CHITRADURGA NEWS | 18 NOVEMBER 2024
ಚಿತ್ರದುರ್ಗ: ಯಾರು ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ ಸಮಾಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿ, ಆದರ್ಶ ಪಥದ ದರ್ಶನ ಮಾಡಿಸಿದ ದಾರ್ಶನಿಕರನ್ನು ಆಯಾ ಜಾತಿ ವ್ಯವಸ್ಥೆಗೆ ಕಟ್ಟಿ ಹಾಕುತ್ತಿರುವುದು ಆದರ್ಶ ಸಮಾಜ ನಿರ್ಮಾತೃಗಳಿಗೆ ಮಾಡುತ್ತಿರುವ ಘೋರ ಅನ್ಯಾಯ ಎಂದು ಮುರುಘಾ ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ(Basavakumar Swamiji) ವಿಷಾಧ ವ್ಯಕ್ತಪಡಿಸಿದರು.

ಕ್ಲಿಕ್ ಮಾಡಿ ಓದಿ: ನಿರುದ್ಯೋಗಿಗಳಿಗೆ GOOD NEWS | ನ.21 ರಂದು ನೇರ ನೇಮಕಾತಿ ಸಂದರ್ಶನ
ಮುರುಘಾ ಮಠದ ಶ್ರೀ ಮುರುಗಿ ಶಾಂತವೀರ ಸ್ವಾಮೀಜಿ ಲೀಲಾ ವಿಶ್ರಾಂತಿ ಧಾಮದ ಎದುರಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಾಸ -ಸಂತ ಶ್ರೇಷ್ಠ ಕನಕದಾಸರ ಜಯಂತಿಯಲ್ಲಿ ಮಾತನಾಡಿದರು.
ವಿಶ್ವ ಸಂತರನ್ನ, ದಾರ್ಶನಿಕರನ್ನ ವಿಶ್ವವಿಭೂತಿ ಪುರುಷರನ್ನ ಒಂದೊ0ದು ಜಾತಿಗೆ ಹಣೆ ಪಟ್ಟಿ ಕಟ್ಟುತ್ತಾ ಹೋದರೆ ಹೇಗೆ ಎಂದು ಪ್ರಶ್ನಿಸಿದ ಶ್ರೀಗಳು ಅದರಿಂದ ಅವರನ್ನು ಹೊರತರದ ಹೊರತು ಸಮಗ್ರ ಸಮಾಜದ ಬೆಳವಣಿಗೆಗೆ ಕಂಟಕಪ್ರಾಯ. ವ್ಯವಸ್ಥೆ ಕಟ್ಟಲಿಕ್ಕೆ, ಸಂಘಟನೆ ದೃಷ್ಟಿಯಿಂದ ನಾವು ಮಹಾತ್ಮರನ್ನ ಜಾತಿಗೆ ಸೀಮಿತ ಮಾಡಬಾರದು.
ಅವರ ತತ್ತ್ವಾದರ್ಶಗಳನ್ನು ಸಾರುವುದರೊಂದಿಗೆ ಅವರ ಕನಸುಗಳನ್ನು ನನಸು ಮಾಡಬೇಕಾಗಿದೆ ಮತ್ತು ಜಾತಿ ಸಂಕೋಲೆಯಿಂದ ಬಿಡುಗಡೆಗೊಳಿಸಬೇಕಾದ ಅನಿವಾರ್ಯವೂ ಬಂದೊದಗಿದೆ ಎಂದರು.
ಕ್ಲಿಕ್ ಮಾಡಿ ಓದಿ: ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ | ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ
ವಚನ ಸಾಹಿತ್ಯದ ನಂತರ ದಾಸ ಸಾಹಿತ್ಯ ಸಮಾಜದ ಸಾಮರಸ್ಯಕ್ಕೋಸ್ಕರವಾಗಿ ಶ್ರಮಿಸಿದೆ. ಕನಕ-ಪುರಂದರ ಕೀರ್ತನೆಗಳು ಶ್ರೇಷ್ಠ ಮಟ್ಟದ್ದಾಗಿವೆ. ಕನಕದಾಸರ ಕೀರ್ತನೆಗಳಂತೂ ಸಮಾಜಕ್ಕೆ ಉತ್ತಮ ಸಂದೇಶ ನೀಡಿವೆ. ಮನುಷ್ಯನಿಗೆ ಹುಟ್ಟಿನಿಂದ ಕುಲ ಬಂದದ್ದಲ್ಲ. ಹುಟ್ಟಿದ ನಂತರ ಇವ ಯಾವ ಕುಲದವ ಎಂದು ಬೇರ್ಪಡಿಸುವ ಹಂತದಲ್ಲಿ ಇಂದಿನ ಸಮಾಜವಿದೆ.
ನಿಸರ್ಗ ಅರ್ಥಾತ್ ಭಗವಂತನ ದೃಷ್ಟಿಯಲ್ಲಿ ಯಾವ ಬೇಧವೂ ಇಲ್ಲ. ನಾವೀಗ ಸ್ವಾರ್ಥಕ್ಕಾಗಿ ಜಾತಿ ಸೃಷ್ಟಿಸಿಕೊಂಡು ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಮಹಾವೀರ ,ಏಸು, ಪೈಗಂಬರ್, ನಾನಕರಂತ ಇನ್ನುಳಿದ ಮಹಾನ್ ಮೇರು ವ್ಯಕ್ತಿತ್ವಗಳನ್ನು ಇಂದಿನ ಆಧುನಿಕ ಸಮಾಜ ಜಾತಿಗೆ ಸೀಮಿತ ಮಾಡುತ್ತಿರುವುದು ಸಮಾಜದ ದುರಂತವೇ ಸರಿ.
ಇಂದಿನ ಯುವ ಪೀಳಿಗೆ ಇಂತಹ ಅಸಮಾನತೆಯ ಮಾರ್ಗ ಇತರೆ ಇದ್ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಗಮನ ಕೊಡದೆ ಆದರ್ಶ ಯಾವುದು ಎಂದರಿತು ಆ ಮಾರ್ಗದಲ್ಲಿ ಸಾಗಬೇಕೆಂದು ಸಲಹೆ ನೀಡಿದರು.
ಕ್ಲಿಕ್ ಮಾಡಿ ಓದಿ: ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು | ಸ್ಥಳದಲ್ಲೇ ಇಬ್ಬರು ಮೃತ
ಈ ಸಂದರ್ಭದಲ್ಲಿ ಶ್ರೀಮಠದ ನೌಕರರು, ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರೀಮಠದ ವಿದ್ಯಾರ್ಥಿಗಳು ವಚನ ತತ್ವಪದಗಳನ್ನು ಹಾಡಿದರು. ವಿಜಯದೇವರು ಸ್ವಾಗತಿಸಿದರು. ಅಧ್ಯಾಪಕ ನವೀನ್ ಮಾಸ್ಕಲ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಧ್ಯಾಪಕ ಎಸ್.ಆನಂದ್ ಶರಣು ಸಮರ್ಪಣೆ ಮಾಡಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
