್ಶನ ಮಾಡಿಸುವ ನಿಟ್ಟಿನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಭವ್ಯ “ಕಾಶಿ ವಿಶ್ವನಾಥ” ದರ್ಶನ ಮತ್ತು ಪ್ರದರ್ಶನವನ್ನು ಆಯೋಜಿಸಿದೆ ಎಂದು ಸಂಸ್ಥೆಯ ರಾಜಯೋಗ ಶಿಕ್ಷಕಿ ಬ್ರಹ್ಮಕುಮಾರಿ ಶಿವರಶ್ಮಿ ಅಕ್ಕ ತಿಳಿಸಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 12 | ಹತ್ತಿ ರೇಟ್ ಎಷ್ಟಿದೆ?
ನಗರದ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ಫೆಬ್ರವರಿ 14 ರಿಂದ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಜರುಗಲಿವೆ.
90 ಕಾರುಗಳಲ್ಲಿ ಜ್ಯೋತಿರ್ಲಿಂಗಗಳ ಮೆರವಣಿಗೆ:
ಈಶ್ವರೀಯ ವಿಶ್ವವಿದ್ಯಾಲಯ ಸ್ಥಾಪನೆಯಾಗಿ 90 ವರ್ಷ ಪೂರ್ಣಗೊಂಡ ಸಂಭ್ರಮದಲ್ಲಿದ್ದು, ಇದರ ನೆನಪಿಗಾಗಿ ಫೆಬ್ರವರಿ 15ರಂದು ಬೆಳಗ್ಗೆ 10 ಗಂಟೆಗೆ ನಗರದ ಪ್ರಮುಖ ರಸ್ತೆಗಳಲ್ಲಿ 90 ಕಾರುಗಳ ಮೇಲೆ 90 ಜ್ಯೋತಿರ್ಲಿಂಗಗಳ ಅದ್ಧೂರಿ ಮೆರವಣಿಗೆ (ಸದ್ಭಾವನಾ ಯಾತ್ರೆ) ನಡೆಯಲಿದೆ. 90 ದಂಪತಿಗಳು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ನೂರಾರು ಬ್ರಹ್ಮಕುಮಾರ-ಕುಮಾರಿಯರು ಈ ಯಾತ್ರೆಯಲ್ಲಿ ಪಾಲ್ಗೊಂಡು ಶಿವನ ಸಂದೇಶವನ್ನು ಸಾರಲಿದ್ದಾರೆ.
ಚಿತ್ರದುರ್ಗದಲ್ಲಿ ‘ಕಾಶಿ ಕಾರಿಡಾರ್’ ಮಾದರಿ:
ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯಾದ ವಾರಣಾಸಿಯ ‘ಕಾಶಿ ಕಾರಿಡಾರ್’ ಮಾದರಿಯನ್ನೇ ಹೋಲುವ ಪ್ರದರ್ಶನ ಇಲ್ಲಿನ ವಿಶೇಷ. ಕರ್ನಾಟಕದ ಹೆಮ್ಮೆಯ ಐಎಎಸ್ ಅಧಿಕಾರಿ ನಿತಿನ್ ರಮೇಶ್ ಅವರು ವಿನ್ಯಾಸಗೊಳಿಸಿದ ಕಾಶಿ ಕಾರಿಡಾರ್‌ನ ನೀಲಿನಕ್ಷೆಯಂತೆಯೇ ಈ ಪ್ರದರ್ಶನವನ್ನು ರೂಪಿಸಲಾಗಿದೆ.
ವಿಶೇಷ ಆಕರ್ಷಣೆ:
30 ಅಡಿ ಎತ್ತರದ ಭವ್ಯ ಪ್ರವೇಶದ್ವಾರ, ಕಾಶಿ ಮಂದಿರದ ಗರ್ಭಗುಡಿಯ ದರ್ಶನ, ಸಹಸ್ರ ಅಗ್ನಿಲಿಂಗ, ಜಲಧಾರ ಗುಹೇಶ್ವರ ಲಿಂಗ ಮತ್ತು ಪಾತಾಳೇಶ್ವರ ಲಿಂಗಗಳ ದರ್ಶನ ಭಕ್ತರಿಗೆ ಲಭ್ಯವಾಗಲಿದೆ.
ಫೆ. 14 ಸ್ವ-ರಕ್ಷಣೆ, ಪ್ರಕೃತಿ ರಕ್ಷಣೆ ಕುರಿತು ಉಪನ್ಯಾಸ ನಡೆಯಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಡಿಎಫ್‌ಒ ಗೋಪ್ಯನಾಯಕ್ ಭಾಗವಹಿಸುವರು.
ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಫೆ.15 ರಂದುವ ಕಾಯಕವೇ ಕೈಲಾಸ ಕಾರ್ಯಕ್ರಮ ನಡೆಯಲಿದ್ದು, ಎಂಎಲ್ಸಿ ಕೆ.ಎಸ್. ನವೀನ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಭಾಗವಹಿಸುವರು.
ಫೆ. 16 ರಂದು ಮಹಿಳಾ ಸವಾಲುಗಳು ಕುರಿತು ಚಿಂತನೆ ನಡೆಯಲಿದ್ದು, ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಬಿ ಭಾಗವಹಿಸುವರು ಎಂದು ತಿಳಿಸಿದ್ದಾರೆ.



________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
