
CHITRADURGA NEWS | 03 APRIL 2024
ಚಿತ್ರದುರ್ಗ: ಬಸವ ಜಯಂತಿ ಅಂಗವಾಗಿ ಋಷಿ ಸಂಸ್ಕøತಿ ಗುರುಕುಲ ಮಹಾಸಂಸ್ಥಾನ ಮತ್ತು ರಾಜ್ಯ ಶಿಕ್ಷಣ ಪರಿಷತ್ತಿನ ಸಹಯೋಗದಲ್ಲಿ ಮಕ್ಕಳ ಹಬ್ಬ ಹಾಗೂ ಜಿಲ್ಲಾ ಮಟ್ಟದ ಮಕ್ಕಳ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಭರಮಸಾಗರ ತಿಳಿಸಿದ್ದಾರೆ.
5ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ಮಕ್ಕಳು ಕವಿಗೋಷ್ಟಿಯಲ್ಲಿ ಭಾಗವಹಿಸಬಹುದಾಗಿದೆ. ಹಸಿರು ಕರ್ನಾಟಕ, ಅರಣ್ಯ ಅಭಿವೃದ್ಧಿ, ಪರಿಸರ ಪ್ರಾಣಿ ಪಕ್ಷಿ, ಜೀವವೈವಿಧ್ಯ ಅಳಿವು ಉಳಿವು, ಪ್ಲಾಸ್ಟಿಕ್ ನಿμÉೀಧ, ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣ ಈ ವಿಷಯಗಳ ಕುರಿತು ಕವಿತೆಗಳನ್ನು ರಚಿಸಬಹುದು.

ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಗೆ ಎಲ್ಲೋ ಅಲರ್ಟ್ | ತೀವ್ರ ಬಿಸಿಲು, ಬಿಸಿಗಾಳಿಯ ಎಚ್ಚರಿಕೆ | ಸುರಕ್ಷಿತವಾಗಿರಲು ಇಲ್ಲಿವೆ ಸೂಕ್ತ ಸಲಹೆ
ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕುವುದು. ಮೊಬೈಲ್ ಗೀಳಿನಿಂದ ಮಕ್ಕಳು ಹೊರಬಂದು ಬರಹದ ಕಡೆ ಗಮನಕೊಡುವುದನ್ನು ಕಲಿಸುವುದು, ವಿದ್ಯಾರ್ಥಿಗಳು ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆಗಳಲ್ಲಿ ಮಾತನಾಡುವುದನ್ನು ಕಲಿಸುವುದು, ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸುವುದು ನಮ್ಮ ಉದ್ದೇಶ.
ಈ ಹಿನ್ನೆಲೆಯಲ್ಲಿ ಹೊಸ ಕವಿಗಳನ್ನು ಹುಡುಕುವ ಜೊತೆಗೆ ಪೆÇ್ರೀತ್ಸಾಹ ಮಾಡುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಗೀತಾ ಭರಮಸಾಗರ ತಿಳಿಸಿದ್ದಾರೆ.
ಇದನ್ನೂ ಓದಿ: ಮತ್ತಷ್ಟು ಇಳಿಕೆ ಕಂಡ ರಾಶಿ ಅಡಿಕೆ ಬೆಲೆ | ಭೀಮಸಮುದ್ರ ಮಾರುಕಟ್ಟೆಯಲ್ಲಿ ಯಾವ ಅಡಿಕೆ ಬೆಲೆ ಎಷ್ಟಿತ್ತು
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್, ಭಾವಚಿತ್ರ ದೊಂದಿಗೆ ದೂರವಾಣಿ ಸಂಖ್ಯೆ, ಅಂಚೆ ಅಥವಾ ಕೋರಿಯರ್ ಮೂಲಕ ಕೆಳಗಿನ ವಿಳಾಸಕ್ಕೆ ಕವಿತೆಗಳನ್ನು ಕಡ್ಡಾಯವಾಗಿ ಕೈ ಬರಹದಲ್ಲಿ ಬರೆದು ಕಳುಹಿಸಬೇಕು.
ಜೊತೆಗೆ gmail: rushigurukula@gmail.com ಈ ವಿಳಾಸಕ್ಕೆ ಟೈಪ್ ಮಾಡಿ ಮೇಲ್ ಕಳಿಸಿ ಎಂದು ತಿಳಿಸಿದ್ದಾರೆ. ಉತ್ತಮ ಮತ್ತು ಸುಂದರ ಕೈ ಬರಹಕ್ಕೆ ಸೂಕ್ತ ಬಹುಮಾನ ವಿರುತ್ತದೆ.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯ ಗಡಿಭಾಗದಲ್ಲಿ ಮದ್ಯ ಮಾರಾಟ ನಿಷೇಧ
ಕವಿತೆಗಳನ್ನು ಕಳುಹಿಸುವ ವಿಳಾಸ: ಆಡಳಿತಾಧಿಕಾರಿಗಳು, ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನ (ರಿ) ನಂ 315/ಬಿ. ಒಂದನೇ ಅಡ್ಡ ರಸ್ತೆ, ಹತ್ತನೇ ಮುಖ್ಯ ರಸ್ತೆ. ಐಯುಡಿಪಿ ಬಡಾವಣೆ. ಚಿತ್ರದುರ್ಗ. 577501. ಹೆಚ್ಚಿನ ಮಾಹಿತಿಗಾಗಿ: 8073744244. 9113694200 ಸಂಪರ್ಕಿಸಲು ಕೋರಲಾಗಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
